ಪುತ್ರ ಶಾಲೆಯಿಂದ ಮನೆಗೆ ತಲುಪಿದಾಗ ತಾಯಿ ರಕ್ತದ ಮಡುವಿನಲ್ಲಿ: ತಲೆಗೆ ಬಡಿದು ಕೊಲೆಗೈದ ಪತಿ ಪರಾರಿ

ಇಡುಕ್ಕಿ: ಉಪ್ಪುತ್ತರದಲ್ಲಿ ಪತಿ ಪತ್ನಿಯನ್ನು ತಲೆಗೆ ಬಡಿದು ಕೊಲೆಗೈದ ಘಟನೆ ನಡೆದಿದೆ. ಉಪ್ಪುತ್ತರ ಮಲಯಕ್ಕಾವಿಲ್ ನಿವಾಸಿ  ರಜನಿ (37) ಕೊಲೆಗೀಡಾದ ಯುವತಿ.  ಪತಿ ಸುಬಿನ್‌ಗಾಗಿ ಪೊಲೀಸರು ತನಿಖೆ ಆರಂಭಿಸಿದ್ದು, ಈತ ಮಲೆಮರೆಸಿಕೊಂಡಿದ್ದಾ ನೆನ್ನಲಾಗಿದೆ.  ಪತಿ-ಪತ್ನಿಯ ಮಧ್ಯೆ ಪ್ರತಿದಿನ ವಾಗ್ವಾದ ಉಂಟಾಗುತ್ತಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ. ಈ ಬಗ್ಗೆ ಉಪ್ಪುತ್ತರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಒಂದು ತಿಂಗಳ ಹಿಂದೆ ಇವರಿಬ್ಬರು ಒಂದೇ ಮನೆಯಲ್ಲಿ ವಾಸ ಆರಂಭಿಸಿದ್ದರು. ಮಂಗಳವಾರ ಇವರ ಸಣ್ಣ ಮಗ ಶಾಲೆಯಿಂದ ಬಂದಾಗ ರಜನಿ ರಕ್ತದ ಮಡುವಿನಲ್ಲಿ …

ಅಸೌಖ್ಯ:ನಿಧನ

 ಮಂಗಲ್ಪಾಡಿ: ಪ್ರತಾಪನಗರ ನಿವಾಸಿ ಮೋಹಿನಿ (48) ನಿಧನ ಹೊಂದಿದರು. ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಇವರಿಗೆ ನಿನ್ನೆ ಬೆಳಿಗ್ಗೆ ಮನೆಂiiಲ್ಲಿ ಅಸೌಖ್ಯ ಉಲ್ಭಣಗೊಂಡಿದ್ದು, ಮಂಗಲ್ಪಾಡಿ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನ ಹೊಂದಿದ್ದಾರೆ. ಅವಿವಾಹಿತರಾದ ಇವರು ದಿವಂಗತರಾದ  ಜಾನಕಿ-ಕುಟ್ಟಿ ಮೇಸ್ತ್ರಿ ದಂಪತಿ ಪುತ್ರಿಯಾಗಿದ್ದಾರೆ. ಸಹೋದರಿ ಸುಹಾಸಿನಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿ ದ್ದಾರೆ. ಸಹೋದರಿಯರಾದ ಬೇಬಿ, ಲಲಿತಾ ಈ ಹಿಂದೆ ನಿಧನರಾಗಿದ್ದಾರೆ.

ಮಾಜಿ ಸಚಿವ ಇಬ್ರಾಹಿಂ ಕುಂಞಿ ನಿಧನ

ಕೊಚ್ಚಿ: ಮಾಜಿ ಸಚಿವಹಾಗೂ ಮುಸ್ಲಿಂ ಲೀಗ್‌ನ ರಾಜ್ಯ ಉಪಾಧ್ಯಕ್ಷ ರಾಗಿರುವ ವಿ.ಕೆ.ಇಬ್ರಾಹಿಂ ಕುಂಞಿ (73)  ಅಸೌಖ್ಯದಿಂದ ಕೊಚ್ಚಿಯ ಪಾಲಿಯೇಟಿವ್ ಕೇರ್ ಆಸ್ಪತ್ರೆಯಲ್ಲಿ ನಿನ್ನೆ ನಿಧನಹೊಂದಿದರು. ಇಬ್ರಾಹಿಂ ಕುಂಞಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಗೊಂಡಿ ದ್ದರು. ಮುಸ್ಲಿಂ ಲೀಗ್ ನೇತಾರ ಪಿ.ಕೆ. ಕುಂಞಾಲಿಕುಟ್ಟಿ ಯವರು ೨೦೦೫ರಲ್ಲಿ ತಮ್ಮ ಕೈಗಾರಿಕಾ ಖಾತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ತೆರವುಗೊಂಡ ಆ ಸ್ಥಾನಕ್ಕೆ ಇಬ್ರಾಹಿಂ ಕುಂಞಿಯವರನ್ನು ನೇಮಿಸಲಾಗಿತ್ತು.  ಆಗ ಅವರು ಮಟ್ಟಾಂಚೇರಿಯ ಶಾಸಕರಾಗಿದ್ದರು. ನಂತರ 2011ರಲ್ಲಿ ಕಳಮಶ್ಶೇರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ …

ಕರ್ನಾಟಕ ಮುಕ್ತ ವಿ.ವಿ ರಿಜಿಸ್ಟ್ರಾರ್ ಪೆರಡಾಲ ಕ್ಷೇತ್ರಕ್ಕೆ ಭೇಟಿ: ಸಹಾಯ ಭರವಸೆ

ಬದಿಯಡ್ಕ: ಜೀರ್ಣೋದ್ಧಾರಗೊ ಳ್ಳುತ್ತಿರುವ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ  ರಿಜಿಸ್ಟ್ರಾರ್ ಪ್ರೊ. ನವೀನ್ ಕುಮಾರ್ ಎಸ್.ಕೆ ಭೇಟಿ ನೀಡಿದರು. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳಿಗೆ, ಬ್ರಹ್ಮಕಲಶೋತ್ಸವಕ್ಕೆ ಸಹಕಾರ ನೀಡುವುದಾಗಿ ಅವರು ಭರ ವಸೆ ನೀಡಿದರು. ದೇವಳದ ಹೊರಾಂ ಗಣದ ಎದುರುಭಾಗದ ಕಲ್ಲು ಹಾಸುವ ಮತ್ತು ಸುತ್ತಲಿನ ಇಂಟರ್ ಲಾಕ್ ಹಾಕಿಸುವ ವೆಚ್ಚವನ್ನು ಭರಿಸುವುದಾಗಿ ಅವರು ತಿಳಿಸಿದ್ದಾರೆ. ಈ ವೇಳೆ ಆಡಳಿತ ಮಂಡಳಿ ಪದಾಧಿಕಾರಿಗಳು, ಬ್ರಹ್ಮಕಲಶೋತ್ಸವ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸ್ಕೂಟರ್-ಲಾರಿ ಢಿಕ್ಕಿ: ಡಿವೈಎಸ್‌ಪಿ ಕಚೇರಿಯ ಪಾರ್ಟ್‌ಟೈಂ ನೌಕರನಿಗೆ ಗಂಭೀರ ಗಾಯ

ಕಾಸರಗೋಡು: ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪ ಸಂಭವಿಸಿದ ವಾಹನ ಅಪಘಾತದಲ್ಲಿ ಪೊಲೀಸ್ ಇಲಾಖೆಯ ನೌಕರರೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಸ್ಟೇಟ್ ಸ್ಪೆಷಲ್ ಬ್ರಾಂಚ್ ಕಚೇರಿಯ ಪಾರ್ಟ್‌ಟೈಂ ನೌಕರನಾದ ಮುಳಿಯಾರು ಬಾವಿಕ್ಕರೆಯ ಬಾಬುರಾಜ್ (64) ಗಾಯಗೊಂಡಿದ್ದು, ಇವರನ್ನು ಚೆಂಗಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಬೆಳಿಗ್ಗೆ 7.30ರ ವೇಳೆ ಅಪಘಾತ ಸಂಭವಿಸಿದೆ. ವಿದ್ಯಾನಗರದಲ್ಲಿರುವ ಕಚೇರಿಗೆ ಕರ್ತವ್ಯಕ್ಕಾಗಿ ಬಾಬುರಾಜ್ ತೆರಳುತ್ತಿದ್ದರು. ಅವರು ಚಲಾಯಿಸುತ್ತಿದ್ದ ಸ್ಕೂಟರ್ ಹೊಸ ಬಸ್ ನಿಲ್ದಾಣ ಹಳೆ ಸರ್ಕಲ್ ಸಮೀಪಕ್ಕೆ ತಲುಪಿದಾಗ ಮಂಗಳೂರು ಭಾಗಕ್ಕೆ ತೆರಳುತ್ತಿದ್ದ ಲಾರಿ …

ಕೇರಳ ವಿಧಾನಸಭೆಗೆ ಎಪ್ರಿಲ್‌ನಲ್ಲಿ ಚುನಾವಣೆ ಸಾಧ್ಯತೆ: ಅವಲೋಕನಕ್ಕಾಗಿ ಕೇಂದ್ರ ಚುನಾವಣಾ ಆಯೋಗ ಮುಂದಿನ ತಿಂಗಳು ರಾಜ್ಯಕ್ಕೆ

ತಿರುವನಂತಪುರ: ವಿಧಾನಸಭಾ ಚುನಾವಣೆಗೆ ಕೇರಳ ತಯಾರಾಗಿದ್ದು ಇದರ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಅವಲೋಕನ ನಡೆಸಲು ಕೇಂದ್ರ ಚುನಾ ವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದ ತಂಡ ಮುಂದಿನ ತಿಂಗಳು ಕೇರಳಕ್ಕೆ ಆಗಮಿಸಲಿದೆ. ಕೇರಳ ವಿಧಾನಸಭಗೆ ಚುನಾವಣೆ ನಡೆಯಲಿರುವ ಬಗ್ಗೆ ಕೇಂದ್ರ ಚುನಾವಣಾ ಆಯೋಗ ನಿನ್ನೆ ಸಭೆ ಸೇರಿ  ಚರ್ಚೆ ನಡೆಸಿದೆ. ೨೦೨೧ರಂದು ನಡೆಸಲಾದ ರೀತಿಯಲ್ಲಿ ಈ ಬಾರಿಯೂ ಏಕ ಹಂತ ದಲ್ಲಿ ಚುನಾವಣೆ ನಡೆಸಲು ಆಯೋಗ  ಚಿಂತನೆ ನಡೆಸಿದೆ. ಕಳೆದಬಾರಿ ಎಪ್ರಿಲ್ ೬ರಂದು ಕೇರಳ ವಿಧಾನಸಭೆಯ …

ಅಗ್ನಿವೀರ್ ಆರ್ಮಿ ನೇಮಕಾತಿ ರ‍್ಯಾಲಿ ವಿದ್ಯಾನಗರದಲ್ಲಿ ಆರಂಭ

ಕಾಸರಗೋಡು: ಭಾರತೀಯ ಸೇನಾಪಡೆಗೆ ಯೋಧರ ನೇಮಕಾತಿಗಿರುವ  ಅಗ್ನಿವೀರ್ ಆರ್ಮಿ ರಿಕ್ರೂಟ್‌ಮೆಂಟ್ ರ‍್ಯಾಲಿ ವಿದ್ಯಾನಗರದ ನಗರಸಭಾ ಕ್ರೀಡಾಂಗಣದಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿತು. ರ‍್ಯಾಲಿಗೆ ಹೆಚ್ಚುವರಿ ಜಿಲ್ಲಾ ದಂಡನಾಧಿಕಾರಿ (ಎಡಿಎಂ) ಪಿ. ಅಖಿಲ್ ಧ್ವಜ ಹಾರಿಸಿ ಚಾಲನೆ ನೀಡಿದರು. ನೇಮಕಾತಿ ಇಂದಿನಿಂದ ಐದು ದಿನಗಳ ಕಾಲ ಮುಂದುವರಿಯಲಿದೆ. ಇದರಲ್ಲಿ ಕಾಸರಗೋಡಿನಿಂದ ತೃಶೂರ್ ತನಕದ  7 ಜಿಲ್ಲೆಗಳು ಹಾಗೂ ಕೇಂದ್ರಾಡಳಿತ ಪ್ರದೇಶವಾದ  ಲಕ್ಷದ್ವೀಪ್, ಮಾಹಿ ಎಂಬೆಡೆಗಳ 4೦೦೦ದಷ್ಟು ಉದ್ಯೋಗಾರ್ಥಿಗಳು ಈ ರ‍್ಯಾಲಿಯಲ್ಲಿ ಭಾಗವಹಿಸುತ್ತಿದ್ದಾರೆ. ಆನ್‌ಲೈನ್ ಮೂಲಕ ನಡೆಸಲಾದ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಮಾತ್ರವೇ …

ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಯುವತಿ, ಪತಿಗೆ ತಂಡದಿಂದ ಹಲ್ಲೆ

ಕಣ್ಣೂರು: ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾಗಿ ಸ್ಪರ್ಧಿಸಿದ ಯುವತಿ ಹಾಗೂ ಆಕೆಯ ಪತಿಗೆ ತಂಡ ವೊಂದು ಹಲ್ಲೆಗೈದ ಬಗ್ಗೆ ದೂರಲಾಗಿದೆ. ಘಟನೆಗೆ ಸಂಬಂಧಿಸಿ ೧೨ ಮಂದಿ ಸಿಪಿಎಂ ಕಾರ್ಯ ಕರ್ತರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪೆರಳಶ್ಶೇರಿ ಗ್ರಾಮ ಪಂಚಾಯತ್‌ನ ೧೩ನೇ ವಾರ್ಡ್ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಮುಂಡಲ್ಲೂರು ವಳಪ್ಪಿಲ್‌ನ ಕೆ. ರೀಜ (38), ಪತಿ ಎನ್. ಶೈಜು (48) ಎಂಬಿವರ ಮೇಲೆ ತಂಡ ಹಲ್ಲೆಗೈದಿದೆ. ಮೊನ್ನೆ ರಾತ್ರಿ 7.30 ರ ವೇಳೆ ರೀಜರ ಮನೆಗೆ …

ಅಂಗಡಿಯಿಂದ ಹಾಡಹಗಲೇ 45,೦೦೦ ರೂ. ಕಳವುಗೈದ ಆರೋಪಿ ಬಂಧನ

ಕಾಸರಗೋಡು: ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಕುಟ್ಟಿಕ್ಕೋಲ್‌ನಲ್ಲಿ ಅಂಗಡಿಯಿಂದ ಹಾಡಹಗಲೇ 45,೦೦೦ ರೂಪಾಯಿ ಕಳವುಗೈದ ಪ್ರಕರಣದಲ್ಲಿ ಕುಖ್ಯಾತ ಆರೋಪಿಯಾದ ಇರಿಟ್ಟಿ ಪೆರಿಂಗಾರಿ ಕುರುವಿಕಾಟಿಲ್ ಸಜು ಯಾನೆ ಕುರುವಿ ಸಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪ್ರಸ್ತುತ ನೀಲೇಶ್ವರ ತೈಕಡಪ್ಪುರದಲ್ಲಿ ವಾಸಿಸುತ್ತಿದ್ದನು. ಕಳವಿನ ಹಿಂದೆ ಕುರುವಿ ಸಜು ಆಗಿದ್ದಾನೆಂದು ತಿಳಿಸಿ ಜಿಲ್ಲಾ ಪೊಲೀಸ್ ಗುಪ್ತಚರ ವಿಭಾಗ ನೀಡಿದ ವರದಿಯ ಆಧಾರದಲ್ಲಿ ಬೇಡಗಂ ಎಸ್‌ಐ ಕೆ. ಉಮೇಶ್, ಎಎಸ್‌ಐ ನಾರಾಯಣನ್, ಪೊಲೀಸರಾದ ಬಿನೀಶ್, ವಿನೀಶ್ ಎಂಬಿವರು ತೈಕಡಪ್ಪುರಕ್ಕೆ ತಲುಪಿ ಆರೋಪಿಯನ್ನು …

ಬೆಳ್ಳೂರಿನಲ್ಲಿ ಶಾಲೆಗೆ ನಿರ್ಮಿಸಿದ ಬೇಲಿ ವಿದ್ಯಾರ್ಥಿಗಳಿಂದ ನಾಶ

ಮುಳ್ಳೇರಿಯ: ಬೆಳ್ಳೂರು ಸರಕಾರಿ ಪ್ರೌಢಶಾಲೆಯ ಒಂದು ಭಾಗದಲ್ಲಿ  ಸ್ಥಳವನ್ನು ಸ್ವಾಧೀನಪಡಿಸಿ ನಿರ್ಮಿಸಿದ ತಂತಿ ಬೇಲಿ ಹಾಗೂ ಕಾಂಕ್ರೀಟ್ ಪಿಲ್ಲರ್‌ಗಳನ್ನು ವಿದ್ಯಾರ್ಥಿಗಳು ಹಾಗೂ ನಾಗರಿಕರು ಸೇರಿ ನಾಶಗೊಳಿಸಿದ್ದಾರೆ. ೧೯೪೭ ಆಗಸ್ಟ್ ೧೫ರಂದು ಸ್ಥಳೀಯ ನಿವಾಸಿಯಾದ ಸುಬ್ರಹ್ಮಣ್ಯ ಎಂಬವರು ಪ್ರಸ್ತುತ ಸ್ಥಳವನ್ನು ಶಾಲೆ ನಿರ್ಮಿಸಲು ಸರಕಾರಕ್ಕೆ ನೀಡಿದ್ದರೆಂದು ಹೇಳಲಾಗುತ್ತಿದೆ. ಪ್ರಸ್ತುತ ಸ್ಥಳದಲ್ಲಿ ಶಾಲಾ ಕಟ್ಟಡಗಳನ್ನು ನಿರ್ಮಿಸಿ ತರಗತಿಗಳನ್ನು ನಡೆಸಲಾಗುತ್ತಿದೆ. ಈ ಮಧ್ಯೆ ಸ್ಥಳದ ಮಧ್ಯದಲ್ಲಾಗಿ ರಸ್ತೆ ನಿರ್ಮಿಸಲಾಗಿದೆ. ಶಾಲೆಯ ಕಿಂಡರ್‌ಗಾರ್ಟನ್ ವಿಭಾಗದಿಂದ ಎಲ್‌ಪಿ, ಯುಪಿ ವಿಭಾಗ ಹಾಗೂ ಅಡುಗೆ ಕೊಠಡಿ, …