ಡೆಂಗ್ಯೂ ಜ್ವರ ಬಾಧಿಸಿ ಯುವತಿ ಮೃತ್ಯು: ಕುಂಬಳೆಯಲ್ಲಿ ಆರೋಗ್ಯಾಧಿಕಾರಿಗಳಿಂದ ಮುಂಜಾಗ್ರತೆ ಕ್ರಮ

ಕುಂಬಳೆ: ಡೆಂಗ್ಯೂ ಜ್ವರ ಬಾಧಿಸಿ ಯುವತಿಯೋರ್ವೆ ಮೃತಪಟ್ಟ ಹಿನ್ನೆಲೆಯಲ್ಲಿ ಕುಂಬಳೆಯಲ್ಲಿ ಆರೋ ಗ್ಯಾಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ. ಇದರಂಗವಾಗಿ ಮೃತಪಟ್ಟ ಯುವತಿಯ ಮನೆಗೆ ಭೇಟಿ ನೀಡಿ  ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲದೆ ಮನೆ ಹಾಗೂ ಪರಿಸರ ಪ್ರದೇಶವನ್ನು ಶುಚಿಯಾಗಿಡುವಂತೆ ಆರೋಗ್ಯಾಧಿಕಾರಿಗಳು ಸಾರ್ವಜನಿ ಕರಿಗೆ ಕರೆ ನೀಡಿದ್ದಾರೆ. ಆರಿಕ್ಕಾಡಿ ಜೋಡುಗುಳಿ ಎಂಬಲ್ಲಿನ ಮಾಧವ-ಸಂಧ್ಯಾ ದಂಪತಿಯ ಪುತ್ರಿ ಪಯಸ್ವಿನಿ(22) ಡೆಂಗ್ಯೂಜ್ವರ ಬಾಧಿಸಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಜ್ವರ ಬಾಧಿಸಿದ್ದ ಈಕೆಯನ್ನು ಎರಡು ದಿನಗಳ ಹಿಂದೆ  ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಶನಿವಾರ …

ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ| ಯು.ಬಿ. ಕುಣಿಕುಳ್ಳಾಯ ನಿಧನ

ಕಾಸರಗೋಡು: ನಿವೃತ್ತ   ಡಿಎಂಒ ಡಾ. ಯು.ಬಿ. ಕುಣಿಕುಳ್ಳಾಯ (89) ನಿಧನ ಹೊಂದಿದರು. ಕಾಞಂಗಾಡ್ ಕುನ್ನುಮ್ಮಲ್‌ನಲ್ಲಿ ವಾಸಿಸುತ್ತಿದ್ದರು.  ಜಿಲ್ಲೆಯ ಹಿರಿಯ ಎಲುಬುರೋಗ ತಜ್ಞನಾಗಿದ್ದರು. ಮುಳ್ಳೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಕಲ್ಲಿಕೋಟೆ ಇಎಸ್‌ಐ ವೈದ್ಯಾಧಿಕಾರಿ, ಜಿಲ್ಲಾಸ್ಪತ್ರೆಯ ಸಿವಿಲ್ ಸರ್ಜನ್ ಮೊದಲಾದ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕೆಜಿಎಂಒಎ, ಕಾಞಂಗಾಡ್ ಐಎಂಎ, ಜಿಲ್ಲಾ ಆರ್ಥೋ ಕ್ಲಬ್ ಅಧ್ಯಕ್ಷರಾಗಿದ್ದರು. ಬದಿಯಡ್ಕದ ಉಬ್ರಂಗಳ ಇವರ ಜನ್ಮಸ್ಥಳವಾಗಿದ್ದು, ತರವಾಡು ಮನೆಯ ಹಿತ್ತಿಲಲ್ಲಿ ಸಂಸ್ಕಾರ ನಡೆಸಲಾಗಿದೆ. ಮೃತರು ಪತ್ನಿ ಡಾ| ಕೃಷ್ಣ ಕುಮಾರಿ, ಮಕ್ಕಳಾದ ಡಾ| ಸೀಮ …

ರಬ್ಬರ್ ಶೀಟ್ ನಿರ್ಮಾಣ ಘಟಕದಲ್ಲಿ ಬೆಂಕಿ ಅನಾಹುತ: ಭಾರೀ ನಾಶನಷ್ಟ

ನೆಕ್ರಾಜೆ: ಇಲ್ಲಿಗೆ ಸಮೀಪದ ಆಲಂಕೂಡ್ಲುನಲ್ಲಿ ರಬ್ಬರ್ ಶೀಟ್ ನಿರ್ಮಾಣ ಘಟಕಕ್ಕೆ ಇಂದು ಮುಂಜಾನೆ ಬೆಂಕಿ ತಗಲಿ ಭಾರೀ ನಷ್ಟ ಉಂಟಾಗಿದೆ. ಲಕ್ಷ್ಮೀಶ ಬಳ್ಳುಳ್ಳಾಯ ಎಂಬವರ ಮನೆ ಪಕ್ಕದಲ್ಲಿ ಕಾರ್ಯವೆಸಗುತ್ತಿರುವ ಘಟಕದಲ್ಲಿ ಈ ಬೆಂಕಿ ಅನಾಹುತ ಸಂಭವಿಸಿದೆ. ರಬ್ಬರ್ ಶೀಟ್‌ಗಳು, ಬಾಗಿಲುಗಳು ಮತ್ತಿತರ ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ. ಇದರಿಂದ ಸುಮಾರು ಎರಡು ಲಕ್ಷ ರೂ. ತನಕ ನಷ್ಟ ಉಂಟಾಗಿದೆ ಎಂದು ಈ ಘಟಕದ ಮಾಲಕರು ತಿಳಿಸಿದ್ದಾರೆ. ಬೆಂಕಿ ತಗಲಿದ ಬಗ್ಗೆ ನೀಡಲಾದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕ ದಳ  ಸ್ಥಳಕ್ಕೆ ಆಗಮಿಸಿ …

ಅನಧಿಕೃತವಾಗಿ ಕೆಂಪುಕಲ್ಲು ಗಣಿಗಾರಿಕೆ, ಸಾಗಾಟ: ಪೈವಳಿಕೆ ಪಂ. ಸದಸ್ಯ, ಡಿವೈಎಫ್‌ಐ ನೇತಾರನ ವಿರುದ್ಧ ವಿಟ್ಲದಲ್ಲಿ ಕೇಸು ದಾಖಲು

ಕುಂಬಳೆ: ಅನಧಿಕೃತವಾಗಿ ಕೆಂಪುಕಲ್ಲು ಗಣಿಗಾರಿಕೆ ಹಾಗೂ ಕೆಂಪುಕಲ್ಲು, ಕೆಂಪುಮಣ್ಣು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಡಿವೈಎಫ್‌ಐ ನೇತಾರನೂ, ಪೈವಳಿಕೆ ಪಂಚಾಯತ್ ಸದಸ್ಯನಾದ ಜೆಕ್ಕಿ ಯಾನೆ ಸಕರಿಯ ವಿರುದ್ಧ ದಕ್ಷಿಣಕನ್ನಡ ಜಿಲ್ಲೆಯ ವಿಟ್ಲ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಗಣಿಗಾರಿಕೆಗಾಗಿ ಉಪಯೋಗಿ ಸಿದ ಯಂತ್ರೋಪಕರಣಗಳು, ವಾಹನಗಳು ಮೊದಲಾದವುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿ ದ್ದಾರೆ. ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಮುಗುಳಿ ಎಂಬಲ್ಲಿ ಭಾರೀ ಪ್ರಮಾಣದಲ್ಲಿ ಅನಧಿಕೃತವಾಗಿ ಗಣಿಗಾರಿಕೆ ನಡೆಯುತ್ತಿದ್ದು ಅಲ್ಲಿಂದ ಕೆಂಪುಕಲ್ಲು ಹಾಗೂ ಕೆಂಪು ಮಣ್ಣು ವ್ಯಾಪಕವಾಗಿ ಸಾಗಾಟ ನಡೆಸುತ್ತಿದೆಯೆಂಬ …

ಬಂದ್ಯೋಡಿನಲ್ಲಿ ಅಸ್ವಸ್ಥನಾಗಿ ಕಂಡುಬಂದ ವ್ಯಕ್ತಿಯನ್ನು ದೈಗೋಳಿ ಆಶ್ರಮಕ್ಕೆ ಸೇರಿಸಿದ ಸೇವಾಭಾರತಿ

ಉಪ್ಪಳ: ಹಲವು ದಿನಗಳಿಂದ ಬಂದ್ಯೋಡು ಪರಿಸರದಲ್ಲಿ ಅಲೆದಾಡುತಿದ್ದ ಮಾನಸಿಕ ಅಸ್ವಸ್ಥಗೊಂಡ ವ್ಯಕ್ತಿಯೋರ್ವರನ್ನು ನಿನ್ನೆ ಬೆಳಿಗ್ಗೆ ಮಂಗಲ್ಪಾಡಿ ಸೇವಾ ಭಾರತಿ ಕಾರ್ಯಕರ್ತರು ಅವರಿಗೆ ಆಹಾರ, ಪಾನೀಯವನ್ನು ನೀಡಿ ಕುಂಬಳೆ ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸಿ ಬಳಿಕ ದೈಗೋಳಿಯ ಸಾಯಿನಿಕೇತನ ಆಶ್ರಮಕ್ಕೆ ಸೇರಿಸಿದ್ದಾರೆ. ಈ ಹಿಂದೆ ಕೂಡಾ ಅನೇಕ ಬಾರಿ ಸೇವಾಭಾರತಿ ಕಾರ್ಯಕರ್ತರು ಹಲವಾರು ಮಂದಿಯನ್ನು ಆಶ್ರಮಕ್ಕೆ ದಾಖಲಿಸಿ ಸೇವಾಕಾರ್ಯಗಳನ್ನು ನಡೆಸಿದ್ದಾರೆ. ಸಾಯಿನಿಕೇತನ ಆಶ್ರಮ ಇಂತಹ ನೂರಾರು ಮಂದಿಗೆ ಆಶ್ರಯ ನೀಡುತ್ತಾ ಬಂದಿದೆ.

ಬಜೆಟ್‌ನಲ್ಲಿ ಕಡಿತಗೊಳಿಸಿದ ಪರಿಶಿಷ್ಟ ಪಂಗಡಕ್ಕಿರುವ ಮೊತ್ತ ಪುನರ್‌ಸ್ಥಾಪಿಸಬೇಕು- ಎಕೆಎಸ್

ಪೆರ್ಲ: ಯುಡಿಎಫ್ ಸರಕಾರದ ಪ್ರಥಮ ಬಜೆಟ್‌ನಲ್ಲಿ ಆದಿವಾಸಿ ಪರಿಶಿಷ್ಟ ಪಂಗಡ ವಲಯಗಳಿಗಿರುವ ಮೊತ್ತ ಕಡಿತಗೊಳಿಸಿರುವುದನ್ನು ಪುನರ್ ಪರಿಶೀ ಲಿಸಬೇಕೆಂದು ಪರಿಶಿಷ್ಟ ಪಂಗಡ ಸೌಲಭ್ಯಗಳಿರುವ ಮೊತ್ತ ಸೂಕ್ತ ಸಮಯ ದಲ್ಲಿ ಮಂಜೂರು ಮಾಡಬೇಕೆಂದು ಆದಿವಾಸಿ ಕ್ಷೇಮ ಸಮಿತಿ ಕುಂಬಳೆ ಏರಿಯಾ ಸಮ್ಮೇಳನ ಆಗ್ರಹಿಸಿದೆ. ಪೆರ್ಲ ವ್ಯಾಪಾರಿಭವನದಲ್ಲಿ ನಡೆದ ಸಮ್ಮೇ ಳನವನ್ನು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಅಶೋಕನ್ ಕುನ್ನೂಚಿ ಉದ್ಘಾಟಿಸಿದರು. ಏರಿಯಾ ಅಧ್ಯಕ್ಷ ಚೆನಿಯಪ್ಪ ನಾಯ್ಕ್ ಅಧ್ಯಕ್ಷತೆ ವಹಿಸಿದರು. ಅಶೋಕ ಸಿ. ಹುತಾತ್ಮ ಠರಾವು, ವಿಜಯಕುಮಾರ್ ಸಂತಾಪ ಠರಾವು ಮಂಡಿಸಿದರು. …

ಕೆ.ಕೆ. ಅಬ್ದುಲ್ ಗಫಾರ್ ನಿಧನ

ಕಾಸರಗೋಡು: ಕಲ್ಲಿಕೋಟೆ ಆರ್‌ಇಸಿಯಲ್ಲಿ ತುರ್ತು ಪರಿಸ್ಥಿತಿ ವೇಳೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ಅಧ್ಯಾಪಕರಾಗಿದ್ದ ಚೌಕಿ ಕೆ.ಕೆ.ಪುರ ನಿವಾಸಿ ಪ್ರೊ. ಕೆ.ಕೆ. ಅಬ್ದುಲ್ ಗಫಾರ್ (89) ನಿಧನ ಹೊಂದಿದರು. ತುರ್ತುಪರಿಸ್ಥಿತಿ ಕಾಲದಲ್ಲಿ ಈ ಕಾಲೇಜಿನ ವಿದ್ಯಾರ್ಥಿ ಹಾಗೂ ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಕಸ್ಟಡಿಗೆ ತೆಗೆದು ಕೊಲೆಗೈದು ನಿಗೂಢವಾಗಿ ಸಂಸ್ಕರಿಸಿರುವುದಾಗಿ ಈಗಲೂ ಆರೋಪಿಸಲಾಗುತ್ತಿರುವ ರಾಜನ್ ಎಂಬ ವಿದ್ಯಾರ್ಥಿಯ ಅಧ್ಯಾಪಕನೂ ಹಾಗೂ ಆ ಪ್ರಕರಣದ ಸಾಕ್ಷಿಯಾಗಿದ್ದರು. ಭಟ್ಕಳ್ ಇಂಜಿನಿಯ ರಿಂಗ್ ಕಾಲೇಜಿನ ಪ್ರಾಂಶುಪಾಲರಾ ಗಿಯೂ ಕರ್ತವ್ಯ ನಿರ್ವಹಿಸಿದ್ದರು. ಮೃತರು ಪತ್ನಿ ಉಮ್ಮುಲ್ …

ಬಾಲಕೃಷ್ಣನ್ ನಿಧನ

ಮುಳ್ಳೇರಿಯ: ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದ ಕಾರಡ್ಕ ಚಂದನಡ್ಕ ನಿವಾಸಿ ಆರ್.ಟಿ. ಬಾಲನ್ ಎಂದೇ ಕರೆಸಿಕೊಂಡಿದ್ದ ಬಾಲಕೃಷ್ಣನ್ (72) ನಿಧನ ಹೊಂದಿದರು. ಅಗ್ನಿಶಾಮಕದಳ ದಲ್ಲಿ ಪಾರ್ಟ್‌ಟೈಮ್ ನೌಕರನಾಗಿದ್ದರು. ಕಾರಡ್ಕ ಪರಿಸರದ ಸಾಂಸ್ಕೃತಿಕ ರಂಗದಲ್ಲಿ ಸಕ್ರಿಯರಾಗಿದ್ದ ಇವರು ಕಾಡಗಂ ಫ್ರೆಂಡ್ಸ್ ಕಂಬೈನ್ಸ್ ಎಂಬ ನಾಟಕ ತಂಡವನ್ನು ರೂಪೀಕರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮೃತರು ತಾಯಿ ಕುಂಬ, ಪತ್ನಿ ಸಿ.ಶಾಂತ, ಮಕ್ಕ ಳಾದ ಪ್ರಶಾಂತ್, ಪ್ರಸೀತ, ಸಹೋ ದರರಾದ ಅಂಬುಕ್ಕನ್ ಮುಳ್ಳೇರಿಯ, ಕಿಟ್ಟನ್ ಕೂಡ್ಲು, ನಾರಾಯಣನ್ ಪುದಿಯವಳಪ್, ಗೋಪಾಲನ್ ಕೋಡೋತ್, ಕುಂಞಿರಾಮನ್ …

ಬಿಜೆಪಿಯ ಮೂವರು ಶಾಸಕರು ವಿಧಾನಸಭೆಯಲ್ಲಿ ತ್ರಿಮೂರ್ತಿಗಳಂತೆ -ಸಿ.ಕೆ.ಪದ್ಮನಾಭನ್

ಮುಳ್ಳೇರಿಯ: ಕೇರಳ ವಿಧಾನಸಭೆ ಯಲ್ಲಿ ಬಿಜೆಪಿಯ ಮೂವರು ಶಾಸಕರು ಬ್ರಹ್ಮ,ವಿಷ್ಣು, ಮಹೇಶ್ವರರಂತೆ ಕಾರ್ಯಾ ಚರಿಸುತ್ತಿ ದ್ದಾರೆಂದು ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಸಿ.ಕೆ. ಪದ್ಮನಾಭನ್ ಅಭಿಪ್ರಾಯಪಟ್ಟಿದ್ದಾರೆ. ಮುಳ್ಳೇರಿಯ ಗಣೇಶ ಕಲಾ ಮಂದಿರದಲ್ಲಿ ನಡೆದ ಬಿಜೆಪಿ ಬದಿಯಡ್ಕ ಮಂಡಲ ಪ್ರಶಿಕ್ಷಣ್ ಮಹಾ ಅಭಿಯಾನ್ (ತರಬೇತಿ ಕಾರ್ಯಕ್ರಮ) ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜನಸಂಘದ ಕಾಲದಿಂದಲೇ ಕಾರ್ಯ ಕರ್ತರಿಗಾಗಿ ತರಬೇತಿ ಶಿಬಿರಗಳನ್ನು ನಡೆಸಲಾಗುತ್ತಿದೆ. ಅದು ಈಗಲೂ ಮುಂದುವರಿಯುತ್ತಿದೆಯೆಂದು ಅವರು ತಿಳಿಸಿದರು.  ಇಂದಿರಾಗಾಂಧಿ ಯವರ ಹತ್ಯೆಯ ಬಳಿಕ ನಡೆದ ಲೋಕಸಭಾ …

ಬಿಎಂಎಸ್ ಕಾಸರಗೋಡು ನಗರಸಭಾ ಸಮಿತಿ ಸಮ್ಮೇಳನ

ಕಾಸರಗೋಡು: ಭಾರತೀಯ ಮಜ್ದೂರ್ ಸಂಘ್ ಕಾಸರಗೋಡು ನಗರಸಭಾ ಸಮಿತಿ ಸಮ್ಮೇಳನ ಕಾಸರಗೋಡು ನಗರಸಭಾ ಕಾನ್ಫರೆನ್ಸ್ ಸಭಾಂಗಣದಲ್ಲಿ ಜರಗಿದ್ದು, ಬಿಎಂಎಸ್ ವಲಯ ಅಧ್ಯಕ್ಷ ಬಾಲಕೃಷ್ಣ ನೆಲ್ಲಿಕುಂಜೆ ಉದ್ಘಾಟಿಸಿದರು. ಕೆ. ಕಮಲಾಕ್ಷ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ. ನಾಯರ್ ಪ್ರಧಾನ ಭಾಷಣ ಮಾಡಿದರು.  ಮಧೂರು ಪಂ. ಸದಸ್ಯ ವಸಂತ, ನಗರಸಭಾ ಕೌನ್ಸಿಲರ್‌ಗಳಾದ ಕೆ.ಆರ್. ಹರೀಶ್, ಕೆ. ರೇಷ್ಮ ಶುಭ ಕೋರಿದರು. ಬಿಎಂಎಸ್ ನಗರಸಭಾ ಜೊತೆ ಕಾರ್ಯದರ್ಶಿ ಕೆ. ಸೌಮ್ಯ ವರದಿ ಮಂಡಿಸಿದರು.  ಕೆ. ಗುರುದಾಸ್ ಸಂಘಟನಾ ಚರ್ಚೆ …