ಮೊನಾಲಿಸ ಮೃತಪಟ್ಟಿರುವುದಾಗಿ ಸುಳ್ಳು ಸುದ್ದಿ ವೈರಲ್: ನಿರಾಕರಿಸಿದ ಸಂಬಂಧಿಕರು

ಭೋಪಾಲ್: ಕುಂಬಮೇಳ ವೈರಲ್ ತಾರೆ ಮೊನಾಲಿಸ ಬೋಸ್ಲೆ ಮೃತಪಟ್ಟಿರುವುದಾಗಿ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗುತ್ತಿರುವ ಸುದ್ಧಿ ಸುಳ್ಳೆಂದು ಸ್ಪಷ್ಟಪಡಿಸಲಾಗಿದೆ. ಈಕೆ ಆತ್ಮಹತ್ಯೆಗೈದಿರುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗುತ್ತಿತ್ತು. ಪ್ರಚಾರ ವಾಗುವ ಸಂದೇಶಗಳು ಹಾಗೂ ಚಿತ್ರ ಎಐ ನಿರ್ಮಿತವಾಗಿದೆ ಎಂದು ತಪಾಸಣೆಯಿಂದ ಪತ್ತೆಹಚ್ಚಲಾಗಿದೆ. ಮೊನಾಲಿಸರ ಗೆಳೆಯರು ಈ ವಾರ್ತೆಯನ್ನು ಸುಳ್ಳೆಂದು ತಿಳಿಸಿ ಜಾಲತಾಣಗಳಲ್ಲಿ ರಂಗಕ್ಕಿಳಿದಿದ್ದಾರೆ. ವೈರಲ್ ಪೋಸ್ಟ್‌ಗಳಲ್ಲಿ ಉಪಯೋಗಿಸಿ ರುವ ಚಿತ್ರ ಎಐ ಡಿಟಾಕ್ಷನ್ ಟೂಲ್‌ಗಳನ್ನು ಉಪಯೋಗಿಸಿ ಪರಿಶೀಲಿಸಿದಾಗ ಅದು ಕೃತಕ ನಿರ್ಮಾಣವೆಂದು ಪತ್ತೆಯಾಗಿರು ವುದಾಗಿ ಅವರು ತಿಳಿಸಿದ್ದಾರೆ. ಮೊನಾಲಿಸ ಪೂರ್ಣವಾಗಿ ಸುರಕ್ಷಿತವಾಗಿದ್ದಾರೆಂದು, ಸಾವಿನ ಸುದ್ದಿ ಅಸಂಬದ್ಧವೆಂದು ಕುಟುಂಬದವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನ.೨೬ರಿಂದ ಮೊನಾಲಿಸ ಬೋಸ್ಲೆ ಮೃತಪಟ್ಟಿರುವುದಾಗಿ ಸುಳ್ಳು ಸುದ್ದಿ ಹಬ್ಬುತ್ತಿತ್ತು. ಆದರೆ ೨೭ರಂದು ಮೊನಾಲಿಸ ಬೋ ಸ್ಲೆಯ ವೆರಿಫೈಡ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅವರು ಸಂದೇಶ ವನ್ನು ಹಾಕಿದ್ದರು. ೨೦೨೫ರಲ್ಲೂ ಈ ರೀತಿಯಲ್ಲಿ ಮೊನಾಲಿಸ ವಿರುದ್ಧ ಸುಳ್ಳು ಸುದ್ದಿಗಳು ಹಬ್ಬಿತ್ತು.

RELATED NEWS

You cannot copy contents of this page