ಜೊತೆಗೆ ವಾಸಿಸುತ್ತಿದ್ದ ಗೆಳೆಯ ನಾಪತ್ತೆ: ಯುವತಿಯಿಂದ ದೂರು

ಕಾಸರಗೋಡು: ಕ್ವಾರ್ಟರ್ಸ್ ನಲ್ಲಿ ಜೊತೆಗೆ ವಾಸಿಸುತ್ತಿದ್ದ ಗೆಳೆಯ  ನಾಪತ್ತೆಯಾಗಿರುವುದಾಗಿ ತಿಳಿಸಿ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಕರ್ನಾಟಕದ ಗದಗ ಲಕ್ಷ್ಮೀಶ್ವರ್ ಅಂಬೇಡ್ಕರ್ ನಗರದ  ಗಿರಿಜಾ  (28) ದೂರು ನೀಡಿದ್ದು, ಗೆಳೆಯನಾದ ಯೆಲ್ಲಪ್ಪ ಎಸ್ ಮೊಗೇರಿ (37) ನಾಪತ್ತೆಯಾಗಿರು ವುದಾಗಿ ತಿಳಿಸಲಾಗಿದೆ. ಚೌಕಿ ಕುನ್ನಿಲ್ ಕೆ.ಎಂ. ಕ್ವಾರ್ಟರ್ಸ್‌ನಲ್ಲಿ ಈ ಇಬ್ಬರು ವಾಸಿಸುತ್ತಿದ್ದರು. ಈ ತಿಂಗಳ ೧೮ರಂದು ಬೆಳಿಗ್ಗೆ 8 ಗಂಟೆಗೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ತೆರಳಿದ ಎಲ್ಲಪ್ಪ ಎಸ್ ಮೊಗೇರಿ ಅನಂತರ ಮರಳಿ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ಕಾಸರಗೋಡು ನಗರಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

You cannot copy contents of this page