ಕಾಂಗ್ರೆಸ್‌ನೊಳಗಿನ ಆಂತರಿಕ ಕಚ್ಚಾಟ ರಾಜ್‌ಮೋಹನ್ ಉಣ್ಣಿತ್ತಾನ್‌ರ ಹೇಳಿಕೆಯಿಂದ ಪ್ರಕಟ- ಎಂ.ಎಲ್. ಅಶ್ವಿನಿ

ಕಾಸರಗೋಡು: ಪುಲ್ಲೂರು ಪೆರಿಯ ಪಂಚಾಯತ್ ಅಧ್ಯಕ್ಷ ಚುನಾವಣೆಯ ಮೊದಲ ಅವಕಾಶದಲ್ಲಿ ೪ ಐಕ್ಯರಂಗದ ಜನಪ್ರತಿನಿಧಿಗಳು ದೂರವುಳಿದಿರುವುದು ಕಾಂಗ್ರೆಸ್‌ನ ಆಂತರಿಕ ಭಿನ್ನಮತೀಯ ಧೋರಣೆಯ ಮುಖವೆಂದು ಇದನ್ನು ಬಿಜೆಪಿಯ ತಲೆಗೆ ಕಟ್ಟಿಕೊಡಲು ಸಂಸದ ರಾಜ್‌ಮೋಹನ್ ಯತ್ನಿಸುತ್ತಿರುವು ದಾಗಿಯೂ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದರು. ಜಿಲ್ಲೆಯಲ್ಲಿ ಲೀಗ್ ಕಾಂಗ್ರೆಸ್‌ನ್ನು ನುಂ ಗಿದ್ದು, ರಾಜ್‌ಮೋಹನ್ ಉಣ್ಣಿತ್ತಾನ್‌ರ ನಿಲುವಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ದೊಡ್ಡ ಮಟ್ಟಿನ ಅಸ್ವಸ್ಥತೆ ಇದೆ. ಇದನ್ನು ಮರೆಮಾಚಲು ರಾಜ್ ಮೋಹನ್ ಉಣ್ಣಿತ್ತಾನ್ ಸ್ವಂತ ಪಕ್ಷದ ಜನಪ್ರತಿನಿಧಿಗಳು, ಬಿಜೆಪಿಯೊಂದಿಗೆ ಆಂತರಿಕ …

ಬದಿಯಡ್ಕ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷೆ ಅಧಿಕಾರ ಸ್ವೀಕಾರ

ಬದಿಯಡ್ಕ: ಪಂಚಾಯತ್‌ಗೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರು ನಿನ್ನೆ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. 2ನೇ ವಾರ್ಡ್‌ನಿಂದ ಆಯ್ಕೆಯಾದ ಶಂಕರ ಡಿ. ಅಧ್ಯಕ್ಷರಾಗಿಯೂ, 13ನೇ ವಾರ್ಡ್‌ನಿಂದ ಆಯ್ಕೆಯಾದ ಅಶ್ವಿನಿ ಕೆ.ಎಂ. ಉಪಾಧ್ಯಕ್ಷೆಯಾಗಿಯೂ ಅಧಿಕಾರ ವಹಿಸಿಕೊಂಡಿದ್ದಾರೆ. ಈ ವೇಳೆ ಜನಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕೇರಳ ಯಾತ್ರೆ ಉದ್ಘಾಟನೆ ನಗರದಲ್ಲಿ ಧ್ವಜಾರೋಹಣ

ಕಾಸರಗೋಡು: ಕೇರಳ ಮುಸ್ಲಿಂ ಜಮಾಯತ್ ಆಶ್ರಯದಲ್ಲಿ ಕಾಂತಾಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್  ಮುನ್ನಡೆಸುವ ಕೇರಳ ಯಾತ್ರೆಯ ಉದ್ಘಾಟನೆ ಸಮ್ಮೇಳನ ನಡೆಯುವ ಚೆರ್ಕಳ ನೂರುಲ್ ಉಲಮಾ ನಗರದಲ್ಲಿ ಸಮಸ್ತ ದಿಂದ ಧ್ವಜಾರೋಹಣ ನಡೆಸಲಾಯಿತು.  ಸ್ವಾಗತ ಸಮಿತಿ ಅಧ್ಯಕ್ಷ ಹಕೀಂ ಹಾಜಿ ಕಳನಾಡು  ಧ್ವಜಾರೋಹಣಗೈದರು. ತಳಂಗರೆ ಮಾಲಿಕ್ ದೀನಾರ್ ನಲ್ಲಿ ನಡೆದ ಮಖಾಂ ಸಿಯಾರತ್ ಬಳಿಕ ಗಾರ್ಡ್ ಫ್ಲಾಗ್ ಮಾರ್ಚ್ ನಡೆಸಿ ಧ್ವಜವನ್ನು ನಗರಕ್ಕೆ ತಲುಪಿಸಲಾಗಿತ್ತು. ಹಲವು ಗಣ್ಯರು ಭಾಗವಹಿಸಿದರು. ಕೇರಳ ಯಾತ್ರೆಯ ಉದ್ಘಾಟನೆ ಜನವರಿ ೧ರಂದು ಸಂಜೆ ೪.೩೦ಕ್ಕೆ …

ಪೆರಿಯಪ್ಪಾಡಿ ಶ್ರೀ ಶಾಸ್ತಾರೇಶ್ವರ ದೇವಸ್ಧಾನದಲ್ಲಿ ಜೀರ್ಣೋದ್ಧಾರ ಸಮಿತಿ ಪದಗ್ರಹಣ

ಪೈವಳಿಕೆ: ಪಂಚಾಯತ್ ವ್ಯಾಪ್ತಿಯ ಕುಡಾಲುಮೇರ್ಕಳ ಪೆರಿಯಪ್ಪಾಡಿ ಶ್ರೀ ಶಾಸ್ತಾರೇಶ್ವರ ದೇವಾಲಯದ ಜೀರ್ಣೋದ್ಧಾರಕ್ಕೆ ಸಂಬಂಧಿಸಿ ಕಾರ್ಯಚಟುವಟಿಕೆಗಳು ನಡೆಯುತ್ತಿದ್ದು, ಆ ಪ್ರಯುಕ್ತ ನೂತನ ಜೀರ್ಣೋದ್ಧಾರ ಸಮಿತಿಯ ಪದಾದಿಕಾರಿಗಳ, ಸದಸ್ಯರ ಪದಗ್ರಹಣ ಸಮಾರಂಭ, ವಿಜ್ಞಾಪನಾ ಪತ್ರದ ರೂಪುರೇಷೆ ಕಾರ್ಯಕ್ರಮ ಶ್ರೀ ಕ್ಷೇತ್ರದಲ್ಲಿ ಜರಗಿತು.ಆಡಳಿತ ಮೊಕ್ತೇಸರ ಕೆ.ಎಂ. ನಾರಾಯಣ ಭಟ್ ಪೆರಿಯಪ್ಪಾಡಿ ಉದ್ಘಾಟಿಸಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ಎಂ.ಕೇಶವ ಭಟ್ ಮಣಿಲ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಕಾರ್ಯಾಧ್ಯಕ್ಷ ರಘು ಕಲ್ಕಾರ್ ಮಾಣಿ ಮತ್ತು ಉಪಾಧ್ಯಕ್ಷ ದಾಸಪ್ಪ ಸಾಮಾನಿ ಕುಡಾಲುಗುತ್ತು ವಿವಿಧ ಕಾರ್ಯಯೋಜನೆ ಕುರಿತು …

ವಿಸ್ಮಯ ಪಾರ್ಕ್‌ನಲ್ಲಿ ಇಟಾಲಿಯನ್ ರೈಡ್ ರೋಡಿಕ್ಸ್ ಉದ್ಘಾಟನೆ

ಕಣ್ಣೂರು: ವಿಸ್ಮಯ ಪಾರ್ಕ್‌ನಲ್ಲಿ ಹೊಸ ಇಟಾಲಿಯನ್ ರೈಡ್ ರೋಡಿಕ್ಸ್ ಚಟುವಟಿಕೆ ಆರಂಭಗೊಂಡಿದ್ದು, ಸ್ಪೀಕರ್ ಎ.ಎನ್. ಶಂಸೀರ್ ಇದನ್ನು ಉದ್ಘಾಟಿಸಿದರು. ವಿಸ್ಮಯ ಅಮ್ಯೂಸ್‌ಮೆಂಟ್ ಪಾರ್ಕ್‌ನ ಅಧ್ಯಕ್ಷ ಪಿ.ವಿ. ಗೋಪಿನಾಥ್ ಅಧ್ಯಕ್ಷತೆ ವಹಿಸಿದರು. ೧೫ ಕೋಟಿ ರೂ.ಗಳಷ್ಟು ವೆಚ್ಚದ ಈ ರೈಡನ್ನು ಇಟಾಲಿಯನ್ ಕಂಪೆನಿಯಾದ ಮೊಸಾರ್ ನಿರ್ಮಿಸಿದೆ. ಇಟೆಲಿಯಿಂದ ತಲುಪಿದ  ತಜ್ಞರು ಇದನ್ನು ಜೋಡಿಸಿದ್ದಾರೆ. ಸಹಕಾರಿ ವಲಯದ ಪ್ರಥಮ ಅಮ್ಯೂಸ್‌ಮೆಂಟ್ ಪಾರ್ಕ್ ಆದ ವಿಸ್ಮಯ ದೇಶದ ಬೃಹತ್ ಪಾರ್ಕ್‌ಗಳೊಂದಿಗೆ ಸ್ಪರ್ಧಿಸುತ್ತಿದೆ. ಮಕ್ಕಳು, ಹಿರಿಯರೆಂಬ ಭೇದ ಭಾವವಿಲ್ಲದೆ ಯಾವುದೇ ಪ್ರಾಯದವರಿಗೂ ಇದನ್ನು …

ಕುಂಬಳೆಯಲ್ಲಿ ಜ್ಯುವೆಲ್ಲರಿ ಮಾಲಕನ ಮನೆ, ಅಂಗಡಿಯಿಂದ ಕಳವು

ಕುಂಬಳೆ: ಅಲ್ಪ ಬಿಡುವಿನ ಬಳಿಕ ಕುಂಬಳೆಯಲ್ಲಿ ಮತ್ತೆ ಕಳ್ಳತನ ನಡೆದಿದೆ.  ಇಲ್ಲಿನ ಸೋನಾ ಬಜಾರ್ ಜ್ಯುವೆಲ್ಲರಿ ಮಾಲಕ ದಿ| ಮಮ್ಮಿಞ್ಞಿ ಹಾಜಿ ಯವರ ಕುಂಬಳೆ ಪೇಟೆಯಲ್ಲಿರುವ ಮನೆಯಲ್ಲಿ ನಿನ್ನೆ ಕಳವು ನಡೆದಿದೆ.  ಮಮ್ಮಿಞ್ಞಿ ಹಾಜಿಯವರ ಪತ್ನಿ  ಸೈನಬಾ, ಮಗ ರಿಸ್ವಾನ್ ಹಾಗೂ ಸೊಸೆ  ಚೆಂಗಳದಲ್ಲಿರುವ ಸಂಬಂಧಿಕರ ಮನೆಯಲ್ಲಿ ನಡೆದ ಮದುವೆ ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ವೇಳೆ ಕಳವು ನಡೆದಿದೆ.  ನಿನ್ನೆ ಮಧ್ಯಾಹ್ನ 2 ಗಂಟೆ ವೇಳೆ ಕುಟುಂಬ ಮನೆಗೆ ಬೀಗ ಜಡಿದು ತೆರಳಿತ್ತು.  ರಾತ್ರಿ 12 …

ಜಿಲ್ಲಾ ಶಾಲಾ ಕಲೋತ್ಸವಕ್ಕೆ ಔಪಚಾರಿಕ ಚಾಲನೆ: ಮೊಗ್ರಾಲ್‌ನಲ್ಲಿನ್ನು ನಾದ-ತಾಳ-ನೃತ್ಯ ವಿಸ್ಮಯ

ಮೊಗ್ರಾಲ್: ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಇಂದು ಬೆಳಿಗ್ಗೆ ಔಪಚಾರಿಕವಾಗಿ ಉದ್ಘಾಟನೆಗೊಂಡಿತು. ಇನ್ನು ಮೂರು ದಿನಗಳು ಮೊಗ್ರಾಲ್‌ನ ಇಶಲ್ ಗ್ರಾಮದಲ್ಲಿ ರಾಗ ತಾಳ ನೃತ್ಯ ವಿಸ್ಮಯ ಸಹಿತ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಮೆರೆಯಲಿದ್ದಾರೆ. ಮೊಗ್ರಾಲ್ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮ ಜರಗಿತು. ಈ ತಿಂಗಳ ೩೧ರಂದು ಸಂಜೆ ಸಮಾರೋಪ ನಡೆಯಲಿದೆ. ವಿವಿಧ ಕಲಾ ಸಾಂಸ್ಕೃತಿಕ ವೈಭವಗಳಿಂದ ಶಾಲಾ ಕಲೋತ್ಸವದ ಡಂಗುರ ಜಾಥಾ ಜರಗಿತು. ಕುಂಬಳೆಯಿಂದ ಆರಂಭಗೊಂಡ ಶೋಭಾಯಾತ್ರೆಗೆ ಕುಂಬಳೆ ಪಂಚಾಯತ್ ಅಧ್ಯಕ್ಷ ವಿ.ಪಿ. …

ದಾಖಲೆಪತ್ರಗಳಿಲ್ಲದೆ ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 2.87 ಲಕ್ಷ ರೂ. ವಶ

ಉಪ್ಪಳ: ಸ್ಕೂಟರ್‌ನಲ್ಲಿ ದಾಖಲೆಪತ್ರ ಗಳಿಲ್ಲದೆ ಸಾಗಿಸುತ್ತಿದ್ದ 2,87,000 ರೂಪಾಯಿಗಳನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡು ಓರ್ವನನ್ನು ಬಂಧಿಸಿದ್ದಾರೆ. ಕರ್ನಾಟಕದ ಕೊಣಾಜೆ ಅಸೈಗೋಳಿ ನಿವಾಸಿ ಧನುಷ್ ಆರ್ (29) ಎಂಬಾತನ ಕೈಯಿಂದ ಹಣ ವಶಪಡಿಸಲಾಗಿ ದೆಯೆಂದು ಪೊಲೀಸರು ತಿಳಿಸಿದ್ದಾರೆ. ಮೊನ್ನೆ ಸಂಜೆ ಗೇರುಕಟ್ಟೆ  ಭಾಗದಿಂದ ಕೆದುಂಬಾಡಿ ಭಾಗಕ್ಕೆ ತೆರಳುತ್ತಿದ್ದ ಸ್ಕೂಟರ್‌ನಲ್ಲಿ ಗೇರುಕಟ್ಟೆ ಬಳಿಯ ಮುಡಿಮಾರು ಎಂಬಲ್ಲಿ ಎಸ್‌ಐ ಉಮೇಶ್ ನೇತೃತ್ವದ ಪೊಲೀಸರು  ತಡೆದು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ. ಈ ವೇಳೆ ಧನುಷ್ ಮದ್ಯ ಸೇವಿಸಿರುವುದು ತಿಳಿದುಬಂ ದಿದೆ. ವಿಚಾರಿಸಿದಾಗ ತದ್ವಿರುದ್ಧ …

ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಯುವಕನೋರ್ವ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸೋಂಕಾಲು ಶಾಂತಿಗುರಿಯ ಕರುಣಾಕರ ಎಂಬವರ ಪುತ್ರ ಶಶಿಕುಮಾರ್ (19) ಮೃತ ವ್ಯಕ್ತಿ.  ಇವರು ಲೈಟ್ ಆಂಡ್ ಸೌಂಡ್ಸ್ ಸಂಸ್ಥೆಯ ನೌಕರನಾಗಿದ್ದರು. ನಿನ್ನೆ ಬೆಳಿಗ್ಗೆ ಮನೆಯಲ್ಲಿ ಇವರು ಕಾಣದ ಹಿನ್ನೆಲೆಯಲ್ಲಿ ನಡೆಸಿದ ಶೋಧ ವೇಳೆ ಮನೆಯ ಹಿಂಭಾಗದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯ ಸಂಸ್ಕಾರ ನಡೆಸಲಾಯಿತು. ಮೃತರು ತಂದೆ, ತಾಯಿ ಸುಂದರಿ, ಸಹೋದರರಾದ ಕೌಶಿಕ್, ಸುಶಾಂತ್ ಹಾಗೂ …

ಎದೆನೋವು: ಚಿಕಿತ್ಸೆಯಲ್ಲಿದ್ದ  ವ್ಯಕ್ತಿ ನಿಧನ

ನೀರ್ಚಾಲು: ಎದೆನೋವು ಕಾಣಿಸಿ ಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ  ವ್ಯಕ್ತಿ ಮೃತಪಟ್ಟರು. ಬೇಳ ಕುಮಾರಮಂಗಲ ಲೈಫ್ ಕಾಲನಿಯ ನಿವಾಸಿ ಚಿಮ್ಮಿಣಿಯ ಡ್ಕದ ನಾರಾಯಣ ಮುಖಾರಿ (69) ಮೃತಪಟ್ಟ ವ್ಯಕ್ತಿ.ನಿನ್ನೆ ಮುಂಜಾನೆ ೪ ಗಂಟೆ ವೇಳೆ ಎದೆನೋವು ಕಾಣಿಸಿಕೊಂಡ ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದರೂ ಜೀವ ರಕ್ಷಿಸಲಾಗಲಿಲ್ಲ. ಮೃತರು ಪತ್ನಿ ಜಲಜಾ, ಮಕ್ಕಳಾದ ಪ್ರವೀಣ್ ಕುಮಾರ್, ನವೀನ ಕುಮಾರಿ, ದುರ್ಗಾಪರ ಮೇಶ್ವರಿ, ಅನ್ನಪೂರ್ಣೇಶ್ವರಿ (ಬದಿ ಯಡ್ಕ ಪಂ. ಹಸಿರು ಕ್ರಿಯಾ ಸೇನೆ ಸದಸ್ಯೆ), …