ಜನರಲ್ ಆಸ್ಪತ್ರೆಯ ಫ್ರೀಜರ್ ದುರಸ್ತಿನಡೆಸಿ  ಮಾದರಿಯಾದ ಬಿಜೆಪಿ ಕೌನ್ಸಿಲರ್‌ಗಳು

ಕಾಸರಗೋಡು: ಹಲವು ದಿನಗಳಿಂದ ಕೆಟ್ಟು ಹೋಗಿದ್ದ ಕಾಸರಗೋಡು ಜನರಲ್ ಆಸ್ಪತ್ರೆಯ ಫ್ರೀಜರ್‌ನ್ನು ಬಿಜೆಪಿ ನಗರಸಭಾ ಕೌನ್ಸಿಲರ್‌ಗಳಾದ ದಿವ್ಯ ಸಂದೀಪ್ ಹಾಗೂ ರಾಜೇಶ್ ಅಮೈ ದುರಸ್ತಿ ನಡೆಸಿ ಮಾದರಿಯಾಗಿದ್ದಾರೆ.  ಫ್ರೀಜರ್ ಕೆಟ್ಟುಹೋಗಿರುವುದರ ಪರಿಣಾಮ ರೋಗಿಗಳು ಭಾರೀ ಸಮಸ್ಯೆಯನ್ನು ಎದುರಿಸಬೇಕಾಗಿ ಬಂದಿತ್ತು.  ಫ್ರೀಜರ್ ದುರಸ್ತಿಗೊ ಳಿಸಲು  ಅಧಿಕಾರಿಗಳ ಭಾಗದಿಂದ ಯಾವುದೇ ಕ್ರಮ ಉಂಟಾಗಿಲ್ಲವೆಂದು ದೂರಲಾಗಿದೆ. ಈ ಹಿನ್ನೆಲೆಯಲ್ಲಿ ತಜ್ಞರಾದ ಮೆಕ್ಯಾನಿಕ್‌ಗಳನ್ನು ಆಸ್ಪತ್ರೆಗೆ ಕರೆತಂದು ಫ್ರೀಜರ್ ದುರಸ್ತಿಗೊಳಿಸ ಲಾಯಿತು. ಜನರ ಸಮಸ್ಯೆಯನ್ನು ಮನಗಂಡು ಅದರ ಪರಿಹಾರಕ್ಕೆ ತಕ್ಷಣ ಕ್ರಮ ಕೈಗೊಂಡ ಬಿಜೆಪಿ ಜನಪ್ರತಿನಿಧಿಗಳನ್ನು ಸಾರ್ವಜನಿಕರು ಅಭಿನಂದಿಸಿದ್ದಾರೆ.

ಕೇವಲ ಭರವಸೆ ನೀಡದೆ ಅದನ್ನು ಪೂರೈಸಿಕೊಡುವ ಕೌನ್ಸಿಲರ್‌ಗಳ ಈ ಕ್ರಮ ಮಾದರಿಯಾಗಿದೆಯೆಂದು ಸಾರ್ವಜನಿಕರಿಂದ ಅಭಿಪ್ರಾಯ ಮೂಡಿಬಂದಿದೆ.

You cannot copy contents of this page