ಬಸ್‌ಗೆ ಕಲ್ಲೆಸೆತ: ಆರೋಪಿ ಪೊಲೀಸ್ ಕಸ್ಟಡಿಯಲ್ಲಿ
ಉಪ್ಪಳ: ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲೆಸೆದು ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಉಪ್ಪಳ ಮಣ್ಣಂಗುಳಿ ಪಂಡಿಕುಡಿ ಹೌಸ್‌ನ ಹಮೀದ್ ಅಲಿ (65) ಎಂಬಾತನನ್ನು ಕಸ್ಟಡಿಗೆ ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೊನ್ನೆ ರಾತ್ರಿ ೯ ಗಂಟೆ ವೇಳೆ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕೇರಳ ರಾಜ್ಯ ಸಾರಿಗೆ ಬಸ್‌ಗೆ ತಲಪಾಡಿಯಲ್ಲಿ ಕಲ್ಲೆಸೆಯಲಾಗಿತ್ತು. ಇದರಿಂದ ಬಸ್‌ನ ಹಿಂಬದಿ ಗಾಜು ನಾಶಗೊಂಡಿದೆ. ಈ ಬಗ್ಗೆ ಬಸ್‌ನ ನೌಕರರು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಇದರಂತೆ ಪೊಲೀಸರು ಕೇಸು …