ಏಮ್ಸ್: ಪಟ್ಟಿಯಲ್ಲಿ ಕಾಸರಗೋಡನ್ನು ಒಳಪಡಿಸಬೇಕು-ಸಂಸದ
ಕಾಸರಗೋಡು: ಕೇರಳದಲ್ಲಿ ಸ್ಥಾಪಿಸಲಾಗುವ ಏಮ್ಸ್ ಆಸ್ಪತ್ರೆಯ ಪ್ರಸ್ತಾವನೆ ಪಟ್ಟಿಯಲ್ಲಿ ಕಾಸರಗೋಡು ಜಿಲ್ಲೆಯನ್ನು ಒಳಪಡಿಸಬೇಕೆಂದು ಸಂಸತ್‌ನ ಮಳೆಗಾಲದ ಅಧಿವೇಶನದ ಪೂರ್ವಭಾವಿಯಾಗಿ ರಾಜ್ಯ ಸರಕಾರ ತಿರುವನಂತಪುರದಲ್ಲಿ ಕರೆದ ಕೇರಳದ ಸಂಸದರ ಸಭೆಯಲ್ಲಿ ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಆಗ್ರಹಪಟ್ಟಿದ್ದಾರೆ. ಕಾಸರಗೋಡು ಜಿಲ್ಲೆಯನ್ನು ಒಳಪಡಿಸಿ ಪ್ರಸ್ತಾವನೆ ಯನ್ನು ಕೇಂದ್ರಕ್ಕೆ ಸಲ್ಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಏಮ್ಸ್ ಪಟ್ಟಿಯಲ್ಲಿ ಕಾಸರಗೋ ಡನ್ನು ಒಳಪಡಿಸದೇ ಇರುವುದು ಜಿಲ್ಲೆಯೊಂದಿಗೆ ತೋರುತ್ತಿರುವ ಅವಗಣನೆಯ ಮುಂದುವರಿಕೆ ಯಾಗಿದೆ. ಏಮ್ಸ್ ಸ್ಥಾಪಿಸಲು ಅನುಕೂಲಕರವಾದ ೨೦೦೦ ಎಕ್ರೆಯಷ್ಟು ಸರಕಾರಿ ಭೂಮಿ ಪುಲ್ಲೂರುಪೆರಿಯ ಪಂಚಾಯತ್‌ನಲಿ ದೆಯೆಂದು …