ಕಾಸರಗೋಡು: ರಾಜ್ಯದಲ್ಲಿ ಚಿನ್ನದ ಬೆಲೆಯಲ್ಲಿ ಒಂದೇ ಬಾರಿಗೆ 10,200 ರೂಪಾಯಿಗಳ ಹೆಚ್ಚಳ ಉಂಟಾಗಿದೆ. ಗ್ರಾಂಗೆ ಇಂದು 10,200 ರೂ.ಗಳ ಹೆಚ್ಚಳವಾಗಿದ್ದು, ಇದರಿಂದ ಒಂದು ಪವನ್ ಚಿನ್ನದ ದರ 1,23,120 ರೂಪಾಯಿ ಗೇರಿದೆ. ಇದೇ ವೇಳೆ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಿರುವುದು ಗ್ರಾಹಕರಿಗೆ ಹಾಗೂ ಚಿನ್ನ ವ್ಯಾಪಾರಿ ಗಳಿಗೆ ಸಂದಿಗ್ಧತೆ ಉಂಟುಮಾಡಿದೆ.
ಚಿನ್ನದ ಆಮದು ಸುಂಕವನ್ನು ಕೇಂದ್ರ ಸರಕಾರ ೬ರಿಂದ ೧೫ ಶೇಕಡಾಕ್ಕೇರಿಸಿದೆ. ಇಂದಿನಿಂದ ಈ ಹೊಸ ತೀರ್ಮಾನ ಜ್ಯಾರಿಗೆ ಬಂದಿದೆ. 2024ರಲ್ಲಿ ಆಮದು ಸುಂಕ 15 ಶೇಕಡಾವಾಗಿತ್ತು. ಅನಂತರ ಅದನ್ನು ೬ ಶೇಕಡಾವಾಗಿ ಕಡಿಮೆ ಮಾಡಲಾಯಿತು. ಇದರಿಂದ ಚಿನ್ನದ ಆಮದು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಯಿತು.ಆದರೆ ಇದೇ ಸ್ಥಿತಿ ಮುಂದುವರಿದರೆ ದೇಶ ಸಂದಿಗ್ಧತೆಯಲ್ಲಿ ಸಿಲುಕಲಿದೆಯೆಂದು ಮನಗಂಡು ತೆರಿಗೆಯನ್ನು ಮತ್ತೆ ಹೆಚ್ಚಿಸಲಾಗಿದೆ.
ಆಮದು ಸುಂಕ ಹೆಚ್ಚಿಸುವಾಗ ಸ್ವಾಭಾವಿಕವಾಗಿ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗುತ್ತದೆ. ಆಮದು ಮಾಡಿಕೊಳ್ಳುವಾಗ ತೆರಿಗೆ ರೂಪದಲ್ಲಿ ಭಾರೀ ಮೊತ್ತ ಖಜಾನೆಗೆ ತಲುಪು ವುದು. ಆಮದು ನಡೆಸುವವರಿಗೆ ಇದರಿಂದ ಖರ್ಚು ಕೂಡಾ ಹೆಚ್ಚುತ್ತದೆ. ಇಂತಹ ಸಂದರ್ಭದಲ್ಲಿ ಅವರು ಚಿನ್ನದ ಆಮದಿನಿಂದ ಹಿಂಜರಿಯುತ್ತಾರೆ. ಈ ಮೂಲಕ ಭಾರತದಿಂದ ವಿದೇಶಕ್ಕೆ ಹಣ ಸಾಗಾಟವಾಗುವುದನ್ನು ಕಡಿಮೆ ಮಾಡಲು ಸಾಧ್ಯವಿದೆ. ಇದೇ ವೇಳೆ ಚಿನ್ನದ ಬೆಲೆ 9 ಶೇಕಡಾ ಹೆಚ್ಚಿಸಬೇಕಾಗಿ ಬರಲಿದೆಯೆಂದು ಕೇರಳದ ಜ್ಯುವೆಲ್ಲರಿ ವ್ಯಾಪಾರಿಗಳು ಹೇಳುತ್ತಿದ್ದಾರೆ. ಹಾಗಾ ದಲ್ಲಿ ಗ್ರಾಹಕರು ಚಿನ್ನಾಭರಣಗಳನ್ನು ಖರೀದಿಸುವ ಪ್ರಮಾಣ ಕಡಿಮೆಯಾಗ ಲಿದೆ. ಇದು ಜ್ಯುವೆಲ್ಲರಿ ವಲಯವನ್ನು ಸಂದಿಗ್ಧತೆಯಲ್ಲಿ ಸಿಲುಕಿಸಲಿದೆ. ಲಕ್ಷಾಂ ತರ ಮಂದಿ ಕೆಲಸ ನಿರ್ವಹಿಸುವ ವಲಯವನ್ನು ಸಂದಿಗ್ಧತೆಯಲ್ಲಿ ಸಿಲುಕಿಸಕೂಡದು ಎಂದು ವ್ಯಾಪಾರಿಗಳು ಒತ್ತಾಯಿಸುತ್ತಿದ್ದಾರೆ.
ಚಿನ್ನ ಖರೀದಿಸುವುದನ್ನು ಒಂದು ವರ್ಷಕ್ಕೆ ನಿಲ್ಲಿಸಬೇಕೆಂದು ಪ್ರಧಾನ ಮಂತ್ರಿ ನರೇಂದ್ರಮೋದಿ ಆಗ್ರಹಪಟ್ಟಿದ್ದರು. ಅದರ ಬೆನ್ನಲ್ಲೇ ಆಮದು ಸುಂಕವನ್ನು ಇಮ್ಮಡಿಗಿಂ ತಲೂ ಹೆಚ್ಚಿಸಲಾಗಿದೆ. ಆದರೆ ಖರೀದಿಸುವುದನ್ನು ನಿಲ್ಲಿಸುವುದರ ಬದಲು ಆಂತರಿಕ ಚಿನ್ನವನ್ನು ಉಪಯೋಗಿಸುವುದು ಸೂಕ್ತವೆಂದು ಜ್ಯುವೆಲ್ಲರಿ ವ್ಯಾಪಾರಿಗಳು ಅಭಿಪ್ರಾ ಯಪಡುತ್ತಿದ್ದಾರೆ. ಚಿನ್ನದ ಆಮದು ಸುಂಕ ಹೆಚ್ಚಿಸಿದರೆ ಕಳ್ಳಸಾಗಾಟ ಹೆಚ್ಚಲು ಕಾರಣವಾಗಲಿದೆಯೆಂದು ಅವರು ತಿಳಿಸುತ್ತಿದ್ದಾರೆ.







