ಮಾಜಿ ಕೌನ್ಸಿಲರ್ ನಿಧನ

ಕಾಸರಗೋಡು: ನಗರಸಭಾ ಮಾಜಿ ಕೌನ್ಸಿಲರ್, ಕಡಪ್ಪುರ ಎಸ್‌ಸಿ ಬಿಬಿಎಂ ರಸ್ತೆಯ ಕೆ.ಬಿ. ಗಂಗಾಧರನ್ (64) ನಿಧನ ಹೊಂದಿದರು. ದಿ| ಕಣ್ಣಪ್ಪ- ಸುಶೀಲ ದಂಪತಿ ಪುತ್ರನಾಗಿದ್ದಾರೆ. ಮೃತರು ಪತ್ನಿ ಸುಕನ್ಯ, ಮಕ್ಕಳಾದ ನೀತು, ನಿಖಿಲ್, ನಖಿಲ್, ಅಳಿಯ ಪ್ರಿಜೇಶ್,  ಸಹೋದರಿ ಪುಷ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಿಪಿಎಂ ಕಾರ್ಯಕರ್ತನಾದ ಇವರು ಚೀರುಂಬಾ ಭಗವತೀ ಭಜನಾ ಸಮಿತಿ ಅಧ್ಯಕ್ಷ, ಪಿಲಿಕುಂಜೆ- ತಳಂಗರೆ- ಪಾಲಕುನ್ನು ಭಗವತೀ ಸೇವಾ ಸಂಘದ ಜೊತೆ ಕಾರ್ಯದರ್ಶಿ, ತೋಟತ್ತಿಲ್ ತರವಾಡು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಗಡಿನಾಡು ಕನ್ನಡ ಸಂಜೆ ಪತ್ರಿಕಾ ಸಂಪಾದಕ ಗಣೇಶ್ ಕೆ ನಿಧನ

‘ ಕಾಸರಗೋಡು: ಕಾಸರಗೋಡು ಜಿಲ್ಲೆಯ ಪ್ರಪ್ರಥಮ ಕನ್ನಡ ಸಂಜೆ ಪತ್ರಿಕೆಯಾದ ಗಡಿನಾಡು ಇದರ ಸಂಪಾದಕ ಉಳಿಯತ್ತಡ್ಕ ಭಗವತೀನಗರದ ಕೋಕಿಲಾ ನಿಲಯದ ಗಣೇಶ ಕೆ (66) ನಿನ್ನೆ ನಿಧನಹೊಂದಿದರು. ಗಡಿನಾಡು ಪತ್ರಿಕೆಯ ಸಂಪಾದಕ, ಪ್ರಕಾಶಕ ಹಾಗೂ ನುರಿತ ಮುದ್ರಣಗಾರರಾಗಿಯೂ ಇವರು ಸೇವೆ ಸಲ್ಲಿಸಿದ್ದರು. ಕಾಸರಗೋಡು ಕರಂದಕ್ಕಾಡು ವೀರಹನುಮಾನ್ ವ್ಯಾಯಾಮ ಶಾಲೆಯ ಸ್ಥಾಪಕ ಸದಸ್ಯರೂ ಆಗಿದ್ದರು. ನಿನ್ನೆ ಮನೆಯಲ್ಲಿ ಇವರಿಗೆ ಎದೆನೋವು ಕಾಣಿಸಿಕೊಂಡು ಅಲ್ಲೇ ಕುಸಿದುಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ನೀಡಲಾ ಯಿತಾದರೂ ಅದು ಫಲಕಾರಿಯಾಗದೆ …

ಭಾಸ್ಕರ ಕುಂಬಳೆ ಬಲಿದಾನ ದಿನಾಚರಣೆ ಇಂದು

ಕುಂಬಳೆ: ಡಿವೈಎಫ್‌ಐ  ನೇತಾರನಾಗಿದ್ದ ಭಾಸ್ಕರ ಕುಂಬಳೆಯವರ  ಬಲಿದಾನ ದಿನಾಚರಣೆಯಂಗವಾಗಿ ಇಂದು ಸಂಜೆ 4 ಗಂಟೆಗೆ ಕುಂಬಳೆಯಲ್ಲಿ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆ ನಡೆಯಲಿದೆ . ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಎಂ. ಸ್ವರಾಜ್ ಉದ್ಘಾಟಿಸುವರು. ಇಂದು ಬೆಳಿಗ್ಗೆ ಶೇಡಿಕಾವಿನಲ್ಲಿರುವ ಸ್ಮೃತಿ ಮಂಟಪದಲ್ಲಿ  ಪುಷ್ಪಾರ್ಚನೆ ನಡೆಸಲಾಯಿತು. ಶಾಸಕ ಸಿ.ಎಚ್. ಕುಂಞಂಬು, ನೇತಾರರಾದ ವಿ.ವಿ. ರಮೇಶ್, ರಾಜೇಶ್ ವಲಾಟ್, ರಘುದೇವ್ ಮಾಸ್ತರ್, ಕೆ.ಆರ್. ಜಯಾನಂದ, ಸಿ.ಎ.ಸುಬೈರ್, ಶಾಲು ಮ್ಯಾಥ್ಯು ಮೊದಲಾದವರು ಭಾಗವಹಿಸಿದರು.

ಯುವಕನನ್ನು ಆಟೋ ರಿಕ್ಷಾದಲ್ಲಿ ಕರೆದೊಯ್ದು ಹಲ್ಲೆ: ಬಳಿಕ ರಸ್ತೆ ಬದಿ ಉಪೇಕ್ಷೆ

ಕುಂಬಳೆ: ಯುವಕನನ್ನು ಆಟೋ ರಿಕ್ಷಾದಲ್ಲಿ ಉಪಾಯದಿಂದ ಕರೆದೊಯ್ದು ಇಬ್ಬರು ಹಲ್ಲೆಗೈದು ಗಂಭೀರ ಗಾಯಗೊಳಿಸಿದ ಬಳಿಕ ರಸ್ತೆ ಬದಿ ಉಪೇಕ್ಷಿಸಿ ಪರಾರಿಯಾದ ಬಗ್ಗೆ ದೂರಲಾಗಿದೆ. ಉಪ್ಪಳ ಪತ್ವಾಡಿಯ ಸವಾದ್ (23) ಎಂಬವರು ಹಲ್ಲೆಯಿಂದ ಗಾಯಗೊಂಡು ಮಂಗಳೂರಿನ  ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ದ್ದಾರೆ. ಸವಾದ್ ಮಾಂಸದಂಗಡಿಯ ಕಾರ್ಮಿಕನಾಗಿದ್ದಾರೆ. ನಿನ್ನೆ ಸಂಜೆ ಇಬ್ಬರು ವ್ಯಕ್ತಿಗಳು ಇವರನ್ನು ಸಂಪರ್ಕಿಸಿ ಬಳಿಕ ಮಾತನಾಡಲಿಕ್ಕಿದೆಯೆಂದು ತಿಳಿಸಿ ಆಟೋ ರಿಕ್ಷಾದಲ್ಲಿ ಕರೆದೊಯ್ದಿದ್ದಾರೆ. ಬಳಿಕ ಉಪ್ಪಳ ಮಜಲ್‌ಗೆ ತಲುಪಿಸಿ ಅಲ್ಲಿ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಗಾಯಗೊಳಿಸಿದ್ದು, ಇದರಿಂದ …

ಗಾಳಿ, ಮಳೆ: ಮನೆ, ಸೇತುವೆ ಮೇಲೆ ಅಪ್ಪಳಿಸಿದ ತೆಂಗಿನಮರಗಳು

ಕುಂಬಳೆ: ನಿನ್ನೆ ರಾತ್ರಿ ಸುರಿದ ಮಳೆಯೊಂದಿಗೆ ಬೀಸಿದ ಗಾಳಿಯಿಂದ ವಿವಿಧೆಡೆ ಹಾನಿ ಸಂಭವಿಸಿದೆ. ಕುಂಬಳೆ ಮಾವಿನಕಟ್ಟೆಯಲ್ಲಿ ರಮೇಶ್ ಎಂಬವರ ಹೆಂಚಿನ ಮನೆ ಮೇಲೆ ತೆಂಗಿನ ಮರವೊಂದು ಬಿದ್ದಿದೆ. ಇದರಿಂದ ಮನೆಗೆ ವ್ಯಾಪಕ ಹಾನಿ ಉಂಟಾಗಿದ್ದು ಭಾರೀ ನಷ್ಟವುಂಟಾಗಿ ರುವುದಾಗಿಯೂ ಹೇಳಲಾಗುತ್ತಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ. ಕಂಚಿಕಟ್ಟೆಯಲ್ಲಿ ಸೇತುವೆ ಮೇಲೆ ತೆಂಗಿನ ಮರಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆ ಎದುರಾಗಿದೆ. ಅದೇ ರೀತಿ ಆರಿಕ್ಕಾಡಿ ಕುಟುಂಬ ಆರೋಗ್ಯ ಕೇಂದ್ರದ ಕಟ್ಟಡದ ಹೆಂಚು ಗಾಳಿಗೆ ಹಾರಿಗೋಗಿ ರಾಷ್ಟ್ರೀಯ ಹೆದ್ದಾರಿಯ …

ಪೊಲೀಸ್ ಜೀಪಿಗೆ ಕಾರು ತಡೆಯೊಡ್ಡಿ ದಾಳಿಗೆ ಯತ್ನ: ಓರ್ವ ಸೆರೆ

ಕಾಸರಗೋಡು:  ಪೊಲೀಸ್ ಜೀಪಿಗೆ ಕಾರನ್ನು ಅಡ್ಡವಾಗಿ ನಿಲ್ಲಿಸಿ ಪೊಲೀಸರ ಕರ್ತವ್ಯ ನಿರ್ವಹಣೆಗೆ ತಡೆಯೊಡ್ಡಿದ ಆರೋಪದಂತೆ ಹೊಸದುರ್ಗ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಪಡನ್ನಕ್ಕಾಡ್ ನಿವಾಸಿ ಟಿ.ವಿ. ಸುರೇಶನ್ (48) ಎಂಬಾತನನ್ನು ಈ ಆರೋಪದಂತೆ ಸೆರೆಹಿಡಿದು ಪ್ರಕರಣ ದಾಖಲಿಸಲಾಗಿದೆ. ಪಡನ್ನಕ್ಕಾಡಿನ ಬೇಕಲ ಕ್ಲಬ್‌ನಲ್ಲಿ ಜೂಜಾಟ ನಡೆಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಹೊಸದುರ್ಗ ಪೊಲೀಸರು ಅಲ್ಲಿಗೆ ನಿನ್ನೆ ದಾಳಿ ನಡೆಸಿದ್ದರು. ದಾಳಿ ಬಳಿಕ ಪೊಲೀಸರು ತಮ್ಮ ಜೀಪಿನಲ್ಲಿ ಹಿಂತಿರುಗುತ್ತಿದ್ದ ವೇಳೆ ಕಾರನ್ನು ಪೊಲೀಸರ ಜೀಪಿಗೆ ಅಡ್ಡವಾಗಿ ನಿಲ್ಲಿಸಿ  ಪೊಲೀಸರ ಮೇಲೆ ಹಲ್ಲೆ …

ಉಷ್ಣತೆ ಹೆಚ್ಚಿದಂತೆ ತೀವ್ರಗೊಂಡ ಹಾವುಗಳ ಹಾವಳಿ: 2 ದಿನಗಳಲ್ಲಾಗಿ ರಾಜ್ಯದಲ್ಲಿ ಬಾಲಕ ಸಹಿತ ಇಬ್ಬರು ಮೃತ್ಯು: ಓರ್ವನ ಸ್ಥಿತಿ ಗಂಭೀರ

ತಿರುವನಂತಪುರ: ರಾಜ್ಯ ವಿವಿಧೆಡೆಗಳಲ್ಲಿ ಕಳೆದ ಎರಡು ದಿನಗಳಲ್ಲಿ ಹಾವುಗಳ ಕಡಿತದಿಂದ ಇಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೊನ್ನೆ ತೃಶೂರಿನಲ್ಲಿ  ಎಂಟರ ಹರೆಯದ ಆಲ್‌ಜೋ ಎಂಬ ಬಾಲಕ ಹಾವಿನ ಕಡಿತದಿಂದ ಮೃತಪಟ್ಟಿದ್ದನು. ಅದರ ಬೆನ್ನಲ್ಲೇ ನಿನ್ನೆ ತಿರುವನಂತಪುರ ಕಾರೇಟ್ ಎಂಬಲ್ಲಿ  ಹಾವಿನ ಕಡಿತದಿಂದ ಸುಧರ್ಮ (75) ಎಂಬವರು ಮೃತಪಟ್ಟಿದ್ದಾರೆ.  ಸುಧರ್ಮ ನಿನ್ನೆ ಬೆಳಿಗ್ಗೆ ಮನೆಯ ಬಾವಿ ಸಮೀಪ ಗಿಡಗಳಿಗೆ ನೀರು ಹಾಯಿಸುತ್ತಿದ್ದಾಗ ಹಾವಿನ ಕಡಿತವುಂಟಾಗಿದೆ. ಬೊಬ್ಬೆ ಕೇಳಿದ ಮನೆಯವರು  ತಕ್ಷಣ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಆದಿತ್ಯವಾರ ಮುಂಜಾನೆ …

ದೈವಕ್ಕೆ ಕೈ ಮುಗಿಯುತ್ತಿದ್ದ ವೃದ್ದೆಯ ಕುತ್ತಿಗೆಯಿಂದ ಐದೂವರೆ ಪವನ್ ತೂಕದ ಚಿನ್ನದ ಸರ ಅಪಹರಣ: ಇಬ್ಬರು ಮಹಿಳೆಯರು ಸೆರೆ

ಪಯ್ಯನ್ನೂರು: ಪೆರಿಂಙೋಂ ಮಾತಮಂಗಲದಲ್ಲಿ ದೈವಕೋಲ ನೋಡಲೆಂದು ತಲುಪಿದ ವೃದ್ದೆಯ ಕುತ್ತಿಗೆಯಿಂದ ಚಿನ್ನದ ಸರವನ್ನು ಅಪಹರಿಸಿದ ಘಟನೆಯಲ್ಲಿ ಇಬ್ಬರನ್ನು ಸೆರೆ ಹಿಡಿದಿದ್ದಾರೆ. ಸಹಾಯಿಗಳಾದ ಇಬ್ಬರಿಗಾಗಿ ತನಿಖೆ ತೀವ್ರಗೊಳಿಸಿದ್ದಾರೆ. ಪಾಣಪ್ಪುಳ ಪರವೂರಿನ ಪಿ.ವಿ. ರುಕ್ಮಿಣಿ (76)ರ ಚಿನ್ನದ ಸರವನ್ನು ಅಪಹರಿಸಲಾಗಿತ್ತು. ಕರ್ನಾಟಕ ಕೋಲಾರ ಮುಲ್ಬಾಗ್ ನಿವಾಸಿ ಹಾಗೂ ವಿರಾಜ್‌ಪೇಟೆ ಚಾಮುಂಡೇಶ್ವರಿ ಕ್ಷೇತ್ರ ಸಮೀಪ ವಾಸಿಸುವ ಅನಿತ (39), ವಿರಾಜ್‌ಪೇಟೆ ಟವರ್‌ಗೇಟ್ ನಿವಾಸಿ ಆರ್. ಗೀತ (40) ಎಂಬಿವರನ್ನು ಪೆರಿಂಙೋಂ ಪೊಲೀಸರು ಬಂಧಿಸಿದ್ದಾರೆ. ಮಾತಮಂಗಲ ಪುಲಿಯೂರ್‌ಕಾಳಿ ಕ್ಷೇತ್ರದಲ್ಲಿ ಆದಿತ್ಯವಾರ ಸಂಜೆ ೩ …

ನಾಲ್ಕೂವರೆ ಕೋಟಿ ರೂ. ವೆಚ್ಚವಾದರೂ ಲಾಲ್‌ಭಾಗ್-ಕುರುಡಪದವು ರಸ್ತೆ ಕಾಮಗಾರಿಯಲ್ಲಿ ಕಳಪೆ ಆರೋಪ: ಊರವರಿಂದ ಪ್ರತಿಭಟನೆಗೆ ಸಿದ್ಧತೆ

ಪೈವಳಿಕೆ: ಪೈವಳಿಕೆ ಪಂಚಾ ಯತ್‌ನ ಲಾಲ್‌ಭಾಗ್-ಕುರುಡಪದವು ಲೋಕೋಪಯೋಗಿ ಇಲಾಖೆಯ ರಸ್ತೆಯಲ್ಲಿ ಅಮ್ಮೇರಿ ತನಕ ನಡೆಯುತ್ತಿರುವ ಅಭಿವೃದ್ದಿ ಕಾಮಗಾರಿಯಲ್ಲಿ ಕಳಪೆ ಕಾಮಗಾರಿ ನಡೆಯುತ್ತಿರುವುದಾಗಿ ಊರವರು ಆರೋಪಿಸಿದ್ದಾರೆ. ಕಾಮಗಾರಿ ತಡೆದು ಪ್ರತಿಭಟನೆಗೆ ಸಿದ್ದತೆ ನಡೆಸುತ್ತಿದ್ದಾರೆ. ಸುಮಾರು ನಾಲ್ಕೂವರೆ ಕೋಟಿ ರೂ. ವೆಚ್ಚದಲ್ಲಿ ಮೂರೂವರೆ ಕಿಲೋ ಮೀಟರ್ ರಸ್ತೆಯಲ್ಲಿ ಕಳೆದ ಹಲವಾರು ತಿಂಗಳಿಂದ ಅಭಿವೃದ್ದಿ ಕಾಮಗಾರಿ ನಡೆಯುತ್ತಿದೆ. ರಸ್ತೆ ಅಗಲೀಕರಣ ಹಾಗೂ ಚರಂಡಿ ನಿರ್ಮಾ ಣಗೊಳ್ಳುತ್ತಿದೆ. ಈಗಾಗಲೇ ಸುಮಾರು ಒಂದು ಕಿಲೋ ಮೀಟರ್ ರಸ್ತೆಯನ್ನು ಕೆಲವು ದಿನಗಳ ಹಿಂದೆಯಷ್ಟೆ ಡಾಮರೀ ಕರಣಗೊಳಿಸಲಾಗಿದ್ದು, …

ಮಹಿಳಾ ಮೀಸಲಾತಿ ಮಸೂದೆಯನ್ನು ಪರಾಭವಗೊಳಿಸಿದ ವಿರೋಧಪಕ್ಷಗಳ ನಿಲುವು ಪ್ರತಿಭಟನಾರ್ಹ-ಬಿಜೆಪಿ

ಎ. 29ರಂದು ಮಹಿಳಾ ಪ್ರತಿಭಟನಾ ರ‍್ಯಾಲಿ ಕಾಸರಗೋಡು: ಸಂಸತ್‌ನಲ್ಲಿ ಅಂಗೀಕಾರಕ್ಕಾಗಿ ಮಂಡಿಸಲಾದ ಮಹಿಳಾ ಮೀಸಲಾತಿ ವಿಧೇಯಕ ವನ್ನು ವಿರೋಧಿಸಿ ಅದನ್ನು  ಪರಾಭವಗೊ ಳಿಸಿದ ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಟಿಎಂಸಿ, ಡಿಎಂಕೆ  ಎಂಬೀ ಪಕ್ಷಗಳ ನಿಲುವು ಪ್ರತಿಭಟನಾರ್ಹ ವಾದುದೆಂದು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದ್ದಾರೆ. ವಿರೋಧಪಕ್ಷಗಳು  ದೇಶದ ಮಹಿಳಾ ಸಮೂಹದೊಂದಿಗೆ ತೋರುತ್ತಿರುವ ವಂಚನೆ ಹಾಗೂ ಮಹಿಳಾ ವಿರೋಧಿ ಮನೋಭಾವ ಇದರಿಂದ ಪ್ರಕಟಗೊಂಡಿದೆ. ಮಹಿಳಾ ಮೀಸಲಾತಿ ವಿಧೇಯಕ ಅಂಗೀಕಾರಗೊ ಳ್ಳುತ್ತಿದ್ದಲ್ಲಿ …