ದೇವಸ್ವಂ ಸಚಿವ, ಮಂಡಳಿ ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿ ಬದಿಯಡ್ಕದಲ್ಲಿ ಕಾಂಗ್ರೆಸ್‌ನಿಂದ ಮೆರವಣಿಗೆ

ಬದಿಯಡ್ಕ: ಶಬರಿಮಲೆ ಕ್ಷೇತ್ರದ ಚಿನ್ನ ಕಳವು ವಿವಾದಕ್ಕೆ ಸಂಬಂಧಿಸಿ ದೇವಸ್ವಂ ಖಾತೆ ಸಚಿವ ಹಾಗೂ ದೇವಸ್ವಂ ಮಂಡಳಿ ಅಧ್ಯಕ್ಷ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ನಿನ್ನೆ ಬದಿಯಡ್ಕ ಪೇಟೆಯಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ನಡೆದ ಪ್ರತಿಭಟನಾ ಸಭೆಯನ್ನು ಕಾಂಗ್ರೆಸ್ ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅವರ ಅಧ್ಯಕ್ಷತೆಯಲ್ಲಿ ಡಿ.ಕೆ.ಟಿ.ಎಫ್ ಜಿಲ್ಲಾಧ್ಯಕ್ಷ ವಾಸುದೇವನ್ ನಾಯರ್ ಉದ್ಘಾಟಿಸಿದರು. ನೇತಾರರಾದ ಜಗನ್ನಾಥ ರೈ, ಗಂಗಾಧರ ಗೋಳಿಯಡ್ಕ, ಎಂ. ಅಬ್ಬಾಸ್, ಚಂದ್ರಹಾಸನ್ ಮಾಸ್ತರ್, ರಾಮ ಪಟ್ಟಾಜೆ, ಕುಮಾರನ್ ನಾಯರ್, ಸಿರಿಲ್ ಡಿ’ಸೋಜ, ಶ್ರೀನಾಥ್ ಬದಿಯಡ್ಕ, ಲೋಹಿತಾಕ್ಷನ್ ನಾಯರ್, ಶಾಫಿ ಗೋಳಿಯಡಿ, ರಜನಿ, ನಿಜೀಶ್ ಕೆ.ಎಂ., ವಿನ್ಸೆಂಟ್ ಮೊದಲಾದವರು ನೇತೃತ್ವ ನೀಡಿದರು.

RELATED NEWS

You cannot copy contents of this page