ಮುಖ್ಯಮಂತ್ರಿಯ ಆಯ್ಕೆ: ಘಟಕಪಕ್ಷ ನೇತಾರರೊಂದಿಗೂ ಚರ್ಚೆಗೆ ಎಐಸಿಸಿ ನಿರೀಕ್ಷಕರು

ತಿರುವನಂತಪುರ: ಮುಖ್ಯಮಂತ್ರಿ ಯನ್ನು ನಿರ್ಣಯಿಸಲಿರುವ ಕ್ರಮದಂಗವಾಗಿ ರಾಜ್ಯಕ್ಕೆ ಆಗಮಿಸಿದ ಎಐಸಿಸಿ ನಿರೀಕ್ಷಕರು ಕಾಂಗ್ರೆಸ್‌ನ ಹಿರಿಯ ನೇತಾರರರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಕೆ. ಸುಧಾಕರನ್, ವಿ.ಎಂ. ಸುಧೀರನ್, ಕೊಡಿಕುನ್ನಿಲ್ ಸುರೇಶ್ ಸಹಿತ ಪ್ರಮುಖ ನೇತಾರರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ.  ಇನ್ನಷ್ಟು ನೇತಾರರನ್ನು ತಿರುವನಂತಪುರಕ್ಕೆ ಕರೆಸಲಾಗಿದೆ.  ಇದೇ ವೇಳೆ ಯುಡಿಎಫ್‌ನ ಘಟಕ ಪಕ್ಷಗಳ ನೇತಾರರೊಂದಿಗೂ ಅಭಿಪ್ರಾ ಯ ಕೇಳಲು  ಎಐಸಿಸಿ ನಿರೀಕ್ಷಕರು ತೀರ್ಮಾನಿಸಿದ್ದಾರೆ. ಇಂದು ಸಂಜೆ 4.30ಕ್ಕೆ  ಘಟಕ ಪಕ್ಷಗಳ ನೇತಾರ ರೊಂದಿಗೆ ಚರ್ಚೆ ನಡೆಯಲಿದೆ. ಇದಕ್ಕಾಗಿ ಲೀಗ್ ನೇತಾರರ ಸಹಿತ ಘಟಕ ಪಕ್ಷದ ನೇತಾರರು ತಿರುವನಂತಪುರಕ್ಕೆ ಹೊರಟಿದ್ದಾರೆ. 

ಮುಖ್ಯಮಂತ್ರಿಯ ನಿರ್ಣಯ ವಿಳಂಬವಾಗುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಚಿವರ ವಿಷಯದಲ್ಲೂ ತೀರ್ಮಾನ ವಿಳಂಬವಾಗುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಹಾಗೂ ಘಟಕ ಪಕ್ಷಗಳ ಸಚಿವರು ಮೊದಲು ಪ್ರಮಾಣವಚನ ಸ್ವೀಕರಿಸುವರು. ಅನಂತರ ಹೈಕಮಾಂ ಡ್‌ನ  ಮೇಲ್ನೋಟದಲ್ಲಿ ಕಾಂಗ್ರೆಸ್ ಶಾಸಕರನ್ನು  ತೀರ್ಮಾನಿಸ ಲಾಗುವುದೆಂದು ತಿಳಿದುಬಂದಿದೆ.

RELATED NEWS

You cannot copy contents of this page