ನಿಂತಿದ್ದ ಲಾರಿಗೆ ಕಾರು ಢಿಕ್ಕಿ: ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಎಂಟು ಮಂದಿ ಮೃತ್ಯು

ತೃಶೂರು: ರಸ್ತೆ ಬದಿ ನಿಲ್ಲಿಸಿದ್ದ ಸರಕು ಲಾರಿಯ ಹಿಂಬದಿಗೆ ಕಾರು ಢಿಕ್ಕಿ ಹೊಡೆದು  ತಮಿಳುನಾಡಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಎಂಟು ಮಂದಿ ಸಾವನ್ನಪ್ಪಿದ ದಾರುಣ ಘಟನೆ ನಿನ್ನೆ ತಡರಾತ್ರಿ ತೃಶೂರು ಕೈಪಮಂಗಲ ಪನಂಬಕುನ್ನು ಸೆಂಟರ್ ಬಳಿ ನಡೆದಿದೆ.

ತಮಿಳುನಾಡು ದಿಂಡಿಗಲ್‌ನ ಪಿ.ಎಸ್.ಎನ್.ಎ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಸೇಲಂನ ವಿಶ್ವ (21), ದಿಂಡಿಗಲ್‌ನ ಸೂರ್ಯ (20), ಮಧುರೈ ನಿವಾಸಿಗಳಾದ ಸಂತೋಷ್ (20), ಪ್ರಸನ್ನ (20), ದಿಂಡಿಗಲ್ ನಿವಾಸಿಗಳಾದ ಯುವಂಜಿತ್ (20), ಜೋಷ್ವ (20) ಎಂಬವರು ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳು.

ದುರಂತದಲ್ಲಿ ಸಾವನ್ನಪ್ಪಿದ ಇತರ ಇಬ್ಬರು ವಿದ್ಯಾರ್ಥಿಗಳ ಗುರುತು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ಎಂಟು ವಿದ್ಯಾರ್ಥಿಗಳು ಮಧುರೈ ನೋಂದಾವಣೆ ಹೊಂದಿರುವ ಕಾರಿನಲ್ಲಿ ಕೇರಳಕ್ಕೆ ಪ್ರವಾಸಕ್ಕಾಗಿ ಬಂದಿದ್ದರು. ನಿನ್ನೆ ತಡರಾತ್ರಿ ಇವರು  ಗುರು ವಾಯೂರಿನಿಂದ ಕೊಡುಂಗಲ್ಲೂರಿಗೆ ಹೋಗುತ್ತಿದ್ದ ದಾರಿ ಮಧ್ಯೆ ತೃಶೂರು ಕೈಪಮಂ ಗಲದ ರಾಷ್ಟ್ರೀಯ ಹೆದ್ದಾರಿ-66ರ ಪನಂಬಿಕುನ್ನಿನಲ್ಲಿ ನಿಲ್ಲಿಸಿದ್ದ ಸರಕು ಲಾರಿಯ ಹಿಂದುಗಡೆ ಕಾರು ಢಿಕ್ಕಿ ಹೊಡೆದು ನುಚ್ಚುನೂರಾಗಿದೆ. ಅದನ್ನು ಕಂಡ ಸ್ಥಳೀಯರು, ಅಗ್ನಿಶಾಮಕದಳ ಮತ್ತು ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾ ಚರಣೆಯಲ್ಲಿ ನಜ್ಜುಗುಜ್ಜಾದ ಕಾರಿನೊಳಗೆ ಸಿಲುಕಿಕೊಂಡಿದ್ದ ಎಂಟು  ಮಂದಿಯನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಿದರು. ಅಷ್ಟರೊಳಗೆ  ಆ ಎಂಟು ಮಂದಿಯ ಪ್ರಾಣಪಕ್ಷಿ ಹಾರಿಹೋಗಿತ್ತು.

ಮೃತದೇಹಗಳನ್ನು ತೃಶೂರು ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ  ಸಾಗಿಸಿ ಇಂದು ಬೆಳಿಗ್ಗೆ ಮರಣೋತ್ತರ ಪರೀಕ್ಷೆಗೊಳಪಡಿಸಿ ಬಳಿಕ ಸಂಬಂಧಿ ಕರಿಗೆ ಬಿಟ್ಟುಕೊಡಲಾಯಿತು. ಢಿಕ್ಕಿಯ ಆಘಾತಕ್ಕೆ ಮೃತದೇಹದ ಗುರುತಹಚ್ಚಲು ಸಾಧ್ಯವಾಗದಷ್ಟು ಛಿದ್ರಗೊಂಡಿದೆ.  ದೇಹದ ಹಲವು ಭಾಗಗಳು ಬೇರ್ಪಟ್ಟಿವೆಯೆಂದು ಪೊಲೀ ಸರು ತಿಳಿಸಿದ್ದಾರೆ.  ಈ ಅಪಘಾತ ನಡೆದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಕು ಲಾರಿಯನ್ನು ಅನಧಿಕೃತವಾಗಿ ಪಾರ್ಕಿಂಗ್ ಮಾಡಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ.

You cannot copy contents of this page