ಯುವಕನನ್ನು ಸೀಮೆ ಎಣ್ಣೆ ಸುರಿದು ಕಿಚ್ಚಿಟ್ಟು ಕೊಲೆಗೈಯ್ಯಲೆತ್ನ: ಯುವತಿ ಸಹಿತ ನಾಲ್ಕು ಮಂದಿ ಪೊಲೀಸ್ ಕಸ್ಟಡಿಯಲ್ಲಿ ಎಎಸ್‌ಪಿ ನೇತೃತ್ವದಲ್ಲಿ ಸಮಗ್ರ ತನಿಖೆ ಆರಂಭ
ಕುಂಬಳೆ: ಮೊಗ್ರಾಲ್‌ನಲ್ಲಿ ಯುವಕನನ್ನು ತಡೆದು ನಿಲ್ಲಿಸಿದೇಹಕ್ಕೆ ಸೀಮೆ ಎಣ್ಣೆ ಸುರಿದು ಕಿಚ್ಚಿಟ್ಟು ಕೊಲೆ ಗೈಯ್ಯಲು ಯತ್ನಿಸಿದ ಪ್ರಕರಣದಲ್ಲಿ ಯುವತಿ ಸಹಿತ ನಾಲ್ಕು ಮಂದಿ ಯನ್ನು ಕುಂಬಳೆ ಪೊಲೀಸರು ಕಸ್ಟಡಿಗೆ ತೆಗೆದು ತನಿಖೆ ನಡೆಸುತ್ತಿದ್ದಾರೆ. ತಮಿಳುನಾಡಿನ ನಾಗಪಟ್ಟಣಂ ನಿವಾಸಿಗಳಾದ ಶರವಣ, ಲಿಂಗ, ಮಾರಿ ಹಾಗೂ ವೆಳ್ಳುಪುರಂ ನಿವಾಸಿಯಾದ ಇನ್ನೋರ್ವ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಕರ್ನಾಟಕದ ಹುಬ್ಬಳ್ಳಿ ನಿವಾಸಿಯೂ, ಮೊಗ್ರಾಲ್ ಕೊಪ್ಪಳದಲ್ಲಿ ವಾಸಿಸುವ ಸಾರಣೆ ಮೇಸ್ತ್ರಿಯಾದ ಅಬ್ದುಲ್ ಗಫೂರ್ (45)ರ ದೂರಿನ ಮೇರೆಗೆ ಇವರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಿಸಿ ಕಸ್ಟಡಿಗೆ …