ಕಂದಾಯ ಜಿಲ್ಲಾ ಶಾಲಾ ಕಲೋತ್ಸವ ಸ್ವಾಗತ ಸಮಿತಿ ಕಚೇರಿ ಉದ್ಘಾಟನೆ

ಕಾಸರಗೋಡು: ನವೆಂಬರ್ 24ರಿಂದ 28ರ ತನಕ ಪೆರಿಯ ಜಿಎಚ್‌ಎಸ್‌ಎಸ್‌ನಲ್ಲಿ ನಡೆಯಲಿರುವ ಜಿಲ್ಲಾ ಕಂದಾಯ ಶಾಲಾ ಕಲೋತ್ಸವದ ಸ್ವಾಗತಸಮಿತಿ ಕಚೇರಿಯನ್ನು ಪೆರಿಯಾದಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಶ್ರೀಧನ್ಯಾ ಸುರೇಶ್ ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಶಾಲಾ ಕಲೋತ್ಸವದ ಲೋಗೊವನ್ನು ಇದೇ ಸಂದರ್ಭದಲ್ಲಿ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ನಿಧಿನ್‌ರಾಜ್ ಪ್ರಕಾಶನಗೈದರು. ಸ್ಮರಣಿಕಾ ಟೈಟಲ್ ಲಾಂಛನ ಪ್ರಕಾಶನವನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕೆ.ಕೆ. ಸೋಯಾ ನಿರ್ವಹಿಸಿದರು.

1987-88 ಎಸ್‌ಎಸ್‌ಎಲ್‌ಸಿ ಬ್ಯಾಚ್ ಪಬ್ಲಿಸಿಟಿ ಸಮಿತಿಗಾಗಿ ತಯಾರಿ ಸಿದ ಪ್ರೋಗ್ರಾಂ ವೀಡಿಯೋವನ್ನು  ನ್ಯಾಯವಾದಿ ಎಂ.ಕೆ. ಬಾಬುರಾಜ್ (ಪುಲ್ಲೂರು ಪೆರಿಯಾ ಪಂಚಾಯತ್ ಉಪಾಧ್ಯಕ್ಷ) ಇದೇ ಸಂದರ್ಭದಲ್ಲಿ ಪ್ರಕಾಶನಗೈದರು. ಪಿಟಿಎ ಅಧ್ಯಕ್ಷ ಸತ್ಯನ್ ಮರತ್ತಿಲ್, ಬ್ಲೋಕ್ ಪಂಚಾಯತ್ ಸದಸ್ಯೆ ಸಿಂಧು, ಪದ್ಮನಾಭನ್, ಪಂ. ಸದಸ್ಯೆ ಉಷಾ ಎನ್. ನಾಯರ್, ಎಸ್‌ಎಂಎಸ್ ಅಧ್ಯಕ್ಷ ಗೋಪಾಲನ್ ವಿ, ಎಂಪಿಟಿಎ ಅಧ್ಯಕ್ಷೆ ಶೀಬಾ ಸಜೀಂದ್ರನ್ ಮೊದಲಾದವರು ಶುಭಾಶಂಸನೆಗೈದು ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುಮಿತ ಪಿ. ಸ್ವಾಗತಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕಿ ಡಾ. ಸಪ್ನ ಪಿ.ಸಿ. ವಂದಿಸಿದರು. ಇದೇ ಸಂದರ್ಭದಲ್ಲಿ ಲೋಗೋ ವಿನ್ನರ್ ಆಗಿ ದೇವಾನಂದ ಕೆ.ಳನ್ನು ಆರಿಸಲಾಯಿತು.

RELATED NEWS

You cannot copy contents of this page