ಸೋಂಕಾಲು ಜಂಕ್ಷನ್ ಬಸ್ ತಂಗುದಾಣ ಬಳಿ ಅಪಾಯ ಭೀತಿಯೊಡ್ಡುವ ಒಣಗಿದ ಮರ: ತೆರವಿಗೆ ಒತ್ತಾಯ

ಉಪ್ಪಳ: ಸೋಂಕಾಲು ಜಂಕ್ಷನ್‌ನಲ್ಲಿ ಬಾಯಾರು ಭಾಗಕ್ಕೆ ತೆರಳುವ ಬಸ್ ತಂಗುದಾಣ ಪರಿಸರದಲ್ಲಿ ಒಣಗಿದ ಮರವೊಂದು ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಆತಂಕ ಕಾಡುತ್ತಿದೆ. ಒಂದು ತಿಂಗಳಿAದ ಮರ ಒಣಗಿ ಶೋಚನೀಯಾವಸ್ಥೆಯಲ್ಲಿ ಕಂಡು ಬರುತ್ತಿದ್ದು, ಮಳೆ, ಗಾಳಿಗೆ ಮುರಿದು ಬೀಳುವ ಸಾಧ್ಯತೆ ಇದೆ. ಇಲ್ಲಿನ ಬಸ್ ತಂಗುದಾಣದಲ್ಲಿ ನಿತ್ಯ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಿದ್ದು, ಅಲ್ಲದೆ ಗೂಡಂಗಡಿ, ದ್ವಿಚಕ್ರ ವಾಹನಗಳನ್ನು ನಿಲುಗಡೆ ಗೊಳಿಸಲಾಗುತ್ತಿದೆ. ಈ ಪರಿಸರ ಜನನಿಬಿಡ ಪ್ರದೇಶವಾಗಿದ್ದು, ಮರ ಮುರಿದು ಬಿದ್ದಲ್ಲಿ ಭಾರೀ ಅಪಾಯಕ್ಕೆ ಕಾರಣವಾಗಬಹುದೆಂದು ಸ್ಥಳೀಯರು ತಿಳಿಸಿದ್ದಾರೆ. ಈ ಒಣಗಿದ ಮರವನ್ನು ತೆರೆವುಗೊಳಿಸಿ ಸಂಭವಿಸಬಹುದಾದ ಅಪಾಯ ತಪ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page