ಉಪಯೋಗಶೂನ್ಯ ಕುಕ್ಕಾರು ಶಾಲಾ ಹಳೆ ಕಟ್ಟಡವನ್ನು ತೆರವುಗೊಳಿಸಲು ಒತ್ತಾಯ

ಉಪ್ಪಳ: ಮಂಗಲ್ಪಾಡಿ ಕುಕ್ಕಾರುನಲ್ಲಿರುವ ಸರಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆಯ ಪರಿಸರದಲ್ಲಿರುವ ಹಳೇ ಕಟ್ಟಡವನ್ನು ತೆರವುಗೊಳಿಸಲು ಊರವರು ಒತ್ತಾಯಿಸಿದ್ದಾರೆ. ನೂರು ವರ್ಷಗಳ ಇತಿಹಾಸವಿರುವ ಈ ಕಟ್ಟಡ ವಿದ್ಯಾರ್ಥಿಗಳಿಗೆ ಹಾಗೂ ಸ್ಥಳೀ ಯರಿಗೆ ಅಪಾಯಕಾರಿಯಾಗಿದೆ. ಈ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಹೈಯರ್ ಸೆಕಂಡರಿ ತರಗತಿಯನ್ನು ಮಂಗಲ್ಪಾಡಿ ಪ್ಲಸ್-ಟು ಬ್ಲೋಕ್ ಕಟ್ಟಡದ ಬಳಿಯಲ್ಲಿರುವ ಹೊಸಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಈಗ ಇಲ್ಲಿ ಒಂದರಿAದ ನಾಲ್ಕನೇ ತರಗತಿ ತನಕ ಮಾತ್ರವಿದೆ. ಇದರ ಪರಿಸರದಲ್ಲಿರುವ ಹಳೆಯ ಕಟ್ಟಡಗಳು ಶೋಚನೀಯÁ ವಸ್ಥೆಯಿಂದ ಮುರಿದು ಬೀಳುತ್ತಿದೆ. ಕಾಡು ಪೊದೆಗಳು ತುಂಬಿ …

ರಾಹುಲ್‌ಗಾಂಧಿ ಬಂಧನ: ಪೈವಳಿಕೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಪೈವಳಿಕೆ: ನವದೆಹಲಿಯಲ್ಲಿ ನೀಟ್ ಪರೀಕ್ಷಾ ಅಕ್ರಮದ ವಿರುದ್ಧ ಮುಷ್ಕರ ನಿರತರಾದ ವಿದ್ಯಾರ್ಥಿಗಳ ಮೇಲೆ ಕೇಂದ್ರ ಸರಕಾರ ಪೊಲೀಸ್‌ರನ್ನು ಉಪಯೋಗಿಸಿ ನಡೆಸಿದ ಹಲ್ಲೆಯನ್ನು ಪ್ರತಿಭಟಿಸಿದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ , ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಗಾಂಧಿ, ಕೆ.ಸಿ. ವೇಣುಗೋಪಾಲ್ ಮೊದಲಾದವರ ಬಂಧನವನ್ನು ಪ್ರತಿಭಟಿಸಿ ಪೈವಳಿಕೆ ಮಂಡಲ ಕಾಂಗ್ರೆಸ್ ಸಮಿತಿಯ ವತಿಯಿಂದ ಪೈವಳಿಕೆಯಲ್ಲಿ ಪ್ರತಿಭಟನಾ ಜಾಥ ಹಾಗೂ ಧರಣಿ ನಡೆಸಲಾಯಿತು. ಮಂಡಲ ಅಧ್ಯಕ್ಷ ವಸಂತ ಕುಮಾರ್ ಉದ್ಘಾಟಿಸಿದರು. ಪೈವಳಿಕೆ ಪಂಚಾಯತ್ ಉಪಾಧ್ಯಕ್ಷ ರಾಘವೇಂದ್ರ ಭಟ್, ಸ್ಥಾಯೀ ಸಮಿತಿ ಅಧ್ಯಕ್ಷ …

ಹೆಣ್ಮಕ್ಕಳ ಚಿತ್ರ ಮೋರ್ಫ್ ಮಾಡಿ ಅಶ್ಲೀಲ ಸೈಟ್‌ಗಳಲ್ಲಿ ಪ್ರಚಾರ: ಎಂಬಿಬಿಎಸ್ ವಿದ್ಯಾರ್ಥಿ ಸೆರೆ

ತಿರುವನಂತಪುರ: ಹೆಣ್ಮಕ್ಕಳ ಚಿತ್ರವನ್ನು ಮೋರ್ಫ್ ಮಾಡಿ ಪ್ರಚಾರಪಡಿಸಿದ ಎಂಬಿಬಿಎಸ್ ವಿದ್ಯಾರ್ಥಿ ಸೆರೆಯಾಗಿದ್ದಾನೆ. ತಿರುವನಂತಪುರ ಮೆಡಿಕಲ್ ಕಾಲೇಜಿನ ತೃತೀಯ ವರ್ಷ ವಿದ್ಯಾರ್ಥಿ ಹಾಗೂ ವಯನಾಡ್ ಕಾಕವಯಲ್ ನಿವಾಸಿಯಾದ ಏಬಲ್ ಸೆರೆಯಾದ ವಿದ್ಯಾರ್ಥಿ. 13ರಷ್ಟು ಸೀನಿಯರ್ ವಿದ್ಯಾರ್ಥಿಗಳ ಚಿತ್ರಗಳನ್ನು ಈತ ಮೋರ್ಫ್ ಮಾಡಿ ಸಾಮಾಜಿಕ ಜಾಲತಾಣಗಳ ಅಶ್ಲೀಲ ಸೈಟ್‌ಗಳಲ್ಲಿ ಪ್ರಚಾರಪಡಿಸಿದ್ದನೆಂದು ವಿದ್ಯಾರ್ಥಿನಿಯರು ದೂರಿದ್ದರು. ಇತ್ತೀಚೆಗೆ ಕೆಲವು ದೃಶ್ಯಗಳು ವಿದ್ಯಾರ್ಥಿನಿಯರ ಗಮನಕ್ಕೆ ಬಂದಿತ್ತು. ಬಳಿಕ ಪರಿಶೀಲಿಸಿದಾಗ ಇನ್ನಷ್ಟು ಹೆಣ್ಣುಮಕ್ಕಳ ಚಿತ್ರಗಳನ್ನು ಈ ರೀತಿ ಪ್ರಚಾರ ಪಡಿಸಿರುವುದಾಗಿ ಪತ್ತೆಹಚ್ಚಲಾಗಿತ್ತು. ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ …

ಸೇವಾಭಾರತಿ ತಿಂಗಳ ಸಭೆ ಉದಯ ಕುಮಾರ್ ಶೆಟ್ಟಿಗೆ ಗೌರವ

ಉಪ್ಪಳ: ಸೇವಾ ಭಾರತಿ ಮಂ ಗಲ್ಪಾಡಿ ಇದರ ತಿಂಗಳ ಸಭೆ ಐಲದಲ್ಲಿ ನಡೆಯಿತು. ಎರ್ನಾಕುಳಂನಲ್ಲಿ ನಡೆದ ರಾಜ್ಯ ಮಟ್ಟದ ಸುಕೃತ ಸಂಗಮA ಕಾರ್ಯಕ್ರಮದ ಬಗ್ಗೆ ಸಭೆಯಲ್ಲಿ ತಿಳಿಸಲಾಯಿತು. ಇದೇ ಸಂದರ್ಭದಲ್ಲಿ ದೇರಂಬಳ ಹೊಳೆಗೆ ಬಿದ್ದ ಯುವತಿಯನ್ನು ರಕ್ಷಿಸಿದ ಉದಯ ಕುಮಾರ ಶೆಟ್ಟಿ ದೇರಂಬಳ ಇವರ ಸಾಹಸ ಪ್ರವೃತ್ತಿಯನ್ನು ಮೆಚ್ಚಿ ಗೌರವಿಸಲಾಯಿತು. ಸೇವಾ ಭಾರತಿ ಮಂಗಲ್ಪಾಡಿಯ ಅಧ್ಯಕ್ಷ ರಘು ಸಿ. ಅಧ್ಯಕ್ಷತೆ ವಹಿಸಿದ್ದರು. ಧಾರ್ಮಿಕ, ಸಾಮಾಜಿಕ ಮುಂದಾಳು ವೀರಪ್ಪ ಅಂಬಾರು ಮಾತನಾಡಿದರು. ದೇರಂಬಳ ಹೊಳೆಯ ಸೇತುವೆಯನ್ನು ಶೀಘ್ರ ಪುನರ್ನಿರ್ಮಾಣ …

ಏಕ ಪುತ್ರನ ಅಕಾಲಿಕ ನಿಧನ ಮನೋವೇದನೆಯಿಂದ ಹೆತ್ತವರು ಆತ್ಮಹತ್ಯೆ

ಕೊಚ್ಚಿ: ಪುತ್ರನ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಮನೋವೇದನೆ ಅನುಭವಿಸುತ್ತಿದ್ದ ದಂಪತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ವೈಪಿನ್ ನರೈಕಲ್ ಕಳತ್ತಿಪರಂಬ್ ನಿವಾಸಿಗಳಾದ ಸಂಜೀವ್ (70), ಪತ್ನಿ ಸಬಿತ (60) ಎಂಬಿವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದರು. ನಿನ್ನೆ ಬೆಳಿಗ್ಗೆ ಮನೆಯ ಮುಂಭಾಗದಲ್ಲಿರುವ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇವರನ್ನು ಪತ್ತೆಹಚ್ಚಲಾಗಿದೆ. ಬೆಳಿಗ್ಗೆ 9 ಗಂಟೆಗೆ ಮನೆಗೆ ತಲುಪುವುದಾಗಿ ಸಂಜೀವ ಸಹೋದರನಿಗೆ ಕರೆ ಮಾಡಿ ತಿಳಿಸಿದ್ದರು. ಆದರೆ ಮನೆಗೆ ಬಾರದ ಹಿನ್ನೆಲೆಯಲ್ಲಿ ಬೆಳಿಗ್ಗೆ ಫೋನ್ ಮೂಲಕ ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಈ …

ರೈತಸಂಘದಿಂದ ಮೀಯಪದವಿನಲ್ಲಿ ಪ್ರತಿಭಟನೆ

ಉಪ್ಪಳ: ಕೇಂದ್ರ ಸರಕಾರದ ರೈತ ವಿರೊಧಿ ನೀತಿಗೆದುರಾಗಿ ಹಾಗೂ ರಸಗೊಬ್ಬರದ ಬೆಲೆಯೇರಿಕೆಗೆದುರಾಗಿ, ಅಮೇರಿಕಾದೊಂದಿಗೆ ಮಾಡಿದ ಜನವಿರೋಧಿ ಒಪ್ಪಂದಕ್ಕೆದುರಾಗಿ ರೈತ ಸಂಘದ ಮಂಜೇಶ್ವರ ಏರಿಯಾ ಸಮಿತಿ ನೇತೃತ್ವದಲ್ಲಿ ಮೀಯಪದವಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. ರಾಜ್ಯ ಸಮಿತಿ ಸದಸ್ಯ ಕೆ.ಆರ್ ಜಯಾನಂದ ಉದ್ಘಾಟಿಸಿದರು. ಏರಿಯಾ ಸಮಿತಿ ಅಧ್ಯಕ್ಷ ಬಿ.ಎಂ ಕರುಣಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಏರಿಯಾ ಕಾರ್ಯದರ್ಶಿ ಅಶೋಕ ಭಂಡಾರಿ ಸ್ವಾಗತಿಸಿದರು. ಹುಸೈನ್ ಮಾಸ್ತರ್, ಪ್ರಭಾಕರ ಶೆಟ್ಟಿ, ಸದಾನಂದ ಕೋರಿಕ್ಕಾರ್, ಚಂದ್ರಾವತಿ ಕುಳೂರು, ಲೋಕೇಶ, ಉಮೇಶ್ ಶೆಟ್ಟಿ, ನೇತೃತ್ವ ನೀಡಿದರು.

ಡಾ. ಕಯ್ಯಾರ ಕಿಂಞಣ್ಣ ರೈ ಸ್ಮಾರಕ ಕನ್ನಡಭವನ ಉದ್ಘಾಟನೆ ಬಗ್ಗೆ  ತೀರ್ಮಾನಿಸಲು ಗಡಿ ಪ್ರಾಧಿಕಾರ ಪದಾಧಿಕಾರಿಗಳಿಂದ ಮುಖ್ಯಮಂತ್ರಿ ಭೇಟಿ: ಕನ್ನಡಿಗರ ಸಮಸ್ಯೆ ಪರಿಹಾರಕ್ಕೆ ಮನವಿ

ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅನುದಾನದಿಂದ ಡಾ. ಕಯ್ಯಾರ ಕಿಂಞಣ್ಣ ರೈಯವರ ಹೆಸರಲ್ಲಿ ಬದಿಯಡ್ಕದಲ್ಲಿ ನಿರ್ಮಿಸಲಾದ ಕನ್ನಡ ಭವನ ಉದ್ಘಾಟನೆಗೆ ಕೇರಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲು ಗಡಿ ಪ್ರಾಧಿಕಾರದ ಪದಾಧಿಕಾರಿಗಳು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದಾರೆ. ಇದೇ ವೇಳೆ ಕಾಸರಗೋಡಿನ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪರಿಹಾರ ಕೈಗೊಳ್ಳಲು ಮುಖ್ಯಮಂತ್ರಿಗೆ ಮನವಿ ನೀಡಲಾಯಿತು. ಕಿಂಞಣ್ಣ ರೈಯವರ ಹೆಸರಲ್ಲಿ ಬದಿಯಡ್ಕದಲ್ಲಿ ನಿರ್ಮಿಸಲಾದ ಕನ್ನಡ ಭವನ ಉದ್ಘಾಟನೆ ದಿನಾಂಕ ನಿಗದಿಪಡಿಸಲು ಕರ್ನಾಟಕ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ತೀರ್ಮಾನಿಸುವುದಾಗಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ತಂಡಕ್ಕೆ …

ಉಪ್ಪಳ ನಿವಾಸಿಯನ್ನು ಅಪಹರಿಸಿ ಕೊಲೆಗೈದ ಪ್ರಕರಣ: 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ  ಕಣ್ಣೂರಿನಿಂದ ಬಂಧನ

ಕುಂಬಳೆ: ಉಪ್ಪಳ ಬಳಿಯ ಸೋಂಕಾಲ್ ನಿವಾಸಿಯನ್ನು ಮನೆಯಿಂದ ಅಪಹರಿಸಿಕೊಂ ಡೊಯ್ದು ಗಂಭೀರ ಹಲ್ಲೆ ನಡೆಸಿ ಕೊಲೆಗೈದ ಪ್ರಕರಣದಲ್ಲಿ ಕಳೆದ ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಮಂಗಲ್ಪಾಡಿ ಪೆರಿಂಗಡಿ ಪಳ್ಳಿ ಹೌಸ್‌ನ ಅಬ್ದುಲ್ ರುಮೀದ್ (29)ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಗಲ್ಫ್‌ಗೆ ಪರಾರಿಯಾಗಿದ್ದ ಈತ ನಿನ್ನೆ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು, ಈ ವೇಳೆ ವಿಮಾನ ನಿಲ್ದಾಣ ಅಧಿಕಾರಿಗಳು ತಡೆದು ನಿಲ್ಲಿಸಿ ಕುಂಬಳೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರಂತೆ  ಕುಂಬಳೆ ಪೊಲೀಸ್ ಇನ್‌ಸ್ಪೆಕ್ಟರ್ ಬೈಜು ಕೆ ಜೋಸ್ ನೇತೃತ್ವದಲ್ಲಿ  …

ಉದ್ಯಾವರದಲ್ಲಿ ಭಂಡಾರ ಮನೆಯಿಂದ ಕಳವು: ಸಿಸಿ ಟಿವಿಯಲ್ಲಿ ವ್ಯಕ್ತಿಯ ದೃಶ್ಯ ಪತ್ತೆ

ಮಂಜೇಶ್ವರ: ಉದ್ಯಾವರ ಮಾಡದಲ್ಲಿರುವ ಶ್ರೀ ಅರಸುಕೃಪಾ ಜೈ ವೀರ ಮಾರುತಿ ವ್ಯಾಯಾಮ ಶಾಲೆಯಿಂದ ಕಾಣಿಕೆ ಹಣ ಕಳವಿಗೀ ಡಾದ ಪ್ರಕರಣದಲ್ಲಿ ಪೊಲೀಸರು ತನಿಖೆ ತೀವ್ರಗೊಳಿಸಿರುವಾಗಲೇ ಇನ್ನೊಂದು ಕಳವು ಬಗ್ಗೆ ದೂರು ನೀಡಲಾಗಿದೆ. ಉದ್ಯಾವರ ಮಾಡ ಶ್ರೀ ಭಗವತೀ ಭಂಡಾರಮನೆಯಿಂದ ಕಳವು ನಡೆದಿರುವುದಾಗಿ ಮಂಜೇಶ್ವರ ಪೊಲೀಸರಿಗೆ ದೂರು ಲಭಿಸಿದೆ.  ಭಂಡಾರಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕಪಾಟಿನಲ್ಲಿರಿಸಿದ್ದ ಸುಮಾರು 3000 ರೂಪಾಯಿಗಳ ವಿವಿಧ ವಸ್ತುಗಳನ್ನು ದೋಚಿರುವುದಾಗಿ ಭಂಡಾರಮನೆಯ ಪದಾಧಿಕಾರಿಗಳು ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ತಿಂಗಳ ೧೬ರಂದು ಭಂಡಾರಮನೆಗೆ …

ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ಆಟೋರಿಕ್ಷಾ ಮಗುಚಿ 8 ಮಂದಿಗೆ ಗಾಯ

ಕಾಸರಗೋಡು: ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ಆಟೋರಿಕ್ಷಾ ನಿಯಂತ್ರಣ ತಪ್ಪಿ ಮಗುಚಿದೆ ೭ ವಿದ್ಯಾರ್ಥಿಗಳು ಹಾಗೂ ಚಾಲಕ ಗಾಯಗೊಂಡಿದ್ದಾರೆ. ಇವರನ್ನು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ 9.45ರ ವೇಳೆ ಕಾಸರಗೋಡು ನಗರದ ಎಂ.ಜಿ ರಸ್ತೆಯ ಫೋರ್ಟ್ ರೋಡ್ ಜಂಕ್ಷನ್‌ನಲ್ಲಿ ಅಪಘಾತ ಸಂಭವಿಸಿದೆ. ಮೆಡೋನ್ಹಾ ಶಾಲೆಯ ವಿದ್ಯಾರ್ಥಿಗಳಾದ ಆರಾಧ್ಯ (12), ಅಥರ್ವ (6), ಅರ್ವಿನ್ (7), ನಗರಸಭಾ ಸರಕಾರಿ ಯುಪಿ ಶಾಲೆಯ ಮರಿಯಂ (10), ದೀಪ್ನ (12), ಅನಶ್ವರ (10), ಇಯಾನ್ ಸುನಿಲ್ (6) ಹಾಗೂ ಚಾಲಕ ಉಮೇಶ್‌ರಿಗೂ …