ಮುಸ್ಲಿಂ ಯೂತ್ ಲೀಗ್ ವಿರುದ್ಧ ನಕಲಿ ಪೋಸ್ಟರ್ ಪ್ರಚಾರ: ವಿದ್ಯಾನಗರ ಪೊಲೀಸರಿಂದ ಕೇಸು ದಾಖಲಿಸಿ ತನಿಖೆ ಆರಂಭ

ಕಾಸರಗೋಡು: ಮುಸ್ಲಿಂ ಯೂತ್‌ಲೀಗ್‌ನ ವಿರುದ್ಧ ಸಾಮಾ ಜಿಕ ಜಾಲತಾಣದಲ್ಲಿ ನಕಲಿ ಪೋಸ್ಟ ರ್‌ಗಳನ್ನು ಪ್ರಚಾರಪಡಿಸಿರುವುದಾಗಿ ನೀಡಿದ ದೂರಿನಂತೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಮಧೂರು, ಚೆಟ್ಟಂಗುಳಿ ಇಸಾಂ ಮಹಲ್‌ನ ಕಲಂದರ್ ಶಾಫಿ ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು  ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜೂನ್ ೯ರಿಂದ ಸಮಾಜದಲ್ಲಿ ಗಲಭೆ ಉಂಟುಮಾಡುವ ಉದ್ದೇಶದಿಂದ ಇನ್‌ಸ್ಟಾಗ್ರಾಮ್‌ನಲ್ಲಿ ನಕಲಿ ಪ್ರಚಾರ ನಡೆಸಿರುವುದಾಗಿ ದೂರಲಾಗಿತ್ತು. ದ ಕಮ್ಯೂನಿಸ್ಟ್ ವೇ, ಡಿವೈಎಫ್‌ಐ ಉಕ್ಕಿನಡ್ಕ, ಲೆಫ್ಟಿಸ್ಟ್‌ಸ್, ಕಾಮ್ರೇಡ್ಸ್ ಚೆಟ್ಟುಂಗುಳಿ ಎಂಬೀ ಪೇಜುಗಳ ಮೂಲಕ ವಿಭಾಗೀಯತೆ ಬೆಳೆಸುವ ರೀತಿಯಲ್ಲಿರುವ ಪ್ರಚಾರ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಘಟನೆಯಲ್ಲಿ ವಿದ್ಯಾನಗರ ಎಸ್‌ಐ ಎಸ್. ಅನೂಪ್‌ರ ನೇತೃತ್ವದಲ್ಲಿ ತನಿಖೆ ಪ್ರಗತಿಯಲ್ಲಿದೆ. ಇದೇ ವೇಳೆ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ನಕಲಿ ಪ್ರಚಾರ ಸಕ್ರಿಯವಾಗಿರುವುದಾಗಿ ರಹಸ್ಯ ತನಿಖಾ ವಿಭಾಗ ಈ ಮೊದಲು ಕಂಡುಕೊಂಡಿತ್ತು. ಈ ಬಗ್ಗೆ ಸೈಬರ್ ಸೆಲ್ ನಿಗಾ ತೀವ್ರಗೊಳಿಸಿದೆ.

You cannot copy contents of this page