ಮಳೆ: ಕೀಯೂರಿನಲ್ಲಿ ಮನೆ ಕುಸಿತ; ಕುಟುಂಬ ಅದೃಷ್ಟವಶಾತ್ ಅಪಾಯದಿಂದ ಪಾರು

ಕಾಸರಗೋಡು:  ತೀವ್ರ ಮಳೆ ಸುರಿಯುತ್ತಿದ್ದಂತೆ  ಹೆಂಚಿನ ಮನೆಯೊಂದು ಕುಸಿದುಬಿದ್ದ ಘಟನೆ ಇಂದು ಮುಂಜಾನ್ಗೆ ಕೀಯೂರಿನಲ್ಲಿ ಸಂಭವಿಸಿದೆ. ಈ ವೇಳೆ  ಮನೆಯೊಳಗೆ ನಿದ್ರಿಸುತ್ತಿದ್ದ  ರೋಗಿ ಸಹಿತ ೫ ಮಂದಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಇಂದು ಮುಂಜಾನೆ ೪ ಗಂಟೆ ವೇಳೆ ದುರ್ಘಟನೆ ಸಂಭವಿಸಿದೆ.  ನಿದ್ದೆಯಲ್ಲಿದ್ದಾಗ ಮನೆಯ ಮೇಲ್ಛಾವಣಿ ಕುಸಿಯುವ ಸದ್ದು ಕೇಳಿದ್ದು, ಕೂಡಲೇ ಕುಟುಂಬ  ಹೊರಗೆ ಓಡಿದ್ದು ಇದರಿಂದ ಅಪಾಯದಿಂದ ಪಾರಾಗಿದ್ದಾರೆ.  ಕೀಯೂರು ಕಡಪ್ಪುರ ಶ್ರೀ ಸುಬ್ರಹ್ಮಣ್ಯ ಮಠ ಸಮೀಪದ ಕುಂಞಿಕೃಷ್ಣನ್ ಎಂಬವರ ಮನೆ ಕುಸಿದು ಬಿದ್ದಿದೆ.  ಈ ವೇಳೆ ಮನೆಯಲ್ಲಿ ಕುಂಞಿಕೃಷ್ಣನ್, ಇವರ ಪತ್ನಿ ಶಾರಿಕ, ಹಾಸಿಗೆ ಹಿಡಿದಿರುವ ರೋಗಿಯಾದ ಸಹೋದರ ಶಾಜಿ, ಮಕ್ಕಳಾದ ಸಚ್ಚು, ಕಿಚ್ಚು ಎಂಬಿವರಿದ್ದರು. ಘಟನೆ ಮಾಹಿತಿ ಲಭಿಸಿ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ. ಕುಟುಂಬವನ್ನು ಬೇರೆಡೆಗೆ ಸ್ಥಳಾಂತರಿಸಲಿರುವ ಕ್ರಮ ಆರಂಭಿಸಲಾಗಿದೆ.

RELATED NEWS

You cannot copy contents of this page