ಶಬರಿಮಲೆ ಪ್ರಕರಣದಲ್ಲಿ ಹೊಸ ತಿರುವು: ರ್ಭಗುಡಿಯ ಚಿನ್ನ ಹೊದಿಸಿದ್ದ ಪ್ರಭಾವಳಿ ಸೇರಿ ಇನ್ನಷ್ಟು ಚಿನ್ನ ಕಳವು ; ಮತ್ತೆ ಮಾಜಿ ಸಚಿವರ ವಿಚಾರಣೆ ಸಾಧ್ಯತೆ
ತಿರುವನಂತಪುರ: ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿ ದೇಗುಲದಲ್ಲ್ಲಿ ದ್ವಾರಪಾಲಕ ಮೂರ್ತಿಗಳ ಚಿನ್ನ ಮಾತ್ರವಲ್ಲ ಚಿನ್ನ ಹೊದಿಸಲ್ಪಟ್ಟ ಪ್ರಭಾವಳಿ ಸೇರಿದಂತೆ ಇತರ ಹಲವು ಸಾಮಗ್ರಿಗಳನ್ನು ಕದ್ದು ಸಾಗಿಸಲಾಗಿದೆ ಎಂಬ ಮಾಹಿತಿ ವಿಶೇಷ ತನಿಖಾ ತಂಡಕ್ಕೆ ಲಭಿಸಿದೆ. ಈ ದೇಗುಲದ ಗರ್ಭಗುಡಿ ಯೊಳಗಿನ ಶಿವ ರೂಪ ಹಾಗೂ ಇತರ ಕೆತ್ತನೆಯ ರೂಪಗಳು ಒಳಗೊಂಡ ಚಿನ್ನ ಲೇಪಿತ ಪ್ರಭಾವಳಿಯನ್ನು ಇರಿಸಲಾಗಿದೆ. ಇದರ ಹೊರತಾಗಿ ದಶಾವತಾರ ರೂಪಗಳು ಒಳಗೊಂಡ ಎರಡು ತಾಮ್ರದ ಕವಚಗಳು, ರಾಶಿ ಚಿನ್ಹೆಗಳು ಒಳಗೊಂಡ ಇತರ ಎರಡು ಕವಚಗಳು ಹಾಗೂ ಗರ್ಭಗುಡಿಯ …