ಬಿಎಸ್‌ಎನ್‌ಎಲ್ ಕೇಬಲ್ ಕತ್ತರಿಸಿ ಸಾಗಿಸಲೆತ್ನ: ಇಬ್ಬರು ಅಸ್ಸಾಂ ನಿವಾಸಿಗಳ ಸೆರೆ

ಕಾಸರಗೋಡು: ಬಿಎಸ್‌ಎನ್ ಎಲ್‌ನ ಕೇಬಲ್‌ನ್ನು ಕತ್ತರಿಸಿ ಸಾಗಿಸಲೆತ್ನಿಸಿದ ಆರೋಪದಂತೆ ಅಸ್ಸಾಂ ನಿವಾಸಿಗಳಾದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ನಿವಾಸಿಗಳಾದ ಶಾಹಿರುಲ್ ಇಸ್ಲಾಂ (29) ಮತ್ತು ಅಮೀರುಲ್ ಇಸ್ಲಾಂ (3೦) ಬಂಧಿತ ಆರೋಪಿಗಳು, ಭೀಮ ನಡಿ ಸೇತುವೆ ಬಳಿ ಚಿತ್ತಾರಿಕ್ಕಲ್ ಪೊಲೀಸರು ವಾಹನದಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಆ ಸೇತುವೆ ಬಳಿ ಆರೋಪಿ ಗಳಿಬ್ಬರು ಕೇಬಲ್ ಕತ್ತರಿಸುತ್ತಿರುವುದನ್ನು ಕಂಡು ತಕ್ಷಣ ಅವರಿಬ್ಬರನ್ನು ಸೆರೆಹಿಡಿದು  ಪ್ರಕರಣ ದಾಖಲಿಸಿಕೊಂಡರು.

ಸಚಿವ ಜನೀಶ್‌ರ ಕಾರು ತಡೆದು ನಿಲ್ಲಿಸಿ ಪ್ರತಿಭಟನೆ :ಸಿಪಿಎಂ ಬ್ರಾಂಚ್ ಕಾರ್ಯದರ್ಶಿ ಸೇರಿದಂತೆ ಹಲವರ ಸೆರೆ

ಕಾಸರಗೋಡು: ಹೊಸದುರ್ಗ  ಮತ್ತು ನೀಲೇಶ್ವರದಲ್ಲಿ  ಸಚಿವ ಒ.ಜೆ.ಜನೀಶರ ಕಾರನ್ನು ತಡೆದು ನಿಲ್ಲಿಸಿ ಪ್ರತಿಭಟನೆ ನಡೆಸಿದ ಪ್ರಕರಣಗಳಿಗೆ ಸಂಬಂಧಿಸಿ ಸಿಪಿಎಂ ಬ್ರಾಂಚ್ ಕಾರ್ಯದರ್ಶಿ, ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ಕಾರ್ಯಕರ್ತರು ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗದಲ್ಲಿ  ಸಚಿವರ ಕಾರು ತಡೆದ ನಿಲ್ಲಿಸಿ ಪ್ರತಿಭಟನೆ ನಡೆಸಿದ  ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ಒಳಿಂಞ್ಞವಳಪ್ಪು ಬ್ರಾಂಚ್ ಕಾರ್ಯದರ್ಶಿ  ಅಖಿಲ್ ಒಳಿಂಞ್ಞವಳಪ್ (32), ಡಿವೈಎಫ್‌ಐ ಹೊಸದುರ್ಗ ವಲಯ ಕೋಶಾಧಿಕಾರಿ ಸಚಿನ್ ಕೋಟ್ಟಲ್ ಪಳ್ಳ (29), ಹೊಸದುರ್ಗ ಬ್ಲೋಕ್ ಜತೆ ಕಾರ್ಯದರ್ಶಿ ನಿಧಿನ್ ಕುಶಾಲ್ ನಗರ …

ಕಾರಿನಲ್ಲಿ ಸಾಗಿಸುತ್ತಿದ್ದ 36626 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನ ವಶ: ಓರ್ವ ಸೆರೆ

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ  ಕೇರಳದಲ್ಲಿ ನಿಷೇಧ ಹೇರಲಾಗಿರುವ 36626 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು  ಕಾಸರಗೋಡು ಪೊಲೀಸರು ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.  ಇದಕ್ಕೆ ಸಂಬಂಧಿಸಿ ಮಧೂರು ಚೆಟ್ಟುಂಗುಳಿ  ನಿವಾಸಿ ಮುಹಮ್ಮದ್ ಸಫೀರ್ ಸಿ.ಕೆ (27) ಎಂಬಾತನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾಸರಗೋಡು ಠಾಣೆ ಎಸ್.ಐ ಮನು ಪಿ.ವಿಯವರ ನೇತೃತ್ವದ ಪೊಲೀಸರು ನಿನ್ನೆ ರಾತ್ರಿ ಕೂಡ್ಲು ಆಜಾದ್ ನಗರದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಆ ದಾರಿಯಾಗಿ ಚೌಕಿಯಿಂದ ಉಳಿಯತ್ತಡ್ಕಕ್ಕೆ ಹೋಗುತ್ತಿದ್ದ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ …

ಮನೆಯಿಂದ ಮದ್ಯ, ಬಿಯರ್ ಪತ್ತೆ

ಕುಂಬಳೆ:  ಕುಂಬಳೆ ದೇವಿನಗರದಲ್ಲಿ ಡ್ರೈ ಡೇ ದಿನವಾದ ನಿನ್ನೆ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಗ್ರೇಡ್ ಸಿಕೆವಿ ಸುರೇಶ್ ನೇತೃತ್ವದ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಮನೆಯೊಂದರಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಹೆಚ್ಚು  ಬಚ್ಚಿಡಲಾದ ಕೇರಳ ಮದ್ಯ ಬಿಯರ್ ಪತ್ತೆಹಚ್ಚಿ ವಶಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿ ಪವನ್‌ರಾಜ್ ಎಂಬಾತನ ವಿರುದ್ಧ  ಪ್ರಕರಣ ದಾಖಲಿಸಲಾಗಿದೆ. ಆರೋಪಿಯ ಸಂಬಂಧಿಕರೋರ್ವರ ವಾಸವಿಲ್ಲದ ಮನೆಯಲ್ಲಿ ಈ ಮಾಲು ಬಚ್ಚಿಡಲಾಗಿತ್ತು. ಅದರಲ್ಲಿ 65೦ ಎಂಎಲ್‌ನ 84 ಬಾಟಲಿ (54.9 ಲೀಟರ್) ಕೇರಳಮದ್ಯ ಮತ್ತು …

ವರ್ಕ್ ಶಾಪ್‌ನಲ್ಲಿ ನಿಲ್ಲಿಸಿದ್ದ ಕಾರಿಗೆ ಕಿಚ್ಚಿಟ್ಟು ನಾಶ: ದುಷ್ಕರ್ಮಿಗಳಿಗಾಗಿ ತನಿಖೆ ತೀವ್ರ

ಕುಂಬಳೆ: ಪೆರ್ಮುದೆ ಪೆರಿಯಡ್ಕದ ವರ್ಕ್ ಶಾಪ್‌ನಲ್ಲಿ ನಿಲ್ಲಿಸಿದ್ದ ಕಾರಿಗೆ ಕಿಚ್ಚಿಟ್ಟು ನಾಶಗೊಳಿಸಿದ ಪ್ರಕರಣದಲ್ಲಿ ತನಿಖೆ ತೀವ್ರಗೊಳಿಸಿರುವುದಾಗಿ ಕುಂಬಳೆ ಪೊಲೀಸರು ತಿಳಿಸಿದ್ದಾರೆ. ಪೆರಿಯಡ್ಕದಲ್ಲಿ ಟಿ. ರೋಹಿತಾಕ್ಷ ಎಂಬವರ ವರ್ಕ್ ಶಾಪ್‌ನಲ್ಲಿ ನಿಲ್ಲಿಸಿದ್ದ ಪೈವಳಿಕೆಯ ಅಬ್ದುಲ್ ರಶೀದ್‌ರ ಮಾಲಕತ್ವದ ಪೋಲೋ ಕಾರನ್ನು ದುಷ್ಕರ್ಮಿಗಳು ಕಿಚ್ಚಿಟ್ಟು ನಾಶಗೊಳಿಸಿದ್ದಾರೆ. ದುರಸ್ತಿ  ಕೆಲಸಗಳಿಗಾಗಿ ಕಾರನ್ನು ವರ್ಕ್ ಶಾಪ್‌ನಲ್ಲಿರಿಸಲಾಗಿತ್ತು. ನಿನ್ನೆ ವರ್ಕ್ ಶಾಪ್ ಮಾಲಕ ತಲುಪಿದಾಗ ಕಾರು ಉರಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಈ ಬಗ್ಗೆ ಲಭಿಸಿದ  ದೂರಿನಂತೆ ಕುಂಬಳೆ ಸಿಐ ಆರ್.ಪಿ ಅನೂಪ್‌ಕೃಷ್ಣ, ಎಸ್‌ಎಚ್‌ಒ ಎಸ್. …

ಮನೆಯ ಸಿಟೌಟ್‌ನಲ್ಲಿ ಗೃಹಿಣಿ ನಿಗೂಢವಾಗಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಮನೆಯ ಸಿಟೌಟ್‌ನಲ್ಲಿ ಗೃಹಿಣಿಯೋರ್ವೆ ನಿಗೂಢವಾಗಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾ ಗಿದ್ದಾರೆ. ಕುಡಾಲ್‌ಮೇರ್ಕಳ ಲಂಕಿನಡ್ಕ ನಿವಾಸಿ ಸವಿತ (51) ಮೃತಪಟ್ಟ ಗೃಹಿಣಿ. ಇಂದು ಬೆಳಿಗ್ಗೆ  ಇವರು ಮನೆಯ ಸಿಟೌಟ್‌ನಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಕಂಡುಬಂದಿದ್ದು, ಈ ಬಗ್ಗೆ ಲಭಿಸಿದ ಮಾಹಿತಿಯಂತೆ  ಕುಂಬಳೆ ಇನ್ ಸ್ಪೆಕ್ಟರ್ ಅನೂಪ್‌ಕೃಷ್ಣರ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ. ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಸವಿತರ ಕಾಲು,ಕೈಗಳಲ್ಲಿ ಗಾಯಗಳು ಕಂಡುಬಂದಿರುವುದಾಗಿ ತಿಳಿದುಬಂದಿದೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ  ಕೊಂಡೊಯ್ಯಲಾಗಿದೆ. ಇದೇ ವೇಳೆ …

ಬೈಕ್ ಅಪಘಾತ ಗಾಯಗೊಂಡಿದ್ದ ಕುತ್ತಿಕೋಲ್  ಪಂಚಾಯತ್ ಕ್ಲರ್ಕ್ ಮೃತ್ಯು

ಕಾಸರಗೋಡು: ಕೊಲ್ಲಂನಲ್ಲಿ ಸಂಭವಿಸಿದ್ದ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಕುತ್ತಿಕೋಲ್ ಪಂಚಾಯತ್‌ನ ಕ್ಲ್ಲರ್ಕ್ ಮೃತಪಟ್ಟರು. ಕೊಲ್ಲಂ ನಿವಾಸಿ ಅಲಕ್ಸ್ ಜೋನ್ಸನ್ (28) ಮೃತಪಟ್ಟವರು. ಕಳೆದ ತಿಂಗಳ ೨೧ರಂದು ಅಪಘಾತ ಸಂಭವಿಸಿತ್ತು. ಬೆಕ್ಕು ರಸ್ತೆಗೆ ಅಡ್ಡಬಂದ ಹಿನ್ನೆಲೆಯಲ್ಲಿ ತಪ್ಪಿಸಲೆತ್ನಿಸುವಾಗ ಬೈಕ್ ನಿಯಂತ್ರಣ ತಪ್ಪಿ ಮಗುಚಿತ್ತು. ಗಾಯಗೊಂಡ ಅಲಕ್ಸ್‌ರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿರಿಸಲಾಗಿತ್ತು. ನಿನ್ನೆ ಬೆಳಿಗ್ಗೆ ನಿಧನ ಸಂಭವಿಸಿದೆ. ಕಳೆದ ಒಂದೂವರೆ ವರ್ಷದಿಂದ ಕುತ್ತಿಕೋಲ್ ಪಂಚಾಯತ್‌ನಲ್ಲಿ ಕರ್ತವ್ಯದಲ್ಲಿದ್ದರು. ಈ ಮೊದಲು ಚೆಂಗಳ ಪಂಚಾಯತ್‌ನಲ್ಲಿಯೂ ಕ್ಲರ್ಕ್ ಆಗಿ ಕರ್ತವ್ಯ ನಿರ್ವಹಿಸಿದ್ದರು.

ಪುತ್ತಿಗೆ ಮುಗುರೋಡ್‌ನಲ್ಲಿ ವಾಹನ ಅಪಘಾತ : ಯುವಕನ ಸಾವಿನಿಂದ ಶೋಕಸಾಗರ

ಸೀತಾಂಗೋಳಿ: ಸೀತಾಂಗೋಳಿ-ಪೆರ್ಲ ರಸ್ತೆಯ ಮುಗು ರೋಡ್‌ನಲ್ಲಿ  ಸಂಭವಿಸಿದ ವಾಹನ ಅಪಘಾತದಲ್ಲಿ ಯುವಕ ಮೃತಪಟ್ಟ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಮುಗು ಊಜಂಪದವಿನ ದಿ| ಮೊಯ್ದು ಎಂಬವರ ಪುತ್ರ ಎಂ.ಟಿ. ಮುಹಮ್ಮದ್ ಅಶ್ರಫ್ (೪೦) ಮೃತಪಟ್ಟ ದುರ್ದೈವಿಯಾಗಿದ್ದಾರೆ.  ನಿನ್ನೆ ಮಧ್ಯಾಹ್ನ ವೇಳೆ ಈ ಅಪಘಾತ ಸಂಭವಿಸಿದೆ. ಪತ್ನಿ ಖೈರುನ್ನೀಸರನ್ನು  ತಪಾಸಣೆ ನಡೆಸಲೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ದಂಪತಿ ಸಂಚರಿಸುತ್ತಿದ್ದ ಬೈಕ್ ಮುಗುರೋಡ್‌ಗೆ ತಲುಪಿದಾಗ ಅಪರಿಮಿತ ವೇಗದಲ್ಲಿ ಬಂದ ಕಾರು  ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ …

17ರ ಹರೆಯದ ಬಾಲಕಿ ಗರ್ಭಿಣಿ : 45ರ ವ್ಯಕ್ತಿ ವಿರುದ್ಧ ಪೋಕ್ಸೋ ಕೇಸು

ಬದಿಯಡ್ಕ: 45ರ ಹರೆಯದ ವ್ಯಕ್ತಿಯಿಂದ ಲೈಂಗಿಕ ಕಿರುಕುಳಕ್ಕೊಳಗಾದ 17ರ ಹರೆಯದ ಬಾಲಕಿ ಗರ್ಭಿಣಿಯಾಗಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಆಸ್ಪತ್ರೆ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಬದಿಯಡ್ಕ ಪೊಲೀಸರು ವ್ಯಕ್ತಿ ವಿರುದ್ಧ ಪೋಕ್ಸೋ ಪ್ರಕಾರ ಕೇಸು ದಾಖಲಿಸಿ  ತನಿಖೆ ಆರಂಭಿಸಿದ್ದಾರೆ.  ಅಸಹನೀಯ ಹೊಟ್ಟೆ ನೋವು ಅನುಭವಗೊಂಡ ಬಾಲಕಿ  ಚಿಕಿತ್ಸೆಗಾಗಿ ಆಸ್ಪತ್ರೆಗೆ ತಲುಪಿದಾಗಲೇ ಆಕೆ ಗರ್ಭಿಣಿಯಾಗಿದ್ದಾಳೆಂಬ ವಿಷಯ ತಿಳಿದುಬಂದಿದೆ. ಈ ಬಗ್ಗೆ ವೈದ್ಯರು  ಬದಿಯಡ್ಕ ಪೊಲೀಸರಿಗೆ ತಿಳಿಸಿದ್ದಾರೆ. ಇದರಂತೆ ಪೊಲೀಸರು ಬಾಲಕಿಯಿಂದ ಮಾಹಿತಿ ಸಂಗ್ರಹಿಸಿಕೊಂಡ ಬಳಿಕ ಪೋಕ್ಸೋ ಕೇಸು ದಾಖಲಿಸಿಕೊಂಡಿದ್ದಾರೆ.    …

ನಿಲ್ಲಿಸಿದ್ದ ಕಾರಿನಿಂದ ಎಂಡಿಎಂಎ, 3 ಲಕ್ಷ ರೂ. ವಶ: ಹಲವು ಪ್ರಕರಣಗಳ ಆರೋಪಿ ಬಂಧನ

ಕುಂಬಳೆ: ಮುಟ್ಟಂ ರೈಲ್ವೇ ಗೇಟ್ ಸಮೀಪ ನಿಲ್ಲಿಸಿದ್ದ ಕಾರಿನಿಂದ 2,97,500 ರೂ. ಹಾಗೂ 1.8 ಗ್ರಾಂ ಎಂಡಿಎಂಎ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದು, ಈ ಸಂಬಂಧ ಓರ್ವನನ್ನು ಬಂಧಿಸಲಾಗಿದೆ. ಶಿರಿಯ ಬತ್ತೇರಿಯ ಬತ್ತೇರಿ ಮಹಲ್‌ನ ಅಬ್ದುಲ್ಲ ಅನ್ಸಾದ್ (26) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯ ಮೇಲ್ನೋಟದಲ್ಲಿರುವ ನಾರ್ಕೋಟಿಕ್ ಸೆಲ್ ಡಾನ್ಸಾಪ್ ಟೀಂ ಹಾಗೂ ಕುಂಬಳೆ ಪೊಲೀಸರು ಸಂಯುಕ್ತವಾಗಿ ನಡೆಸಿದ ಕಾರ್ಯಾಚರಣೆಯಲ್ಲಿ  ಈತನನ್ನು ಬಂಧಿಸಲಾಗಿದೆ. ಅನ್ಸಾದ್ ವಿರುದ್ಧ  ಮಂಜೇಶ್ವರ ಹಾಗೂ ವಿದ್ಯಾನಗರದಲ್ಲಿ ಕೇಸುಗಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ …