ಸಿಪಿಸಿಆರ್‌ಐ ಆವರಣ ಗೋಡೆ ಸಮುದ್ರ ಪಾಲು  ಕೃಷಿ ಭೂಮಿ ನೀರು ಪಾಲಾಗುವ ಭೀತಿ

  ಕಾಸರಗೋಡು: ಕಡಲ್ಕೊ ರೆತಕ್ಕೆ ಸಿಪಿಸಿಆರ್‌ಐಯ ತೋಟ ಅಪಾಯಕ್ಕೆ ಸಿಲುಕಿದೆ. ಕಾಸರ ಗೋಡು ಕೇಂದ್ರೀಯ ತೋಟಗಾರಿಕೆ ಬೆಳೆಗಳ ಸಂಶೋಧನಾ ಸಂಸ್ಥೆಯ ಕಡಲತೀರದ ತೋಟ ಸುಮಾರು 1 ಕಿಲೋ ಮೀಟರ್ ಉದ್ದಕ್ಕೆ ಸಮುದ್ರ ತೀರ ಸಮೀಪ ವಿದ್ದು, ಇಲ್ಲಿ ಈಗ ಸುಮಾರು 8೦ ಮೀಟರ್ ಉದ್ದದ ಆವರಣಗೋಡೆ ಸಮುದ್ರ ಪಾಲಾಗಿದೆ. ಇನ್ನು 3೦ ಮೀಟರ್ ಉದ್ದದ ಆವರಣಗೋಡೆ  ಕುಸಿತದ ಅಂಚಿನಲ್ಲಿದೆ.

ಈ ಹಿಂದೆ ಸಂಸ್ಥೆಯ ಗಡಿಯ ಹೊರಭಾಗದಲ್ಲಿ ಸಮೀಪದ ಗ್ರಾಮವನ್ನು ಸಂಪರ್ಕಿಸುವ ಡಾಮರು ರಸ್ತೆಯಿದ್ದು, ಸಮುದ್ರವು ಗಡಿಯಿಂದ ಸುಮಾರು 3೦ ಮೀಟರ್ ದೂರದಲ್ಲಿತ್ತು. ಆದರೆ ನಿರಂತರ ಕಡಲ್ಕೊರೆತ ಮತ್ತು ಅಲೆಗಳ ಅಬ್ಬರ ಪರಿಣಾಮ ಮಧ್ಯೆ ಭಾಗದ ಭೂಭಾಗ ಹಾಗೂ ಕರಾವಳಿ ಪ್ರದೇಶ ಕೊಚ್ಚಿ ಹೋಗಿದ್ದು, ಸಮುದ್ರವು ಸಿಪಿಸಿಆರ್‌ಐಯ ಕೃಷಿ ಭೂಮಿಯ ಅಂಚಿನವರೆಗೆ ತಲುಪಿದೆ. ಇದರಿಂದ ಸಂಸ್ಥೆಯ ಬೆಳೆಗಳು, ಸಂಶೋಧನಾ ಕ್ಷೇತ್ರ, ಮೂಲ ಸೌಕರ್ಯಗಳಿಗೆ ಹಾನಿ ಉಂಟುಮಾಡುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಿಪಿಸಿಆರ್‌ಐಯ ಅಧಿಕಾರಿಗಳು ಜಿಲ್ಲಾಧಿಕಾರಿ, ಸ್ಥಳೀಯ ಶಾಸಕ, ಸಂಸದ, ಪಂಚಾಯತ್ ಅಧ್ಯಕ್ಷ ಹಾಗೂ ನೀರಾವರಿ ಇಲಾಖೆಗೆ ಮನವಿ ನೀಡಿದೆ.  ಮುಂದಿನ ದಿನಗಳಲ್ಲಿ ಕಡಲ್ಕೊರೆತ ತೀವ್ರಗೊಂಡರೆ ಸಿಪಿಸಿಆರ್‌ಐ ಕೃಷಿ ಭೂಮಿಗೆ ಹಾನಿಯುಂಟಾಗುವ ಸಾಧ್ಯತೆಯಿದ್ದು, ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸಂಸ್ಥೆ ಆಗ್ರಹಿಸಿದೆ.

You cannot copy contents of this page