ಬಿಜೆಪಿ ಕಾರ್ಯಕರ್ತನನ್ನು ತಡೆದು ನಿಲ್ಲಿಸಿ ಹಲ್ಲೆ: 10 ಮಂದಿ ವಿರುದ್ಧ ಕೇಸು

ಕಾಸರಗೋಡು:  ಬಿಜೆಪಿ ಕಾರ್ಯಕರ್ತನನ್ನು ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿಯೂ, ಬಿಯರ್ ಬಾಟ್ಲಿಯಿಂದ ಹೊಡೆದು ಬೈಕ್‌ಗೆ ಹಾನಿ ಉಂಟುಮಾಡಿರುವುದಾಗಿ ದೂರಲಾಗಿದೆ. ಪೂಚಕ್ಕಾಡ್ ಪುದಿಯಪುರದ ಪಿ. ಹರೀಶ್ ಕುಮಾರ್ (36)ರ ಮೇಲೆ  ಹಲ್ಲೆಗೈಯ್ಯಲಾಗಿದೆ.

ಈ ಘಟನೆಗೆ ಸಂಬಂಧಿಸಿ ಮುಕ್ಕೋಡ್‌ನ ಅಬ್ದುಲ್ ರಹ್ಮಾನ್, ವಾಜಿದ್, ಮೊಯ್ನು, ರಫೀಕ್ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಆರು ಮಂದಿ ವಿರುದ್ಧ ಬೇಕಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ಸಂಜೆ 5 ಗಂಟೆ ವೇಳೆ ಘಟನೆ ನಡೆದಿದೆ. ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ಹರೀಶ್ ಕುಮಾರ್‌ರನ್ನು ಪೂಚಕ್ಕಾಡ್‌ನಲ್ಲಿ ತಂಡ ತಡೆದು ನಿಲ್ಲಿಸಿ ಹಲ್ಲೆಗೈದು ಬಿಯರ್ ಬಾಟ್ಲಿಯಿಂದ ಹೊಡೆದು ಬೈಕ್‌ಗೆ ಹಾನಿ ಉಂಟುಮಾಡಿರುವುದಾಗಿ ದೂರಲಾಗಿದೆ. ಅಲ್ಲದೆ ಸಮೀಪದ ಬಸ್ ವೈಟಿಂಗ್ ಶೆಡ್ ಹಾಗೂ ಅಲ್ಲಿ ನಿಲ್ಲಿಸಿದ್ದ ಮೂರು ವಾಹನಗಳಿಗೂ ತಂಡ ಹಾನಿಗೈದಿದ್ದು, ಇದರಿಂದ 80,000 ರೂಪಾಯಿ ನಷ್ಟ ಉಂಟಾಗಿರುವುದಾಗಿ ದೂರಲಾಗಿದೆ.

You cannot copy contents of this page