ಉದ್ಯೋಗಖಾತರಿ ಯೋಜನೆ ಕೂಡಲೇ  ಪುನರಾರಂಭಿಸಬೇಕು- ಬಿಎಂಎಸ್

ಕಾಸರಗೋಡು: ಉದ್ಯೋಗ ಖಾತರಿ ಯೋಜನೆ ವಿರುದ್ಧ ಸುಳ್ಳು ಪ್ರಚಾರ ನಡೆಸಿ ಕಾರ್ಮಿಕರಲ್ಲಿ ತಪ್ಪು ಭಾವನೆ  ಮೂಡಿಸುವ ಕೇರಳ ಸರಕಾರದ ವಿರುದ್ಧ ಜಿಲ್ಲಾ ಉದ್ಯೋಗ ಖಾತರಿ ಮಜ್ದೂರ್ ಸಂಘ್ (ಬಿಎಂಎಸ್) ಜಿಲ್ಲಾ ಸಮಿತಿ ತಾಲೂಕು ಕಚೇರಿ ಮಾರ್ಚ್, ಧರಣಿ ನಡೆಸಿತು. ಉದ್ಯೋಗ ಖಾತರಿ ಯೋಜನೆ ಶೀಘ್ರವೇ ಆರಂಭಿಸಬೇ ಕೆಂದು, ಕೇಂದ್ರ ಸರಕಾರ ನಿಗದಿಪಡಿಸಿದ 125 ಉದ್ಯೋಗ ದಿನಗಳನ್ನು ಖಚಿತಪಡಿಸಬೇಕೆಂದು ಸರಕಾರ ದೊಂದಿಗೆ ಆಗ್ರಹಿಸಿದ್ದಾರೆ. ಉದ್ಯೋಗ ಖಾತರಿ ಮಜ್ದೂರ್ ಸಂಘ್ ಜಿಲ್ಲಾ ಅಧ್ಯಕ್ಷ ಹರೀಶ್ ಕುದ್ರೆಪ್ಪಾಡಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ರಾಜ್ಯ ಸಮಿತಿ ಸದಸ್ಯ ಕೃಷ್ಣನ್ ಕೇಳೋತ್ತ್, ಜಿಲ್ಲಾ ಜೊತೆ ಕಾರ್ಯದರ್ಶಿಗಳಾದ ಪಿ. ದಿನೇಶ್ ಬಂಬ್ರಾಣ, ಗುರುದಾಸ್ ಚೇನಕ್ಕೋಡು, ಯಶ್ವಂತ್ ಬೆಜ್ಜ, ಉಪಾಧ್ಯಕ್ಷೆ ಗೀತಾ ಬಾಲಕೃಷ್ಣನ್ ಮಾತನಾಡಿದರು.

ವಲಯ ಕಾರ್ಯದರ್ಶಿಗಳಾದ ಶ್ರೀಧರನ್ ಚೇನಕ್ಕೋಡು, ಕುಂಞಿ ಕಣ್ಣನ್ ಅರಯಾಲಿಂಗಲ್, ರಂಜಿತ್ ಚೆರ್ಕಳ, ಮನೋಜ್ ಜೆ.ಪಿ.ನಗರ್, ಗಣೇಶ್ ಮಣ್ಣಿಪ್ಪಾಡಿ, ಉಮಾ ಕಸಬಾ ಕಡಪ್ಪುರ, ಭವ್ಯಾ ಗುರುದಾಸ್, ಅರುಂದತಿ ಕಸಬಾ ಕಡಪ್ಪುರಂ, ಶಾಂತ ಕುಮಾರಿ, ಸದಾಶಿವ ಮೊಗ್ರಾಲ್, ಜಿಲ್ಲಾ ಕಾರ್ಯದರ್ಶಿ ಮಿನಿ ಶ್ರೀನಿವಾಸನ್, ವಲಯ ಕಾರ್ಯದರ್ಶಿ ಬಾಬು ಮೋನ್ ಚೆಂಗಳ ಭಾಗವಹಿಸಿದರು.

You cannot copy contents of this page