ಕುಸಿದ ಮಳೆ: ಬರಿದಾದ ಅಣೆಕಟ್ಟುಗಳು: ರಾಜ್ಯದಲ್ಲಿ ಮುಕ್ಕಾಲುಗಂಟೆ ವಿದ್ಯುತ್ ನಿಯಂತ್ರಣ

ಕಾಸರಗೋಡು: ಮುಂಗಾರು ಮಳೆ ಕೈಕೊಟ್ಟಿರುವುದರಿಂದಾಗಿ ರಾಜ್ಯದ  ಜಲವಿದ್ಯುತ್ ಯೋಜನೆಗಳ ಅಣೆಕಟ್ಟು ಗಳಲ್ಲಿ ನೀರಿನ ಮಟ್ಟ ಗಣನೀ ಕುಸಿದಿರುವುದರಿಂದ ವಿದ್ಯುತ್ ಅದು ಉತ್ಪಾದನೆಯನ್ನೂ ಕುಸಿಯುವಂತೆ ಮಾಡಿದೆ. ಇದರಿಂದಾಗಿ ರಾಜ್ಯದಲ್ಲಿ ದೈನಂದಿನ 45 ನಿಮಿಷಗಳ ತನಕ ವಿದ್ಯುತ್ ನಿಯಂತ್ರಣ ಹೇರಲು ರಾಜ್ಯ ವಿದ್ಯುನ್ಮಂಡಳಿ ತೀರ್ಮಾನಿಸಿದೆ.

ಈಗ ಸಾಧಾರಣವಾಗಿ 15ರಿಂದ 30 ನಿಮಿಷಗಳ ತನಕ ವಿದ್ಯುತ್ ನಿಯಂತ್ರಣ ಏರ್ಪಡಿಸಲಾಗುತ್ತಿದೆ. ಇದನ್ನು 45 ನಿಮಿಷಗಳಿಗೆ ಏರಿಸಲು ಮಂಡಳಿ ತೀರ್ಮಾನಿಸಿದೆ. ಅಂದರೆ ಒಂದೇ ಬಾರಿ  ನಿಯಂತ್ರಣ ಹೇರಲಾಗು ವುದಿಲ್ಲ. ಅದರ ಬದಲು ಹಗಲು ಮತ್ತು ರಾತ್ರಿ ವಿವಿಧ ಸಮಯಗಳಲ್ಲಾಗಿ ತಲಾ ೧೫ ನಿಮಿಷಗಳಂತೆ  ನಿಯಂತ್ರಣ ಏರ್ಪಡಿಸಲಾಗುವುದೆಂದು ಮಂಡಳಿ ತಿಳಿಸಿದೆ.

ವಿದ್ಯುತ್ ಉತ್ಪಾದನೆಯಲ್ಲಿ ಉಂಟಾಗಿರುವ ಕೊರತೆಯಿಂದಾಗಿ ಹೊರಗಿನಿಂದ ಈಗ ದೈನಂದಿನ 150 ಮೆಘಾವಾಟ್‌ನಷ್ಟು ಹೆಚ್ಚುವರಿ ವಿದ್ಯುತ್ ಖರೀದಿಸಲಾಗುತ್ತಿದೆ. ಇದೇ ರೀತಿ ಇನ್ನಷ್ಟು  ವಿದ್ಯುತ್ ಖರೀದಿಸಿ  ವಿದ್ಯುತ್ ನಿಯಂತ್ರಣವನ್ನು ಹೊರತು ಪಡಿಸುವ ಕ್ರಮದಲ್ಲೂ ಮಂಡಳಿ ತೊಡಗಿದೆ. ಮಳೆ ಸುರಿಯುವಿಕೆಯಲ್ಲಿ ಇನ್ನೂ ಕುಸಿತವುಂಟಾದಲ್ಲಿ ವಿದ್ಯುತ್ ನಿಯಂತ್ರಣ ಇನ್ನೂ ಮುಂದುವರಿಸ ಬೇಕಾಗಿ ಬರಲಿದೆ ಯೆಂದು ಮಂಡಳಿ ತಿಳಿಸಿದೆ.

ರಾಜ್ಯದಲ್ಲಿ ಜಲವಿದ್ಯುತ್ ಯೋಜನೆಗಳ ಅಣೆಕಟ್ಟುಗಳಲ್ಲಿ ಈಗ ಶೇ. 20.89ರಷ್ಟು ನೀರು ಮಾತ್ರವೇ ಉಳಿದುಕೊಂಡಿದೆ. 2020ರಲ್ಲಿ ಪೀಕ್ ಸಮಯಗಳಲ್ಲಿ ವಿದ್ಯುತ್  ದೈನಂದಿನ ಉಪಯೋಗ 3416 ಮೆಘಾವಾಟ್ ಆಗಿದ್ದಲ್ಲಿ ಅದು ಈಗ 5900 ಮೆಘಾವಾಟ್‌ಗೇರಿದೆ. ಇದರಿಂದ ಇನ್ನಷ್ಟು ಹೆಚ್ಚು ದರ  ನೀಡಿ ಹೊರಗಿನಿಂದ ಇನ್ನೂ ಹೆಚ್ಚು ವಿದ್ಯುತ್ ಖರೀದಿಸಬೇಕಾಗಿ ಬರಲಿದೆ. ಹಾಗಾದಲ್ಲಿ ಮುಂದೆ ವಿದ್ಯುತ್ ದರ ಏರಿಕೆಗೆ ದಾರಿಮಾಡಿಕೊಡ ಲಿದೆಯೆಂದು ಮಂಡಳಿ ಅಧಿಕಾರಿಗಳು ಹೇಳುತ್ತಿದ್ದಾರೆ.

You cannot copy contents of this page