ಬೆಳೇರಿಯಲ್ಲಿ ಭತ್ತದ ತಳಿ ಸಂರಕ್ಷಣಾ, ಸಂಶೋಧನಾ ಕೇಂದ್ರ ಸ್ಥಾಪನೆಗೆ ನಿರ್ಧಾರ: ಟ್ರಸ್ಟ್ ರಚನೆಗೆ ನಿರ್ಣಯ

ಬೆಳ್ಳೂರು: ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಅವರ ೬೫೦ಕ್ಕೂ ಅಧಿಕ ಭತ್ತದ ತಳಿಗಳನ್ನು ಸಂರಕ್ಷಿಸಿ ಉಳಿಸಲು ಮ್ಯೂಸಿಯಂ ಮತ್ತು ಅಧ್ಯಯನ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ. ವಿಷು ದಿನದಂದು ಬೆಳ್ಳೂರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಪ್ರಾರ್ಥನೆ, ಪೂಜೆ ಸಲ್ಲಿಸಿ ಈ ಯೋಜನೆ ಸಾಕಾರಕ್ಕೆ ಅಡಿಯಿಡಲಾಗಿದೆ. ಸತ್ಯನಾರಾಯಣ ಬೆಳೇರಿಯವರ ತಳಿಗಳ ಸಂರಕ್ಷಣೆಗೆ ಸ್ಥಳ ಇಲ್ಲದಿರುವುದು, ವಿವಿಧ ಕಡೆಗಳಿಂದ ಇವರನ್ನು ಹುಡುಕಾಡಿ ಬರುತ್ತಿರುವ ವಿಜ್ಞಾನಿ, ಸಂಶೋಧಕರು, ವಿದ್ಯಾರ್ಥಿಗಳಿಗೆ ಇಲ್ಲಿ ಸೂಕ್ತ ಸೌಲಭ್ಯ ಇಲ್ಲದಿರುವುದೇ ಅಧ್ಯಯನ ಕೇಂದ್ರ ಸ್ಥಾಪನೆಗೆ ಯೋಜನೆ ಹಮ್ಮಿಕೊಳ್ಳಲು ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ರಾಮಾಯಣ ಕಾಲದ ಭತ್ತದ ತಳಿಯಾದ ಅತಿಕಾರ ಹೆಸರಿನಲ್ಲಿ ಟ್ರಸ್ಟ್ ರೂಪಿಸಿ ಅಧ್ಯಯನ ಕೇಂದ್ರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಸ್ಥಳ ಅಗತ್ಯವಿದ್ದು, ಅದರ ಪರಿಶೀಲನೆ ನಡೆಯುತ್ತಿದೆ. ಆ ಬಳಿಕ ಟ್ರಸ್ಟ್ ಉದ್ಘಾಟನೆ, ಕೇಂದ್ರ ಶಿಲಾನ್ಯಾಸಕ್ಕೆ ನಿರ್ಧರಿಸಲಾಗಿದೆ. ಈ ಬಗ್ಗೆ ಬೆಳ್ಳೂರು ಕ್ಷೇತ್ರದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಉದ್ದಿಮೆ ಮಧೂಸದನ ಆಯರ್ ಅಧ್ಯಕ್ಷತೆ ವಹಿಸಿದರು. ಕೃಷಿಕ ಕಲ್ಲಗ ಚಂದ್ರಶೇಖರ ರಾವ್, ಎಂ.ನಾ. ಚಂಬಲ್ತಿಮಾರ್, ಪದ್ಮಶ್ರೀ ಸತ್ಯನಾರಾಯಣ ಬೆಳೇರಿ, ನಿವೃತ್ತ ಅಧ್ಯಾಪಕ ಕುಂಞಿರಾಮ ಮಣಿಯಾಣಿ, ದಯಾನಂದ ರೈ ಕಳ್ವಾಜೆ ಉಪಸ್ಥಿತರಿದ್ದರು.

RELATED NEWS

You cannot copy contents of this page