ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದ ವೃದ್ದನ ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಗೆ

ಕಾಸರಗೋಡು: ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಿದ ವೃದ್ದನ ಮೃತದೇಹವನ್ನು ತಜ್ಞ ಪರೀಕ್ಷೆಗಾಗಿ ಕಾಸರಗೋಡಿನ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ. ಚೋಯಾಂಗೋಟ್‌ನ ಹಿರಿಯ ಆಟೋ ಚಾಲಕ ಕೆ. ಕೃಷ್ಣನ್ (68) ನಿನ್ನೆ ಮಧ್ಯಾಹ್ನ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮನೆಯಲ್ಲಿ ಏಕಾಂಗಿಯಾಗಿ ವಾಸಿಸುವ ಇವರು ಕಳೆದೆರಡು ದಿನದಿಂದ ಹೊರ ಬಾರದ ಹಿನ್ನೆಲೆಯಲ್ಲಿ ನೆರೆಮನೆಯವರು ನೋಡಿದಾಗ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತ ದೇಹಕ್ಕೆ ಎರಡು ದಿನಕ್ಕಿಂತಲೂ ಹೆಚ್ಚು ಹಳಮೆ ಇದೆ ಎಂದು ಶಂಕಿಸಲಾಗಿದೆ. ಹೃದಯಾಘಾತ ಮರಣಕ್ಕೆ ಕಾರಣ ವೆಂದು …

ವಿವಿಧೆಡೆ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್‌ನಿಂದ ತಪಾಸಣೆ: 500 ಕಿಲೋ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನ ವಶ

ಕಾಸರಗೋಡು: ತ್ಯಾಜ್ಯ ಸಂಸ್ಕರಣೆಗೆ ಸಂಬಂಧಿಸಿ ಕಾನೂನು ಉಲ್ಲಂಘನೆಗಳನ್ನು ಪರಿಶೀಲಿಸುವ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ಜಿಲ್ಲೆಯ ವಿವಿಧ ಭಾಗಗಳಲ್ಲಿ ನಡೆಸಿದ ತಪಾಸಣೆಯಲ್ಲಿ ಎರಡು ದಿನಗಳೊಳಗೆ 500 ಕಿಲೋಗಿಂತಲೂ ಹೆಚ್ಚು ನಿಷೇಧಿತ ತಟ್ಟೆಗಳು, ಗ್ಲಾಸ್‌ಗಳನ್ನು ಪತ್ತೆಹಚ್ಚಿ ದಂಡ ಹೇರಿದೆ. ಮೀಂಜ ಪಂ.ನ ಸೂಪರ್ ಮಾರ್ಕೆಟ್‌ನಿಂದ, ಅಂಗಡಿಗಳಿಂದ ಮಾರಾಟಕ್ಕಾಗಿ ಇರಿಸಿದ್ದ ೧೫೦ ಕಿಲೋ ಗ್ರಾಂ ನಿಷೇಧಿತ ಉತ್ಪನ್ನಗಳನ್ನು ಪತ್ತೆಹಚ್ಚಿ ಮಾಲಕರಿಗೆ 10,000 ರೂ.ನಂತೆ ದಂಡ ವಿಧಿಸಲಾಗಿದೆ. ಪೈವಳಿಕೆ ಪಂಚಾಯತ್ ವ್ಯಾಪ್ತಿಯ ಸೂಪರ್ ಮಾರ್ಕೆಟ್‌ನಿಂದ 50 ಕಿಲೋ ಗ್ರಾಂ ನಿಷೇಧಿತ ಉತ್ಪನ್ನಗಳನ್ನು ಪತ್ತೆಹಚ್ಚಿ …

ಪ್ರತಾಪನಗರ ಒಳರಸ್ತೆ ಚರಂಡಿ ನಿರ್ಮಾಣಕ್ಕೆ ಚಾಲನೆ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ 7ನೇ ವಾರ್ಡ್ ಪ್ರತಾಪನಗರದ ಒಳರಸ್ತೆಯಲ್ಲಿ ಚರಂಡಿ ನಿರ್ಮಾಣ ಕೆಲಸಕ್ಕೆ ನಿನ್ನೆ ಚಾಲನೆ ನೀಡಲಾಗಿದೆ. ಪಂಚಾಯತ್ ಪsಂಡ್‌ನಿAದ ಸುಮಾರು 5ಲಕ್ಷ ರೂ. ವೆಚ್ಚದಲ್ಲಿ ಚರಂಡಿ ನಿರ್ಮಾಣಗೊಳ್ಳಲಿದೆ. ಚರಂಡಿಯ ಅವ್ಯವಸ್ಥೆಯಿಂದ ಮಳೆ ನೀರು ಪೂರ್ತಿ ರಸ್ತೆಯಲ್ಲಿ ಹರಿದು ಶೋಚನೀಯÁವಸ್ಥೆಯಿಂದ ಸ್ಥಳೀಯರ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಚರಂಡಿ ನಿರ್ಮಾಣದಿಂದ ಸಮಸ್ಯೆ ಬಗೆ ಹರಿಯಲಿದೆ. ಎರಡು ತಿಂಗಳ ಹಿಂದೆ ಚರಂಡಿ ನಿರ್ಮಾಣಕ್ಕೆ ಹೊಂಡ ತೋಡಿ ಮುಹೂರ್ತ ಮಾಡಲಾಗಿತ್ತು. ಕೆಲಸ ಆರಂಭ ವಿಳಂಬಗೊAಡಿರುವುದು ಸ್ಥಳೀಯರಿಗೆ ಸಮಸ್ಯೆಯÁಗಿತ್ತು. ಅಲ್ಲದೆ ಹೊಂಡ ತೋಡುವ …

18ರಿಂದ 30ರ ಮಧ್ಯೆ ಪ್ರಾಯದವರಿಗೆ ಸ್ಕಾಲರ್‌ಶಿಪ್ ‘ಕನೆಕ್ಟ್ ಟು ವರ್ಕ್’ ಯೋಜನೆಯ ರೂಪುರೇಷೆಗೆ ಅಂಗೀಕಾರ

ತಿರುವನಂತಪುರ: ಮುಖ್ಯಮಂತ್ರಿಯ ಕನೆಕ್ಟ್ ಟು ವರ್ಕ್ ಯೋಜನೆಯ ನವೀಕೃತ ರೂಪುರೇಷೆಗೆ ಸಚಿವಸಂಪುಟ ಸಭೆ ಅಂಗೀಕಾರ ನೀಡಿದೆ. ಯುವಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಉದ್ಯೋಗ ಸಾಧ್ಯತೆಗಳನ್ನು ಉತ್ತಮ ಪಡಿಸುವುದು ಯೋಜನೆಯ ಉದ್ದೇಶವಾಗಿದೆ. ಅರ್ಜಿದಾರರ ಕುಟುಂಬ ವಾರ್ಷಿಕ ಆದಾಯ 5 ಲಕ್ಷ ರೂ.ಗಿಂತ ಹೆಚ್ಚಾಗ ಬಾರದು. ಅರ್ಜಿದಾರ ಕೇರಳದಲ್ಲೇ ಖಾಯಂ ವಾಸವಾಗಿದ್ದು, ಅರ್ಜಿ ಸಲ್ಲಿಸುವ ದಿನಾಂಕಕ್ಕೆ 18 ವರ್ಷ ಪೂರ್ತಿಯಾಗಿದ್ದು, 30 ವರ್ಷಕ್ಕಿಂತ ಹೆಚ್ಚಾಗಬಾರದು. ಕೇಂದ್ರ, ರಾಜ್ಯ ಸರಕಾರಿ ಇಲಾಖೆಗಳು, ಕೇಂದ್ರ, ರಾಜ್ಯ ಸಾರ್ವಜನಿಕ ಸಂಸ್ಥೆಗಳು, ಅಂಗೀಕೃತ ವಿ.ವಿ.ಗಳು, ಅಂಗೀಕೃತ ಖಾಸಗಿ …

ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರಿ ಕ್ಷೇತ್ರದಲ್ಲಿ ವಿಶೇಷ ದೀಪೋತ್ಸವದೊಂದಿಗೆ ಧನುರ್ಮಾಸ ಪೂಜೆ ಸಮಾಪ್ತಿ

ಮಂಜೇಶ್ವರ: ಬಂಗ್ರಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರೀ ದೇವಸ್ಥಾನ ದಲ್ಲಿ ಧನುರ್ಮಾಸ ಪೂಜಾ ಮಹೋ ತ್ಸವ ನಿನ್ನೆ ವಿಶೇಷ ದೀಪೋತ್ಸವದೊಂ ದಿಗೆ ಸಮಾಪ್ತಿಗೊಂಡಿತು. ಶ್ರೀ ಕಾಳಿಕಾ ಪರಮೇಶ್ವರೀ ದೇವಿ, ಶ್ರೀ ಮಹಾಗಣ ಪತಿ, ಶ್ರೀ ವಿಶ್ವಕರ್ಮ ದೇವರಿಗೆ ಪೂಜೆ ನೆರವೇರಿತು. ಶ್ರೀ ದೇವರಿಗೆ ಪಂಚಾ ಮೃತ ಅಭಿಷೇಕ, ಸೀಯಾಳ ಅಭಿಷೇಕ ನಡೆಯಿತು. ಬಳಿಕ ಕಾಸರಗೋಡು ಉಳಿಯತಡ್ಕ ಶ್ರೀ ಗುರುಕೃಪಾ ವೈದಿಕ ಶಿಕ್ಷಣ ಸಮಿತಿ ಭಜನಾ ಮಂಡಳಿಯಿAದ ಭಜನಾ ಸಂಕೀರ್ತನೆ ನಡೆಯಿತು. ಈ ವೇಳೆ ಮಾತೆಯರು, ಮಕ್ಕಳು ಸೇರಿ ಕ್ಷೇತ್ರ ವಠಾರದಲ್ಲಿ …

ಪೈವಳಿಕೆ ಪಂ. ನಲ್ಲಿ ಕೋ-ಲೀ-ಬಿ ಮೈತ್ರಿ ಪ್ರತಿಭಟಿಸಿ ಸಿಪಿಎಂನಿಂದ ವಾಹನ ಪ್ರಚಾರ ಜಾಥಾ

ಪೈವಳಿಕೆ: ಪಂಚಾಯತ್‌ನಲ್ಲಿ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ  ಸದಸ್ಯರಿಗೆ ಹಾಗೂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಲೀಗ್ ಸದಸ್ಯೆ ಹಾಗೂ ಕಾಂಗ್ರೆಸ್ ಸದಸ್ಯರು ಬಿಜೆಪಿಗೆ ಮತ ನೀಡಿರುವುದನ್ನು ಪ್ರತಿಭಟಿಸಿ ಸಿಪಿಎಂ ಪೈವಳಿಕೆ ಪಂಚಾಯತ್ ಸಮಿತಿ ನೇತೃತ್ವದಲ್ಲಿ ವಾಹನ ಜಾಥಾ ನಡೆಸಲಾಯಿತು. ಕಯ್ಯಾರ್‌ನಲ್ಲಿ ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ ಜಾಥಾ ಉದ್ಘಾಟಿಸಿ ಮಾತನಾಡಿದರು. ಬೇಬಿ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಜಾಥಾ ಲೀಡರ್ ಅಬ್ದುಲ್ ರಜಾಕ್ ಚಿಪ್ಪಾರು, ಜಾಥಾ ನಾಯಕ ಪುರುಷೋತ್ತಮ ಬಳ್ಳೂರು, ಸದಸ್ಯ ಚಂದ್ರ ನಾಯ್ಕ್ …

ದೇಶೀಯ ಅಧ್ಯಾಪಕ ಪರಿಷತ್ ಕುಂಬಳೆ ಉಪಜಿಲ್ಲಾ ಸಮಿತಿಯಿಂದ ವಿವೇಕಾನಂದ ಜಯಂತಿ ಆಚರಣೆ

ಮುಳ್ಳೇರಿಯ: ದೇಶೀಯ ಅಧ್ಯಾ ಪಕ ಪರಿಷತ್ ಕುಂಬಳೆ ಉಪಜಿಲ್ಲಾ ಸಮಿತಿ ವತಿಯಿಂದ ಸ್ವಾಮಿ ವಿವೇಕಾ ನಂದ ಜಯಂತಿ  ಆಚರಿಸಲಾಯಿತು. ಮವ್ವಾರ್ ಗೌರಿಯಡ್ಕ ಶ್ಯಾಮಲಾ ರವಿರಾಜ್‌ರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಜಿಲ್ಲಾ ಸಮಿತಿ ಅಧ್ಯಕ್ಷ ರಾಮಚಂದ್ರ ಕಾರಡ್ಕ ಅಧ್ಯಕ್ಷತೆ ವಹಿಸಿದರು. ವಿಷ್ಣು ಭಟ್ ಎಡಪ್ಪಾಡಿ ಉದ್ಘಾಟಿಸಿದರು. ರಾಜ್ಯ ಸಮಿತಿ ಉಪಾಧ್ಯಕ್ಷ ಪ್ರಭಾಕರ ಶುಭ ಕೋರಿದರು. ಪುಷ್ಪ, ರವಿರಾಜ್, ಪುರುಷೋತ್ತಮ ಕುಲಾಲ್ ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು. ಶ್ಯಾಮಲಾ ಕುಮಾರಿ ಸ್ವಾಗತಿಸಿ, ದಿನೇಶ್ ವಂದಿಸಿದರು.

ಗ್ರೈಂಡರ್‌ನಲ್ಲಿ ಶಾಲು ಸಿಲುಕಿ ಯುವತಿ ಮೃತ್ಯು

ಮಂಜೇಶ್ವರ: ಅಡುಗೆ ತಯಾರಿ ವೇಳೆ ಗ್ರೈಂಡರ್‌ಗೆ ಶಾಲು ಸಿಲುಕಿ ಯುವತಿ ಮೃತಪಟ್ಟ ದಾರುಣ ಘಟನೆ ವರ್ಕಾಡಿ ಬಳಿ ಸಂಭವಿಸಿದೆ. ವರ್ಕಾಡಿ ತೌಡುಗೋಳಿ ಮದಕ್ಕ ಕಲ್ಮಿಂಜದ ಅಬ್ದುಲ್ ಖಾದರ್ ಎಂಬವರ ಪತ್ನಿ  ಮೈಮೂನ (40) ಎಂಬವರು ಮೃತಪಟ್ಟ ದುರ್ದೈವಿಯಾ ಗಿದ್ದಾರೆ. ನಿನ್ನೆ ಬೆಳಿಗ್ಗೆ ಮನೆಯಲ್ಲಿ ಅಡುಗೆ ತಯಾರಿಸಲು ಗ್ರೈಂಡರ್‌ನಲ್ಲಿ ಹುಡಿಮಾಡುತ್ತಿದ್ದಂತೆ ಶಾಲು ಅದರಲ್ಲಿ ಸಿಲುಕಿತ್ತು. ಇದರಿಂದ ಗಂಭೀರ ಗಾಯ ಗೊಂಡ  ಮೈಮೂನರನ್ನು ಮನೆ ಯವರು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಕೂಡಲೇ  ಮಂಗ ಳೂರಿನ ಆಸ್ಪತ್ರೆಗೆ …

ಕಳನಾಡಿನಲ್ಲಿ ಮಧೂರು ನಿವಾಸಿಗಳಾದ ಇಬ್ಬರಿಗೆ ಆಕ್ರಮಣ: ಕೇಸು ದಾಖಲು

ಕಾಸರಗೋಡು: ಕಳನಾಡು ಖತ್ತರ್ ಸ್ಪೋರ್ಟ್ಸ್ ಫುಟ್ಬಾಲ್ ಟರ್ಫ್‌ನಲ್ಲಿ ಇಬ್ಬರು ಯುವಕರಿಗೆ ಆಕ್ರಮಣ ನಡೆಸಿರುವುದಾಗಿ ದೂರಲಾಗಿದೆ. ಚೆಟ್ಟುಂಗುಳಿ ಕ್ವಾರ್ಟ ರ್ಸ್‌ನ ಕೆ.ಎಂ. ಅಫ್ಸಲ್ (27), ಮಧೂರು ನಿವಾಸಿ ಹನೀಫ (25) ಎಂಬಿವರಿಗೆ ಆಕ್ರಮಿಸ ಲಾಗಿದೆ ಎಂದು ದೂರಲಾಗಿದೆ. ಸೋಮವಾರ ಮಧ್ಯಾಹ್ನ ಘಟನೆ ನಡೆದಿದೆ. ಕೆ.ಎಂ. ಅಫ್ಸಲ್ ಹಾಗೂ ಫುಟ್ಬಾಲ್ ತಂಡದ ಮೆನೇಜರ್ ಹನೀಫ್‌ರಿಗೆ ಆಕ್ರಮಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಳನಾಡು ಕೀಯೂರಿನ ಸಾದಿಕ್, ಅಂದಾಯಿ, ಸನ, ಅಫ್ರೀದ್, ತಬ್ಶೀರ್, ಪಚ್ಚು, ಉವೈಸ್, ಆಶಿಂ, ಮಾಹಿನ್ ಎಂಬಿವರ ವಿರುದ್ಧ  ಕೇಸು …

ಶಬರಿಮಲೆ ಚಿನ್ನ ಕಳವು ಪ್ರಕರಣ ಹೊಸ ತಿರುವಿನತ್ತ: ಹಳೆ ಧ್ವಜಸ್ತಂಭ ಬದಲಾಯಿಸಿದ ಬಗ್ಗೆ ತನಿಖೆ, ವಾಜೀವಾಹನ ತಂತ್ರಿ ನಿವಾಸದಲ್ಲಿ ಪತ್ತೆ

ಶಬರಿಮಲೆ:  ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣದ ತನಿಖೆ ಒಂದೆಡೆ ತೀವ್ರಗತಿಯಲ್ಲಿ  ಸಾಗುತ್ತಿರುವ ವೇಳೆಯಲ್ಲಿ ಇದೇ ದೇಗುಲದ ಹಳೆ ಧ್ವಜ ಸ್ತಂಭ ಬದಲಿಸುವ ವೇಳೆ ಅದರಲ್ಲಿದ್ದ ಚಿನ್ನ ಲೇಪಿತ ಪಂಚಲೋಹ ವಿಗ್ರಹದ  ವಾಜೀವಾಹನ ಮತ್ತು ಇತರ ಮೂರ್ತಿಗಳ ಬಗ್ಗೆಯೂ ವಿಶೇಷ ತನಿಖಾ ತಂಡ ಇನ್ನೊಂದೆಡೆ ತನಿಖೆ ಆರಂಭಿಸಿದ್ದು, ಇದು ಶಬರಿಮಲೆ ಪ್ರಕರಣಕ್ಕೆ  ಹೊಸ ತಿರುವು ಲಭಿಸಿದೆ.  ಶಬರಿಮಲೆ ದೇಗುಲದ ಹಳೆ ಧ್ವಜಸ್ತಂಭವನ್ನು ಪ್ರಯಾರ್ ಗೋಪಾಲಕೃಷ್ಣ ಅಧ್ಯಕ್ಷರಾಗಿದ್ದ ದೇವಸ್ವಂ  ಮಂಡಳಿಯ ನೇತೃತ್ವದಲ್ಲಿ 2017ರಲ್ಲಿ ಬದಲಾಯಿಸಿ ಹೊಸ ಧ್ವಜಸ್ತಂಭ ಸ್ಥಾಪಿಸಲಾಗಿತ್ತು.  …