ಕಾರು ಢಿಕ್ಕಿ ಹೊಡೆದು ಮೀನು ಮಾರಾಟಗಾರನಿಗೆ ಗಂಭೀರ

ಕುಂಬಳೆ: ಕಾರು ಢಿಕ್ಕಿ ಹೊಡೆದು ಮೀನು ಮಾರಾಟಗಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಬಂದ್ಯೋಡು ಅಡ್ಕದ ಸಲೀಂ (46) ಎಂಬವರು ಗಾಯಗೊಂಡಿದ್ದು, ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರು ಸ್ಕೂಟರ್‌ನಲ್ಲಿ ಮೀನು ಕೊಂಡೊಯ್ದು ಮಾರಾಟ ನಡೆಸುತ್ತಿದ್ದಾರೆ. ಇದರಂತೆ ನಿನ್ನೆಯೂ ಮೀನು ಸಾಗಾಟ ನಡೆಸುತ್ತಿದ್ದಾಗ ಆಗಮಿಸಿದ ಕಾರು ಇವರಿಗೆ ಢಿಕ್ಕಿ ಹೊಡೆದಿದೆ. ಕಾರು ಅಪರಿಮಿತ ವೇಗದಲ್ಲಿ ಸಂಚರಿಸುತ್ತಿತ್ತೆಂದು ಪ್ರತ್ಯಕ್ಷದರ್ಶಿಗಳು ತಿಳಿಸುತ್ತಿದ್ದಾರೆ. ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಸಲೀಂರನ್ನು ಅದೇ ಕಾರಿನಲ್ಲಿ ಆಸ್ಪತ್ರೆಗೆ ತಲುಪಿಸಿರುವು ದಾಗಿಯೂ  ತಿಳಿಸಲಾಗಿದೆ.

ವಸತಿಗೃಹದಲ್ಲಿ ಗೆಳತಿಯ ಜೊತೆ ಯುವಕನ ನಗ್ನಚಿತ್ರ ತೆಗೆದು ಬೆದರಿಕೆ: ಫೋನ್, ನಗದು ಅಪಹರಿಸಿದ 3 ಮಂದಿ ವಿರುದ್ಧ ಕೇಸು

ಹೊಸಂಗಡಿ: ಇಲ್ಲಿನ ವಸತಿಗೃಹದ ಕೊಠಡಿಯಲ್ಲಿ ಅತಿಕ್ರಮಿಸಿ ನುಗ್ಗಿ ಯುವಕ ಹಾಗೂ ಮಹಿಳೆಯನ್ನು ಜೊತೆಗೆ ನಿಲ್ಲಿಸಿ ನಗ್ನಚಿತ್ರ ತೆಗೆದು ಬೆದರಿಕೆಯೊಡ್ಡಿ ಫೋನ್ ಹಾಗೂ ಹಣವನ್ನು ಅಪಹರಿಸಿರುವುದಾಗಿ ದೂರಲಾಗಿದೆ. ಉಳ್ಳಾಲ ಮೋಂಟುಗೋಳಿಯ ಮುಹಮ್ಮದ್  ಹನೀಫ್ (41)ನ ದೂರಿನಂತೆ ಮೂರು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ಬುಧವಾರ ಮಧ್ಯಾಹ್ನ ೧೨ ಗಂಟೆಗೆ ಘಟನೆ ನಡೆದಿದೆ. ಗೆಳತಿಯೊಂದಿಗೆ ದೂರುದಾತ ವಸತಿಗೃಹದಲ್ಲಿ ಕೊಠಡಿ ತೆಗೆದಿದ್ದನು. ಈ ಸಮಯದಲ್ಲಿ ಮೂರು ಮಂದಿಯ ತಂಡ ಕೊಠಡಿಗೆ ನುಗ್ಗಿ ಯುವತಿ ಹಾಗೂ ಯುವಕನನ್ನು ಮಂಚದಲ್ಲಿ ಜೊತೆಗೆ …

ವಿದ್ಯುತ್ ತಂತಿ, ಮರ ದೇಹದ ಮೇಲೆ ಬಿದ್ದು ಗಾಯಗೊಂಡ ವಲಸೆ ಕಾರ್ಮಿಕ ಮೃತ್ಯು

ಮಂಜೇಶ್ವರ: ವಿದ್ಯುತ್ ತಂತಿ ಹಾಗೂ ಮರ ತುಂಡಾಗಿ ದೇಹದ ಮೇಲೆ ಬಿದ್ದು ಗಾಯಗೊಂಡು ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ವಲಸೆ ಕಾರ್ಮಿಕ  ಸಾವನ್ನಪ್ಪಿದ ಘಟನೆ ನಡೆದಿದೆ. ಉತ್ತರ ಪ್ರದೇಶ ಬಹ್‌ರೈಚ್, ಪಿಪ್ರಾ ಗೌರಾ ನಿವಾಸಿ ಗುಲಾಬ್ ಎಂಬವರ ಪುತ್ರ ವೀರೇಂದ್ರ (44) ಸಾವನ್ನಪ್ಪಿದ ದುರ್ದೈವಿ. ಇವರು ಉಪ್ಪಳ ರೈಲು ನಿಲ್ದಾಣ ಬಳಿ ಬಾಡಿಗೆ ಮನೆಯಲ್ಲಿ ವಾಸಿಸಿ ಕೆಲಸ ನಿರ್ವಹಿಸುತ್ತಿದ್ದರು. ಜನವರಿ 12ರಂದು ಮಧ್ಯಾಹ್ನ 2 ಗಂಟೆಗೆ ತೂಮಿನಾಡು ಲಕ್ಷಂವೀಡ್ ಕಾಲನಿಯ ಸಮೀಪದ ಮನೆಯಲ್ಲಿ ಕಾಂಕ್ರೀಟ್ ಕೆಲಸದಲ್ಲಿ ನಿರತರಾಗಿದ್ದ …

ಚೆರ್ಕಳ-ಉಕ್ಕಿನಡ್ಕ ಅಂತಾರಾಜ್ಯ ರಸ್ತೆ ದುರಸ್ತಿಗೊಳಿಸದಿದ್ದಲ್ಲಿ 19ರಿಂದ ಖಾಸಗಿ ಬಸ್‌ಗಳ ಅನಿರ್ದಿಷ್ಟಾವಧಿ ಮುಷ್ಕರ

ಕಾಸರಗೋಡು: ಚೆರ್ಕಳ-ಉಕ್ಕಿ ನಡ್ಕ ರಸ್ತೆಯ ಶೋಚನೀಯಾವಸ್ಥೆಯನ್ನು ಪರಿಹರಿಸಲು ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಈ ತಿಂಗಳ 19ರಿಂದ ಚೆರ್ಕಳ- ಕಲ್ಲಡ್ಕ ಅಂತಾರಾಜ್ಯ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್‌ಗಳು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿವೆ ಎಂದು ಪ್ರೈಡ್ ಬಸ್ ಕಾರ್ಮಿಕರ ಯೂನಿಯನ್ ವಲಯ ಅಧ್ಯಕ್ಷ ಹಾರಿಸ್ ಪಿ.ಎಂ.ಎಸ್. ತಿಳಿಸಿದ್ದಾರೆ. ಈ ರಸ್ತೆಯಲ್ಲಿ ಚೆರ್ಕಳದಿಂದ ಉಕ್ಕಿನಡ್ಕವರೆಗಿನ ೧೯ ಕಿಲೋ ಮೀಟರ್ ಹೊಂಡಗಳಿಂದ ತುಂಬಿಕೊಂಡು ಒಂದು ವರ್ಷ ಕಳೆಯಿತು. ವಾಹನಗಳು ಹೊಂಡಕ್ಕೆ ಬಿದ್ದು ಎದ್ದು ಸಂಚರಿಸುತ್ತಿರುವುದರಿಂದ ವಿದ್ಯಾರ್ಥಿಗಳ ಸಹಿತ ಪ್ರಯಾಣಿಕರು ತೀವ್ರ ನೋವು ಎದುರಿಸಬೇಕಾಗಿ …

ಅಡೂರು ಕ್ಷೇತ್ರದಲ್ಲಿ ಮಕರಸಂಕ್ರಮಣ ಉತ್ಸವದಂದು ಸೋಲಾರ್ ಪವರ್ ಸಿಸ್ಟಂ ಉದ್ಘಾಟನೆ

ಅಡೂರು: ಅಡೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಕರಸಂಕ್ರಮಣ ಉತ್ಸವ, ಸಹಸ್ರ ಕುಂಭಾಭಿಷೇಕ, ಉತ್ಸವ ಬಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಇದೇ ವೇಳೆ ಸೋಲಾರ್ ಪವರ್ ಸಿಸ್ಟಂ ವ್ಯವಸ್ಥೆಯನ್ನು ಬ್ರಹ್ಮಶ್ರೀ ರವೀಶ ತಂತ್ರಿ ಉದ್ಘಾಟಿಸಿದರು. ಕರ್ನಾಟಕ ಬ್ಯಾಂಕ್ ಮಂಗಳೂರು ಸಿಒಒ ರಾಜ ಬಿ.ಎಸ್, ಸೆಲ್ಕೋ ಸೋಲಾರ್ ಲೈಟ್‌ನ  ಅಧಿಕಾರಿಗಳು ಉಪಸ್ಥಿತರಿದ್ದರು.  ಕಂಪ್ಯೂಟರ್ ಬಿಲ್ಲಿಂಗ್ ಸಿಸ್ಟಂನ್ನು ಕೇರಳ ಗ್ರಾಮೀಣ ಬ್ಯಾಂಕ್ ಕಾಸರಗೋಡು ರೀಜನಲ್ ಮೆನೇಜರ್ ಕೆ. ಗೋಪಕುಮಾರ್ ಉದ್ಘಾಟಿಸಿದರು. ಅಡೂರು ಶಾಖೆಯ ಮೆನೇಜರ್ ಸಿ. ರಿಜಿನ್ ಉಪಸ್ಥಿತರಿದ್ದರು. ಕ್ಷೇತ್ರ ಕಾರ್ಯನಿರ್ವಹಣಾಧಿಕಾರಿ …

ಶಾಸಕ ಅಶ್ರಫ್‌ರ ಮುಷ್ಕರ ಜನರ ಕಣ್ಣಿಗೆ ಮಣ್ಣೆರಚಲು ಆರಿಕ್ಕಾಡಿ ಟೋಲ್ ಬೂತ್: ಬಿಜೆಪಿ ಪರಿಹಾರ ಕಾಣಲಿದೆಯೆಂದು ಅಶ್ವಿನಿ

ಕಾಸರಗೋಡು:  ಆರಿಕ್ಕಾಡಿ ಟೋಲ್ ಬೂತ್ ಹೆಸರಲ್ಲಿ ಶಾಸಕ ಎಕೆಎಂ ಅಶ್ರಫ್ ನಡೆಸುತ್ತಿರುವುದು ಜನರ ಕಣ್ಣಿಗೆ ಮಣ್ಣೆರಚಲಿರುವ ಯತ್ನ ಮಾತ್ರವಾಗಿದೆಯೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದರು. ಆರಿಕ್ಕಾಡಿ ಟೋಲ್ ಬೂತ್‌ನ್ನು ಕೂಡಲೇ ತೆರವುಗೊಳಿಸಬೇಕೆಂದು, ಅದಕ್ಕಾಗಿ ಬಿಜೆಪಿ ಜಿಲ್ಲಾ, ರಾಜ್ಯ, ಕೇಂದ್ರ ನಾಯಕತ್ವ ಕೇಂದ್ರದ ಸಾರಿಗೆ ಸಚಿವಾಲಯವನ್ನು ಸಮೀಪಿಸಿರುವುದಾಗಿಯೂ ಅವರು ನುಡಿದರು.  ಆರಿಕ್ಕಾಡಿಯ ಟೋಲ್ ಬೂತ್ ಕಾನೂನು ವಿರುದ್ಧ ಹಾಗೂ  ಕೇಂದ್ರ ಸಾರಿಗೆ ಸಚಿವಾಲಯದ ನಿಲುವಿಗೆ ವಿರುದ್ಧವಾಗಿದೆಯೆಂದು ಬಿಜೆಪಿ ಜಿಲ್ಲಾ ಸಮಿತಿ  ಈ ಮೊದಲೇ  ಕೇಂದ್ರ ನಾಯಕತ್ವಕ್ಕೆ ತಿಳಿಸಿರುವುದಾಗಿಯೂ …

ಕಣಿಪುರ ಕ್ಷೇತ್ರ ಜಾತ್ರೆ: ಸಹಸ್ರಾರು ಭಕ್ತರಿಂದ ದೇವರ ದರ್ಶನ

ಕುಂಬಳೆ: ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿರುವ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ನಾಡಿನ ವಿವಿಧ ಭಾಗಗಳಿಂದ ಸಹಸ್ರಾರು ಮಂದಿ ಭಕ್ತಾದಿಗಳು ತಲುಪಿ ದೇವರ ದರ್ಶನ ಪಡೆಯುತ್ತಿದ್ದಾರೆ. ಮಹೋತ್ಸವದ ಮೂರನೇ ದಿನವಾದ ಇಂದು ಬೆಳಿಗ್ಗೆ ಉತ್ಸವ ಶ್ರೀಬಲಿ, ಬಳಿಕ ತುಲಾಭಾರ ಸೇವೆ ನಡೆಯಿತು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಶ್ರೀ ಬಲಿ ಬಳಿಕ ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ ಗಂಟೆ ೨ರಿಂದ ಶೇಡಿಕಾವು ಪಾರ್ತಿಸುಬ್ಬ ಯಕ್ಷಗಾನ ಕಲಾಸಂಘದವರಿಂದ ‘ಶ್ರೀಕೃಷ್ಣ ಸಂದಾನ’ ಯಕ್ಷಗಾನ ತಾಳಮದ್ದಳೆ, ಸಂಜೆ 4.30ರಿಂದ ವೈಷ್ಣವಿ ನಾಟ್ಯಾಲಯ ಪುತ್ತೂರು …

ಕುಸಿದು ಬಿದ್ದು ಮಹಿಳೆ ನಿಧನ

ಮಂಗಲ್ಪಾಡಿ: ಪ್ರತಾಪನಗರ ಬೀಟಿಗದ್ದೆ ನಿವಾಸಿ ದಿ| ದಿವಾಕರ ಪೂಜಾರಿಯವರ ಪತ್ನಿ ದೇವಕಿ (63) ನಿಧನ ಹೊಂದಿದರು. ಇವರು ನಿನ್ನೆ ಸಂಜೆ ಮನೆಯಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಉಪ್ಪಳದ ಖಾಸಗಿ ಆಸ್ಪತ್ರೆಗೆ ತಲುಪಿಸಿದರೂ ಅಷ್ಟರಲ್ಲಿ ನಿಧನ ಹೊಂದಿದರು.ಮೃತರು ಮಕ್ಕಳಾದ ಉಷಾ, ಉದಯ, ಅನಿಲ್, ಸೊಸೆ ರಕ್ಷಿತಾ, ಅಳಿಯ ಹರೀಶ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರ ಸಹಿತ ಹಲವಾರು ಮಂದಿ ಭೇಟಿ ನೀಡಿ ಅಂತಿಮನಮನ ಸಲ್ಲಿಸಿದರು. ನಿಧನಕ್ಕೆ ಪ್ರತಾಪನಗರ …

ನಗರಸಭೆಯ ಮೊದಲ ಮಹಿಳಾ ಕೌನ್ಸಿಲರ್ ನಿಧನ

ಕಾಸರಗೋಡು: ನಗರಸಭಾ ಮಾಜಿ ಕೌನ್ಸಿಲರ್, ನೆಲ್ಲಿಕುಂಜೆ ನಿವಾಸಿ ದಿ| ಗಣೇಶ್‌ಅಬ್ದುಲ್ಲಕುಂಞಿಯವರ ಪತ್ನಿ ಸೌದಾಬಿ ಅಬ್ದುಲ್ಲಕುಂಞಿ (84) ನಿಧನ ಹೊಂದಿದರು.  ನೆಲ್ಲಿಕುಂಜೆ ವಾರ್ಡನ್ನು ಪ್ರತಿನಿಧೀಕರಿಸಿ ನಗರಸಭೆಗೆ ತಲುಪಿದ ಮೊದಲ ಮಹಿಳಾ ಸದಸ್ಯೆಯಾಗಿದ್ದರು. ಮೃತರು ಮಕ್ಕಳಾದ ರಹೀಂ, ಸಾದಿಕ್, ನಸೀರ್, ಸಾಹಿರ, ಖದೀಜ, ಸಮೀರ, ಸಲ್ಮಾ, ಅಳಿಯಂದಿರಾದ ಮೊಹಮ್ಮದ್ ಕುಂಞಿ, ಬಶೀರ್ ಸೂಫಿ ತಳಂಗರೆ, ಅಬ್ದುಲ್ಲ ಕುಂಞಿ ಚೆರ್ಕಳ, ಅಬ್ದುಲ್ಲ ಕುಂಞಿ ಮೊಗ್ರಾಲ್, ಸೊಸೆಯಂದಿರಾದ ಸೌದಾ, ನಬೀಸ, ಮರಿಯಾಂಬಿ, ಫೌಸಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಪುತ್ರ ಬಶೀರ್ …