ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ವಾರ್ಷಿಕೋತ್ಸವ ಸಮಿತಿ ರೂಪೀಕರಣ

ಬದಿಯಡ್ಕ: ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ 18ನೇ ವರ್ಷದ ಆಚರಣೆ ಹಾಗೂ ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವದ ಯಶಸ್ಸಿಗಾಗಿ ಸಮಿತಿ ರೂಪೀಕರಣ ನಡೆಯಿತು. ಶ್ರೀ ಮಂದಿರದಲ್ಲಿ ಜರಗಿದ ಸಭೆಯನ್ನು ಧಾರ್ಮಿಕ ಮುಂದಾಳು ಹರಿನಾರಾಯಣ ಶಿರಂತಡ್ಕ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಧಾರ್ಮಿಕ ಕಾರ್ಯಗಳು ನಡೆದಷ್ಟು ನಮ್ಮ ಸಮಾಜವು ಒಂದುಗೂ ಡುತ್ತದೆ. ಎಲ್ಲರೂ ಜೊತೆಗೂಡಿ ಒಮ್ಮತದಿಂದ ದೇವರ ಕಾರ್ಯವನ್ನು ನೇರವೇರಿಸೋಣ ಎಂದರು. ನೂತನ ಸಮಿತಿಯ ಅಧ್ಯಕ್ಷರಾಗಿ ಉದ್ಯಮಿ ನಿತ್ಯಾನಂದ ಶೆಣೈ ಬದಿಯಡ್ಕ, ಕಾರ್ಯಾಧ್ಯಕ್ಷರಾಗಿ ಕುಂಬ್ಡಾಜೆ ಗ್ರಾಮಪಂಚಾಯಿತಿ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ, ಪ್ರಧಾನ ಕಾರ್ಯದರ್ಶಿಯಾಗಿ ಹರಿನಾರಾಯಣ ಶಿರಂತಡ್ಕ, ಕೋಶಾಕಾರಿಯಾಗಿ ಕೃಷ್ಣ ಮಣಿಯಾಣಿ ಅಗಲ್ಪಾಡಿ ಅವರನ್ನು ಆರಿಸಲಾಯಿತು.

RELATED NEWS

You cannot copy contents of this page