ಮೀಯಪದವುನಲ್ಲಿ ಗುಡ್ಡೆ ಜರಿದು ಬೀಳುವ ಆತಂಕ ಮಲೆನಾಡು ಹೆದ್ದಾರಿಯಲ್ಲಿ ಸಂಚಾರ ಭೀತಿ

ಮಂಜೇಶ್ವರ: ನಂದರಪದವು ಮಲೆನಾಡ ಹೆದ್ದಾರಿಯ ಮೀಯಪದವು ಪರಿಸರ ಪ್ರದೇಶದಲ್ಲಿ ಗುಡ್ಡೆ ಜರಿದು ಬೀಳುವ ಸ್ಥಿತಿಯಲ್ಲಿದ್ದು, ತಡೆಗೋಡೆ ನಿರ್ಮಿಸಿ ಭದ್ರತೆ ಒದಗಿಸಲು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಕಳೆದ ಮಳೆಗಾಲದಲ್ಲಿ ಮೀಯಪದವು ಸಮೀಪದ ತಿರುವಿನಲ್ಲಿ ಗುಡ್ಡೆ ಜರಿದು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ನಡೆದಿತ್ತÄ.
ಮಳೆಗಾಲ ಸಮೀಪಿಸುತ್ತಿದ್ದು, ಮತ್ತೆ ಗುಡ್ಡೆ ಜರಿದು ಬೀಳುವ ಆತಂಕ ಜನರನ್ನು ಕಾಡುತ್ತಿದೆ. ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ಗುಡ್ಡೆ ಜರಿದು ಬೀಳುವ ಪ್ರದೇಶವನ್ನು ಪರಿಶೀಲಿಸಿ ಭದ್ರತೆ ಒದಗಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

You cannot copy contents of this page