ಮತದಾರರ ಯಾದಿಯಲ್ಲಿ ಹೆಸರು ಸೇರಿಸಲು ವಿಲ್ಲೇಜ್ ಆಫೀಸ್‌ಗಳಲ್ಲಿ ಎನ್‌ರೋಲ್‌ಮೆಂಟ್ ಡ್ರೈವ್‌ಗಳಿಗೆ ಚಾಲನೆ

ಕಾಸರಗೋಡು: ಮತದಾರರ ಯಾದಿಯಲ್ಲಿ ಹೆಸರು ಸೇರಿಸುವುದಕ್ಕೆ, ಹೊರತುಪಡಿಸುವುದಕ್ಕೆ, ತಿದ್ದುಪಡಿ ಮಾಡುವುದಕ್ಕೆ ಜಿಲ್ಲೆಯಲ್ಲಿ ಪ್ರತ್ಯೇಕ ಎನ್‌ರೋಲ್‌ಮೆಂಟ್ ಡ್ರೈವ್‌ಗೆ ಚಾಲನೆ ನೀಡಲಾಯಿತು. ನಿನ್ನೆಯಿಂದ ಈ ತಿಂಗಳ 31ರವರೆಗೆ ಜರಗುವ ಎನ್‌ರೋಲ್‌ಮೆಂಟ್ ಡ್ರೈವ್‌ನಲ್ಲಿ 2027 ಜನವರಿ 1ರಂದು 18 ವರ್ಷ ಪೂರ್ತಿಯಾಗುವವರು, ಇದುವರೆಗೆ ಮತದಾರರ ಯಾದಿಯಲ್ಲಿ ಹೆಸರು ಒಳಗೊಳ್ಳದವರಿಗೆ ಹೆಸರು ಸೇರಿಸಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಈ ತಿಂಗಳ 31ರವರೆಗೆ ಜಿಲ್ಲೆಯ ವಿಲ್ಲೇಜ್ ಆಫೀಸ್‌ಗಳಲ್ಲಿ ಡಿಜಿಟಲ್ ಹೆಲ್ಪ್ ಡೆಸ್ಕ್ ಕಾರ್ಯಾಚರಿಸಲಿದೆ. ಅರ್ಜಿದಾರರು ಫಾರ್ಮ್ ೬ ಪೂರ್ತಿಗೊಳಿಸಿ ನೀಡ ಬೇಕು. ಅರ್ಜಿಯ ಜೊತೆಗೆ ಭಾವಚಿತ್ರ, ಪ್ರಾಯ, ವಿಳಾಸ, ಖಾಯಂ ವಾಸ ದೃಢೀಕರಿಸುವುದಕ್ಕಾಗಿ ಚುನಾವಣಾ ಆಯೋಗ ಅಂಗೀಕರಿಸಿರುವ ೧೨ ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಬೇಕು. ಅರ್ಜಿಯ ಜೊತೆ ಆಧಾರ್ ನೀಡುವವರು ಅದರ ಹೊರತಾಗಿ ಅಂಗೀಕೃತ ಇನ್ನೊಂದು ದಾಖಲೆಯನ್ನು ಕೂಡಾ ನೀಡಬೇಕಾಗಿದೆ. ಅರ್ಜಿಯ ಆಧಾರದಲ್ಲಿ ಮುಂದಿನ ಕ್ರಮಗಳನ್ನು ಬೂತ್ ಲೆವೆಲ್ ಆಫೀಸರ್‌ಗಳು ಮನೆಗಳಿಗೆ ತಲುಪಿ ಪೂರ್ತಿಗೊಳಿಸು ವರು ಎಂದು ಜಿಲ್ಲಾ ಚುನಾವಣಾಧಿಕಾ ರಿಯಾಗಿರುವ ಜಿಲ್ಲಾಧಿಕಾರಿ ಶ್ರೀ ಧನ್ಯಾ ಸುರೇಶ್ ತಿಳಿಸಿದ್ದಾರೆ. ಚುನಾವಣಾ ಆಯೋಗದ ವೆಬ್‌ಸೈಟ್ ಆಗಿರುವ  https://voters.eci.gov.in ನಲ್ಲಿ, ECINET ಮೊಬೈಲ್ ಆಪ್ ಮೂಲಕ ಆನ್‌ಲೈನ್ ಆಗಿಯೂ ಅರ್ಜಿ ಸಲ್ಲಿಸಬಹುದಾಗಿದೆ.

RELATED NEWS

You cannot copy contents of this page