ಲೈಂಗಿಕ ಕಿರುಕುಳ: ಶಾಸಕ ರಾಹುಲ್ ಮೂರು ದಿನಗಳ ತನಕ ಎಸ್‌ಐಟಿ ವಶಕ್ಕೆ; ಎರಡು ಫೋನ್ ಪತ್ತೆ; ಪ್ರತಿಭಟನೆಗಾರರಿಂದ ಮೊಟ್ಟೆ ಎಸೆತ
ತಿರುವಲ್ಲ: ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಮೂರನೇ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡದಿಂದ ಬಂಧಿತರಾಗಿ ನ್ಯಾಯಾಂಗ ಬಂಧನಕ್ಕೊಳಗಾದ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್‌ನನ್ನು ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ತಿರುವೆಲ್ಲಾ ಮೆಜಿಸ್ಟ್ರೇಟ್ ನ್ಯಾಯಾಲಯ ಮೂರು ದಿನಗಳ ತನಕ ಎಸ್‌ಐಟಿಯ ವಶಕ್ಕೆ ಬಿಟ್ಟುಕೊಟ್ಟಿದೆ. ಇದರಂತೆ ಯುವತಿಗೆ ಲೈಂಗಿಕ ಕಿರುಕುಳ ನೀಡಲಾಗಿರುವ ಹೋಟೆಲ್ ಎಂದು ಹೇಳಲಾಗುತ್ತಿರುವ ಪಾಲಕ್ಕಾಡ್ ಕೆಪಿಎಂ ರೆಸಿಡೆನ್ಸಿ ಹೋಟೆಲ್ ಕೊಠಡಿಗೆ ರಾಹುಲ್ ನನ್ನು ಎಸ್‌ಐಟಿ ಸಾಗಿಸಿ ಅಗತ್ಯದ ಮಾಹಿತಿ ಸಂಗ್ರಹಿಸತೊಡಗಿದೆ. ಮಾತ್ರವಲ್ಲದೆ ರಾಹುಲ್‌ನ ಎರಡು ಮೊಬೈಲ್ …