ಸಚಿವ ಅಬ್ದುಲ್ ಗಫೂರ್ ಸೆ. 8ರಂದು ಜಿಲ್ಲೆಯಲ್ಲಿ

ಕಾಸರಗೋಡು: ಸಾಮಾಜಿಕ ನ್ಯಾಯ-ಮೀನುಗಾರಿಕಾ ಖಾತೆ ಸಚಿವ ವಿ.ಇ. ಅಬ್ದುಲ್ ಗಫೂರ್ ಸೆ.8ರಂದು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಅಂದು ಬೆಳಿಗ್ಗೆ 1೦ ಗಂಟೆಗೆ ಹಾರ್ಬರ್ ಇಂಜಿನಿಯರಿಂಗ್ ಎಕ್ಸಿಕ್ಯೂಟೀವ್ ಇಂಜಿನಿಯರ್ ಕಚೇರಿಯಲ್ಲಿ ನಡೆಯುವ ಅವಲೋಕನಾ ಸಭೆಯಲ್ಲಿ ಸಚಿವರು ಭಾಗವಹಿಸುವರು. ಮಧ್ಯಾಹ್ನ 12ಕ್ಕೆ ಕಾಸರಗೋಡು ಕಸಬಾ ಕಡಪ್ಪುರದ ಫಿಶರೀಸ್ ಎಕ್ಸ್‌ಟೆನ್ಶನಲ್ ಸಭಾಂಗಣ ದಲ್ಲಿ ‘ಮಿಗವ್’ ಯೋಜನೆಯ ಅಂಗವಾಗಿ ನಡೆಯುವ  ಸಮಾರಂಭದಲ್ಲಿ ಅತ್ಯಧಿಕ ಅಂಕ ಗಳಿಸಿ ಉತ್ತೀರ್ಣರಾದ ಮೀನುಗಾರರ ಮಕ್ಕಳಿಗೆ ಜಿಲ್ಲೆಯ ಶಿಕ್ಷಣ ಪುರಸ್ಕಾರ ವಿತರಣೆ ನೆರವೇರಿಸುವರು. ಸಂಜೆ 3 ಗಂಟೆಗೆ ಮಂಜೇಶ್ವರ ಬಂದರಿನಲ್ಲಿ  ನಡೆಯುವ ರಾಜ್ಯ ಸರಕಾರದ 1೦೦ ದಿನಗಳ ಕ್ರಿಯಾ ಕಾರ್ಯಕ್ರಮದಂಗವಾಗಿರುವ ಮೊಬೈಲ್ ಕಿಯೋಕ್ಸ್‌ಗಳನ್ನು ಸಚಿವರು ವಿತರಿಸುವರು.

You cannot copy contents of this page