ಸಹಪಾಠಿಗಳೊಂದಿಗೆ ಆಟವಾಡುತ್ತಿದ್ದ ಮಗುವಿನ ಕಣ್ಣಿಗೆ ಪೆನ್ಸಿಲ್ ಚುಚ್ಚಿ ಗಂಭೀರ

ಕುಂಬಳೆ:  ಶಾಲೆಯಲ್ಲಿ ಸಹ ಪಾಠಿಗಳೊಂದಿಗೆ ಆಟವಾಡುತ್ತಿದ್ದ ಮಗುವಿನ ಕಣ್ಣಿಗೆ ಪೆನ್ಸಿಲ್ ಚುಚ್ಚಿ ಗಂಭೀರ ಗಾಯಗೊಂಡ ಘಟನೆ ನಡೆ ದಿದೆ. ಈಗಾಗಲೇ ಎರಡು ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆದರೆ ದೃಷ್ಟಿ ಪೂರ್ವಸ್ಥಿತಿಗೆ ತಲುಪದ ಹಿನ್ನೆಲೆ ಯಲ್ಲಿ ತಜ್ಞ ಚಿಕಿತ್ಸೆಗಾಗಿ ಮಗುವನ್ನು ಕೊಯಂಬತ್ತೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಉಪ್ಪಳದ ಎಎಲ್‌ಪಿ ಶಾಲೆಯೊಂದರ  ಎಲ್‌ಕೆಜಿ ವಿದ್ಯಾರ್ಥಿಯೂ ಉಪ್ಪಳ ಕೈಕಂಬ ನಿವಾಸಿಯಾದ  ಮೂರರ ಹರೆಯದ ಮಗುವಿನ ಕಣ್ಣಿಗೆ ಗಾಯವಾಗಿದೆ.   ಜುಲೈ ೨೯ರಂದು ಮಗುವಿನ  ಕಣ್ಣಿಗೆ ಪೆನ್ಸಿಲ್ ಚುಚ್ಚಿ ಗಾಯಗೊಂಡಿರುವುದಾಗಿ ಹೇಳಲಾಗುತ್ತಿದೆ. ಮಕ್ಕಳು ಆಟವಾಡುತ್ತಿದ್ದಂತೆ  ಈ ಮಗುವಿನ ಬಲದ ಕಣ್ಣಿಗೆ  ಗಾಯವಾಗಿದೆ.  ಇದೇ ವೇಳೆ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯುವ ಬದಲು ಮನೆಗೆ ತಲುಪಿಸಲಾಗಿದೆಯೆಂಬ ಆರೋ ಪವೂ ಕೇಳಿಬಂದಿದೆ. ಮಗುವನ್ನು ಮನೆಯವರು ಮಂಗಳೂರಿಗೆ ತಲುಪಿಸಿ ನಡೆಸಿದ ತಪಾಸಣೆಯಲ್ಲಿ  ಕಣ್ಣಿಗೆ ಗಂಭೀರ ಗಾಯಗೊಂಡಿರು ವುದಾಗಿ ತಿಳಿದುಬಂದಿದೆ.  ದೃಷ್ಟಿ ನಷ್ಟಗೊಳ್ಳಲು ಸಾಧ್ಯತೆಯಿರುವುದ ರಿಂದ ಎರಡು ಶಸ್ತ್ರಚಿಕಿತ್ಸೆಯನ್ನು ಈಗಾಗಲೇ ನಡೆಸಲಾಗಿದೆ. ಆದರೆ ಸ್ಥಿತಿ ಗಂಭೀರವಾಗಿರುವ ಹಿನ್ನೆ ಯಲ್ಲಿ  ಮಗುವನ್ನು ಕೊಯಂಬತ್ತೂ ರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

You cannot copy contents of this page