ಬದಿಯಡ್ಕ ಪಂ. ಕುಟುಂಬಶ್ರೀ ‘ಆಷಾಡ ಗಂಜಿ’ ಉದ್ಘಾಟನೆ

ಬದಿಯಡ್ಕ: ಪಂಚಾಯತ್ ಕುಟುಂಬಶ್ರೀ ಮಾದರಿ ಸಿಡಿಎಸ್‌ನ ನೇತೃತ್ವದಲ್ಲಿ ಸಿಡಿಎಸ್ ಹಾಲ್‌ನಲ್ಲಿ ಜರಗಿದ `ಆಷಾಡ ಗಂಜಿ’ ಕಾರ್ಯ ಕ್ರಮವನ್ನು ಪಂಚಾಯತ್ ಅಧ್ಯಕ್ಷ ಶಂಕರ ಡಿ. ಉದ್ಘಾಟಿಸಿದರು. ಕುಟುಂಬಶ್ರೀ ಯವರ ಈ ರೀತಿಯ ಸಮಾಜಮುಖಿ ಹಾಗೂ ಸಂಸ್ಕೃತಿಯುಕ್ತ ಕಾರ್ಯಕ್ರಮ ಗಳು ಅಭಿನಂದನಾರ್ಹ ಎಂದರು. ಪಂ. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಂಚಾಯತ್ ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಜಿ.ಆರ್., ಆರೋಗ್ಯ ವಿದ್ಯಾಭ್ಯಾಸ ಸ್ಥಾಯಿಸಮಿತಿ ಅಧ್ಯಕ್ಷ ಅವಿನಾಶ್ ರೈ, ಜಿಲ್ಲಾ ಪಂ.ಸದಸ್ಯ ರಾಮಪ್ಪ ಮಂ ಜೇಶ್ವರ, ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಕೆ., ಶ್ಯಾಮಪ್ರಸಾದ ಮಾನ್ಯ, ಗಂಗಾಧರ ಗೋಳಿಯಡ್ಕ, ಮಧುಸೂದನ ಕಂಗಿಲ, ಹರೀಶ ಕೆ., ಶಾಹಿನಾ, ಅನ್ನತ್ ಬೀವಿ, ಪ್ರಜ್ಞಾ, ಶ್ಯಾಮಪ್ರಸಾದ ಸರಳಿ, ಲೀಲಾವತಿ, ಉಷಾ, ಪಂ.ನ ವಿವಿಧ ಕುಟುಂಬಶ್ರೀ ಗಳು, ಎಡಿಎಸ್, ಸಿಡಿಎಸ್ ಸದಸ್ಯರು ಪಾಲ್ಗೊಂಡಿದ್ದರು. ಅತೀ ಹೆಚ್ಚು ತಿನಿಸುಗಳನ್ನು ಪ್ರದರ್ಶಿಸಿದವರಿಗೆ ವಿಶೇಷ ಬಹುಮಾನ ವಿತರಿಸಲಾಯಿತು. ಸಿಡಿಎಸ್ ಅಧ್ಯಕ್ಷೆ ಸುಲೋಚನ ಸ್ವಾಗತಿಸಿ, ಸೋಫಿಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಿಡಿಎಸ್ ಉಪಾಧ್ಯಕ್ಷೆ ಜಯಂತಿ ಕುಂಟಿಕಾನ ನಿರೂಪಿಸಿದರು. ಪಂ. ಸಹಾಯಕ ಕಾರ್ಯದರ್ಶಿ ಸಜಿ ವಂದಿಸಿದರು.

RELATED NEWS

You cannot copy contents of this page