ದಾರಿ ತರ್ಕ: ಘರ್ಷಣೆಯಲ್ಲಿ ನಾಲ್ಕು ಮಂದಿಗೆ ಗಾಯ

ಕುಂಬಳೆ: ದಾರಿ ತರ್ಕದ ಹಿನ್ನೆಲೆಯಲ್ಲಿ ಉಂಟಾದ ಘರ್ಷ ಣೆಯಲ್ಲಿ ಮಹಿಳೆಯರ ಸಹಿತ ನಾಲ್ಕು ಮಂದಿ ಗಾಯಗೊಂಡ ಘಟನೆ ನಡೆದಿದೆ. ಕೊಡ್ಲಮೊಗರು ಪಲ್ಲೆದಪಡ್ಪು ನಿವಾಸಿಗಳಾದ ವಿಶ್ವನಾಥ ಶೆಟ್ಟಿ (65), ಇವರ ಪತ್ನಿ ಶಾರದ (64), ನೆರೆಮನೆ ನಿವಾಸಿಗಳಾದ ಸದಾಶಿವರ ಪತ್ನಿ ಪುಷ್ಪ (54), ನಾರಾಯಣ ಶೆಟ್ಟಿಯವರ ಪತ್ನಿ ಲೀಲ 62) ಎಂಬಿವರು ಗಾಯಗೊಂಡಿದ್ದು, ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಎರಡು ತಂಡಗಳ ಮಧ್ಯೆ ಘರ್ಷಣೆ ನಡೆದಿರುವು ದಾಗಿ ದೂರಲಾಗಿದೆ.

ಯುವತಿಗೆ ಕಿರುಕುಳ ಆರೋಪಿಯ ಪತ್ತೆಗಾಗಿ ಪೊಲೀಸ್ ಶೋಧ

ಕಾಸರಗೋಡು: ಯುವತಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಬಂದಡ್ಕ ಏಣಿಯಾಡಿಯ ಆದಂ ಎಂಬಾತನನ್ನು ಪತ್ತೆಹಚ್ಚಲು ಬೇಡಗಂ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈತ ಬಂದಡ್ಕ ದಲ್ಲಿ ವ್ಯಾಪಾರಿಯಾಗಿದ್ದಾನೆಂದು ಹೇಳಲಾಗುತ್ತಿದೆ. ಅಗೋಸ್ತ್ 15, 16ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ.  ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಸೈಬರ್ ಸೆಲ್‌ನ ಸಹಾಯ ಯಾಚಿಸಿದ್ದಾರೆ.

ಎರಡು ದಿನಗಳಲ್ಲಿ ಮಂಜೇಶ್ವರದಲ್ಲಿ ಒಟ್ಟು 152 ಪವನ್ ಚಿನ್ನಾಭರಣ, 4 ಲಕ್ಷ ರೂ. ವಶ

ಮಂಜೇಶ್ವರ: ಮಂಗಳೂರು ಭಾಗ ದಿಂದ ಕಾಸರಗೋಡಿಗೆ ಅನಧಿಕೃತವಾಗಿ ಚಿನ್ನ ಸಾಗಾಟ ಮತ್ತೆ ತೀವ್ರಗೊಂಡಿದೆ. ಮಂಜೇಶ್ವರ ಅಬ ಕಾರಿ ಚೆಕ್ ಪೋಸ್ಟ್‌ನ ಅಧಿಕಾರಿಗಳು ನಿನ್ನೆ ಹಾಗೂ ಮೊನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 152 ಪವನ್ ಚಿನ್ನವನ್ನು ವಶಪಡಿಸ ಲಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ನಿನ್ನೆ ಸಂಜೆ ಮಂಗಳೂರಿನಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ಬಸ್‌ನಲ್ಲಿ  ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 96 ಪವನ್ (762 ಗ್ರಾಂ) ಚಿನ್ನಾಭರಣ ಗಳನ್ನು ವಶಪಡಿಸಲಾಗಿದೆ.  ಚಿನ್ನ ಸಾಗಿಸುತ್ತಿದ್ದ ಮುಂಬೈ ಸಿಟಿಯ ತವಕ್ಕಲ್ ಬಿಲ್ಡಿಂಗ್‌ನಲ್ಲಿ …

ಕರ್ನಾಟಕದ ಬಾಲಕನನ್ನು ಕುತ್ತಿಗೆ ಹಿಚುಕಿ ಕೊಂದ ಪ್ರಕರಣ: ಜಾಮೀನಿನಲ್ಲಿ ಬಿಡುಗಡೆಗೊಂಡು ತಲೆಮರೆಸಿಕೊಂಡ ಆರೋಪಿ 13 ವರ್ಷಗಳ ಬಳಿಕ ಸೆರೆ

ಕಾಸರಗೋಡು:  ಕರ್ನಾಟಕ ನಿವಾಸಿಯಾದ ಹತ್ತರ ಹರೆಯ ಬಾಲಕನನ್ನು ಕುತ್ತಿಗೆ ಹಿಚುಕಿ ಕೊಲೆಗೈದ ಪ್ರಕರಣದಲ್ಲಿ ಬಂಧಿತನಾಗಿ ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು 13 ವರ್ಷಗಳ ಬಳಿಕ ನಂತರ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಭಾಗಪ್ಪ ಜುವಲ್ ಪಾಳಿಯ ನಿವಾಸಿ ಸಹೀರ್ ಅಹಮ್ಮದ್ (48) ಬಂಧಿತ ಆರೋಪಿ. ನಂತರ ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಕರ್ನಾಟಕದಿಂದ ಹೂ ಮಾರಾಟಕ್ಕಾಗಿ ಹೊಸದುರ್ಗಕ್ಕೆ ಬಂದು ಹೊಸದುರ್ಗದ ವಸತಿಗೃಹವೊಂದರಲ್ಲಿ ವಾಸಿಸುತ್ತಿದ್ದ ಕುಟುಂಬದ ಹತ್ತು ವರ್ಷ ಪ್ರಾಯದ  ಸುನಿಲ್ ಎಂಬ ಹೆಸರಿನ ಬಾಲಕನನ್ನು ಆ ವಸತಿ …

ಪೆರಿಯದಲ್ಲಿ ಮತ್ತೆ ಚಿರತೆ ಭೀತಿ: ಜಾಗ್ರತಾ ನಿರ್ದೇಶ

ಕಾಸರಗೋಡು: ಪೆರಿಯ ಕೇಂದ್ರ ವಿಶ್ವವಿದ್ಯಾಲಯ ಸಮೀಪ ಮತ್ತೆ ಚಿರತೆಯ ಭೀತಿ ಉಂಟಾಗಿದೆ.  ಇಲ್ಲಿನ ತನ್ನೋಟ್ ಭಾಗದಲ್ಲಿ ಚಿರತೆ ಕಂಡುಬಂದಿರುವುದಾಗಿ ತಿಳಿದುಬಂದಿದೆ.  ವಿಷಯ ತಿಳಿದು ಆರ್‌ಆರ್‌ಟಿ ಸ್ಥಳಕ್ಕೆ ತಲುಪಿ ಶೋಧ ನಡೆಸಿದೆ  ಈ ವೇಳೆ ಚಿರತೆಯ ಕಾಲಿನ ಹೆಜ್ಜೆಗಳ ಗುರುತು ಕಂಡುಬಂದಿದೆ.  ಚಿರತೆ ಈ ಭಾಗಕ್ಕೆ ತಲುಪಿರುವುದಾಗಿ ಸೂಚನೆ ಲಭಿಸಿದ ಹಿನ್ನೆಲೆಯಲ್ಲಿ  ಇಲ್ಲಿ ಕ್ಯಾಮರಾ ಸ್ಥಾಪಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದೇ ವೇಳೆ  ಜಾಗ್ರತೆ ವಹಿಸುವಂತೆಯೂ ಅಧಿಕಾರಿಗಳು ಜನರಿಗೆ ಕರೆ ನೀಡಿದ್ದಾರೆ.

ಮರಗಳಿಗೆ ತಾಗಿಕೊಂಡು ವಿದ್ಯುತ್ ತಂತಿಗಳು: ಕುಂಬಳೆ ಪೇಟೆಯಲ್ಲಿ ಅಪಾಯಭೀತಿ

ಕುಂಬಳೆ: ಕುಂಬಳೆ ಪೇಟೆ ಮಧ್ಯದಲ್ಲೇ ಅಪಾಯಕ್ಕೆ ಕಾರಣವಾಗುವ ಮರಗಳು ಹಾಗೂ ವಿದ್ಯುತ್ ತಂತಿಗಳಿದ್ದರೂ ಸಂಬಂಧಪಟ್ಟ ಅಧಿಕಾರಿಗಳ್ಯಾರೂ ಅತ್ತ ಕಣ್ಣುಹಾಯಿಸುತ್ತಿಲ್ಲವೆಂಬ ಆರೋಪ ಕೇಳಿಬರುತ್ತಿದೆ. ಕುಂಬಳೆ ಪೇಟೆಯ ಆಟೋ ಸ್ಟಾಂಡ್‌ನ ಹಿಂಭಾಗದಲ್ಲಿ  ಕಾಲುದಾರಿಯಿದ್ದು, ಅದರ ಪಕ್ಕದಲ್ಲೇ ಎರಡು ಮರಗಳಿವೆ. ಆ ಮರಗಳಿಗೆ ಸ್ಪರ್ಶಿಸಿಕೊಂಡು ಎಚ್‌ಟಿ ವಿದ್ಯುತ್ ಲೈನ್ ಹಾದುಹೋಗಿದೆ. ಶಾಲಾ ವಿದ್ಯಾರ್ಥಿಗಳ ಸಹಿತ ಹಲವಾರು ಮಂದಿ ಈ ದಾರಿಯಲ್ಲಿ  ಪ್ರತಿದಿನ ನಡೆದಾಡುತ್ತಿದ್ದು ಇವರು ಆತಂಕಪಡಬೇಕಾಗಿ ಬರುತ್ತಿದೆ.  ಗಾಳಿ ಬೀಸುವ ವೇಳೆ ಮರದ ರೆಂಬೆಗಳು ವಿದ್ಯುತ್ ತಂತಿಗೆ ಸ್ಪರ್ಶಿಸುತ್ತಿರುವು ದಾಗಿಯೂ ಇದರಿಂದ …

ಸಿ.ಎನ್.ಜಿ ಅನಿಲ ಸಾಗಿಸುವ ವೇಳೆ ಸೋರಿಕೆ: ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆಯಿಂದ ತಪ್ಪಿದ ಅನಾಹುತ

ಕಾಸರಗೋಡು: ಲಾರಿಯಲ್ಲಿ ಸಿಎನ್‌ಜಿ ಅನಿಲ ಸಿಲಿಂಡರ್‌ಗಳನ್ನು ಹೇರಿ ಸಾಗಿಸುತ್ತಿದ್ದ ವೇಳೆ ಆಂತರಿಕ ಒತ್ತಡದಿಂದಾಗಿ ಅದರಲ್ಲಿ ಎರಡು ಸಿಲಿಂಡರ್‌ಗಳ ಫಿಲ್ಲಿಂಗ್ ಪೈಪ್‌ನ ವಾಷರ್ ಸಡಿಲುಗೊಂಡು ಹೊರಕ್ಕೆ ಬಂದು ಅದರಿಂದ ಅನಿಲ ಸೋರಿಕೆ ಉಂಟಾಗಿ ಅಗ್ನಿಶಾಮಕ ದಳದವರು ನಡೆಸಿದ ಸಕಾಲಿಕ ಕಾರ್ಯಾಚರಣೆಯಿಂದ ಸಂಭಾವ್ಯ ಅನಾಹುತ ತಪ್ಪಿಹೋದ ಘಟನೆ ನಡೆದಿದೆ. ಅದಾನಿ ಗ್ರೂಪ್‌ನ ಸಿಎನ್‌ಜಿ ಅನಿಲ ತುಂಬಿಸಲಾದ ಸಿಲಿಂಡರ್‌ಗಳನ್ನು ಲಾರಿಯಲ್ಲಿ ಹೊಸದುರ್ಗ ಮಾವುಂಗಾಲ್‌ನಿಂದ ಕಾಸರಗೋಡಿಗೆ ಸಾಗಿಸುತ್ತಿದ್ದ ದಾರಿ ಮಧ್ಯೆ ತೃಕ್ಕನ್ನಾಡ್ ಶಾಲೆ ಬಳಿ ತಲುಪಿದಾಗ ಅದರಲ್ಲಿ ಎರಡು ಸಿಲಿಂಡರ್‌ಗಳಲ್ಲಿ ಅನಿಲ ಸೋರಿಕೆ …

ಕಾರುಣ್ಯ ಲಾಟರಿ: ಮಧು ಲಾಟರಿ ಏಜೆನ್ಸೀಸ್ ಮಾರಾಟಗೈದ ಟಿಕೆಟ್‌ಗೆ 1 ಕೋಟಿ ರೂ. ಬಹುಮಾನ

ಕಾಸರಗೋಡು: ಕಳೆದ ಶನಿವಾರ ನಡೆದ ಕಾರುಣ್ಯ ಲಾಟರಿ ಡ್ರಾದಲ್ಲಿ ಕಾಸರಗೋಡಿನ ಮಧು ಲಾಟರಿ ಮಾರಾಟಗೈದ ಟಿಕೆಟ್‌ಗೆ ಪ್ರಥಮ ಬಹುಮಾನವಾದ 1 ಕೋಟಿ ರೂಪಾಯಿ ಲಭಿಸಿದೆ. ಕಾಸರಗೋಡು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯ ಮಧು ಲಾಟರಿ ಏಜೆನ್ಸಿಸ್ ಮಾರಾಟಗೈದ  ಕೆ.ಝಡ್ 445643 ನಂಬ್ರದ ಟಿಕೆಟ್‌ಗೆ ಈ ಬಹುಮಾನ ಲಭಿಸಿದೆ. ಈ ಹಿಂದೆಯೂ ಹಲವು ಮಂದಿ ಮಧು ಲಾಟರಿ ಏಜೆನ್ಸೀಸ್‌ನಿಂದ ಲಾಟರಿ ಟಿಕೆಟ್ ಖರೀದಿಸಿ ಲಕ್ಷಾಧಿಪತಿಗಳಾಗಿದ್ದಾರೆ.

ಬಸ್ ನೌಕರರ ಸಮಸ್ಯೆಗಳಿಗೆ ಪರಿಹಾರ ಕ್ರಮ ಕೈಗೊಳ್ಳಬೇಕು-ಬಿಎಂಎಸ್

ಕಾಸರಗೋಡು: ಕೋವಿಡ್ ಮಹಾಮಾರಿ ಬಳಿಕ ಕಾರ್ಮಿಕ ವಲಯದಲ್ಲಿ ಅತೀ ಹೆಚ್ಚು ಸಂದಿಗ್ಧತೆ ಎದುರಿಸಬೇಕಾಗಿ ಬಂದಿರುವುದು ಬಸ್ ನೌಕರರಾಗಿದ್ದಾರೆ. ಆದ್ದರಿಂದ ಬಸ್ ನೌಕರರು ಎದುರಿಸುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಬೇಕೆಂದು ಕಾಸರಗೋಡು ಬಿಎಂಎಸ್ ಕಚೇರಿಯಲ್ಲಿ ನಡೆದ ಬಸ್ ಆಂಡ್ ಹೆವಿ ವೆಹಿಕಲ್ ಮಜ್ದೂರ್ ಸಂಘದ ವಾರ್ಷಿಕ ಸಮ್ಮೇಳನ ಒತ್ತಾಯಿಸಿದೆ. ಕೋವಿಡ್‌ನ ಬಳಿಕ ಸಾವಿರಾರು ಮಂದಿ ಬಸ್ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಕಾರ್ಮಿಕರು ಕಾರಣವಲ್ಲದಿದ್ದರೂ ಅವರ ವಿರುದ್ಧ ಕೇಸು ದಾಖಲಿಸುವಂತಹ ಘಟನೆಗಳು ನಡೆಯುತಿದೆಯೆಂದು ಸಮ್ಮೇಳನ ತಿಳಿಸಿದೆ. ಪಿಸಿಸಿ ಸರ್ಟಿಫಿಕೇಟ್ ಕಡ್ಡಾಯಗೊಳಿಸಕೂಡದೆಂದು …

ಹಿರಿಯರ ಕನಸುಗಳಿಗೆ ತಣ್ಣೀರೆರಚಿದ ಛಿದ್ರ ಶಕ್ತಿಗಳ ವಿರುದ್ಧ ಕಾಂಗ್ರೆಸ್ ಹೋರಾಟ- ರಮಾನಾಥ ರೈ

ಉಪ್ಪಳ: ವಿದೇಶಿ ಗುಲಾಮಗಿರಿ ಯಿಂದ ದೇಶವನ್ನು ಸ್ವತಂತ್ರಗೊಳಿಸಿದ ತ್ಯಾಗಮಯಿ ಕಾಂಗ್ರೆಸ್ ನಾಯಕರು ಕಂಡ ಶಾಂತ ಸುಂದರ ಭಾರತದ ಕನಸನ್ನು ಭಗ್ನಗೊಳಿಸಿದ ಮತೀಯ ಶಕ್ತಿಗಳ ವಿರುದ್ಧ ನೈಜ ದೇಶಪ್ರೇಮಿಗಳಾದ ಕಾಂಗ್ರೆಸಿಗರು ಸಂಧಿಯಿಲ್ಲದ ಹೋರಾಟ ನಡೆಸುವ ಮೂಲಕ ದೇಶದಲ್ಲಿ ಶಾಂತಿ ಮತ್ತು ನೆಮ್ಮದಿ ನೆಲೆಗೊಳಿಸಲು ಶ್ರಮಿಸಬೇಕಿದೆ. ಇದರ ಜೊತೆಗೆ ಮಾದಕ ದ್ರವ್ಯ ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ಧವೂ ಹೋರಾಟ ನಡೆÀಸಬೇಕು ಎಂದು ಕರ್ನಾಟಕದ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷರಾದ ಬಿ.ರಮಾನಾಥ ರೈ ಕರೆ ನೀಡಿದ್ದಾರೆ. ಅವರು ಮಂಗಲ್ಪಾಡಿ ಮಂಡಲ ಕಾಂಗ್ರೆಸ್ ಸಮಿತಿ …