ಕುಂಬಳೆ: ಸೆಪ್ಟೆಂಬರ್ 14ರಿಂದ ಪ್ರಾರಂಭಗೊAಡು 3 ದಿನಗಳ ಕಾಲ ನಡೆಯಲಿರುವ ೪೭ನೇ ವರ್ಷದ ಕುಂಬಳೆ ಕಣಿಪುರ ಸಾರ್ವಜನಿಕ ಶ್ರೀ ಗಣೇಶೋತ್ಸವದ ವಿಗ್ರಹದ ರಚನೆ ಜುಲೈ 21ರಂದು ಶಿಲ್ಪಿಗಳಾದ ನವೀನ್ ಆಚಾರ್ಯ ಮಂಗಳೂರು ಮತ್ತು ಸುಬ್ರಾಯ ಪ್ರಭು ಮಂಗಳೂರು ಇವರು ಆರಂಬಿsಸಿದ್ದು, ನಿರ್ಮಾಣ ಪೂರ್ತಿಗೊಳಿಸಿ ಕೆ. ನಾರಾಯಣ ಪ್ರಭುಗಳ ನಿವಾಸದಲ್ಲಿ ಸಮಿತಿಯ ಸದಸ್ಯರ ಉಪಸ್ಥಿತಿಯಲ್ಲಿ ಸಮಿತಿಯವರಿಗೆ ಬಿಟ್ಟುಕೊಟ್ಟರು. ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ಶೆಣೈ, ಸದಸ್ಯರಾದ ಕೆ. ನಾರಾಯಣ ಪ್ರಭು, ದಯಾನಂದ ರಾವ್, ಉಪಾಧ್ಯಕ್ಷ ಕೆ.ಸುಧಾಕರ್ ಕಾಮತ್ ಹಾಗೂ ಸಕ್ರಿಯ ಕಾರ್ಯಕರ್ತರಾದ ಕೆ. ಮಧುಸೂದನ್ ಕಾಮತ್, ಜಯರಾಜ್ ಕೆ, ಕಿರಣ್ ಪ್ರಭು, ಧೀರಜ ನಾಯಕ್ ಉಪಸ್ಥಿತರಿದ್ದರು.





