ಪೈವಳಿಕೆ: ವಾದ್ಯಪಡ್ಪು ನಿವಾಸಿ ಮಾಂಕು ಮೂಲ್ಯರ ಪುತ್ರ, ಹಿರಿಯ ಕೃಷಿಕ, ಸಿಪಿಎಂ ಕಾರ್ಯಕರ್ತ ಸಂಕಪ್ಪ ಮೂಲ್ಯ (72) ನಿಧನ ಹೊಂದಿದರು. ಮೃತರು ಪತ್ನಿ ರಾಧ, ಮಕ್ಕಳಾದ ಪ್ರಸಾದ್, ಅನೂಪ್, ಇಂದು, ವಿಜಯ, ಪ್ರಮೀಳ, ಅಳಿಯ-ಸೊಸೆಯಂದಿರು, ಸಹೋದರ ಕೊರಗು ಮೂಲ್ಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಸಿಪಿಎಂ ಮುಖಂಡರಾದ ಕೆ.ಆರ್. ಜಯಾನಂದ, ಅಬ್ದುಲ್ ರಜಾಕ್ ಚಿಪ್ಪಾರು, ಚಂದ್ರ ನಾಯ್ಕ್ ಮಾನಿಪ್ಪಾಡಿ, ಕರುಣಾಕರ ಶೆಟ್ಟಿ, ಪ್ರಶಾಂತ್ ಕನಿಲ, ಸದಾನಂದ ಕೋರಿಕ್ಕಾರ್, ಅಬ್ದುಲ್ಲ ಕೆ, ಹಾರಿಸ್ ಪೈವಳಿಕೆ, ಹುಸೈನ್ ಮಾಸ್ತರ್, ಶ್ರೀನಿವಾಸ ಭಂಡಾರಿ, ಅಹಮ್ಮದ್ ಅಮೀನ್, ವಲ್ಟಿ ಡಿಸೋಜ, ರವಿ ಮೊಂತೇರೊ, ಮಿಸ್ರಿಯ ಫಾರೂಕ್, ಕೃಷ್ಣ ಭಟ್ ಕಳಾಯಿ, ಕುಲಾಲ ಸಂಘದ ಅಧ್ಯಕ್ಷ ಪೂವಪ್ಪ ಮುನ್ನಿಪ್ಪಾಡಿ ಭೇಟಿ ನೀಡಿ ಸಂತಾಪ ಸೂಚಿಸಿದರು.






