ಕೊಲೆ ಪ್ರಕರಣದ ಆರೋಪಿ ಸಹಿತ ಇಬ್ಬರು ಎಂಡಿಎಂಎ ಸಾಗಾಟ ವೇಳೆ ಸೆರೆ

ಮುಳ್ಳೇರಿಯ: ಎಂಡಿಎಂಎ ಸಾಗಾಟ ಪ್ರಕರಣದಲ್ಲಿ ಇಬ್ಬರನ್ನು ಸೆರೆ ಹಿಡಿಯಲಾಗಿದ್ದು, ಇವರಲ್ಲಿ ಓರ್ವ ಕೊಲೆ ಪ್ರಕರಣದ ಆರೋಪಿಯೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಮುಂಜಾನೆ 5.30 ವೇಳೆ ಆದೂರು ಸಂಕದ ಬಳಿ ನಾರ್ಕೋಟಿಕ್ ಡಾನ್ಸಾಪ್ ತಂಡ ಹಾಗೂ ಪೊಲೀಸರು ನಡೆಸಿದ ತಪಾಸಣೆ ವೇಳೆ  ಸ್ಕೂಟಿಯಲ್ಲಿ ಇಬ್ಬರು ಮಾದಕ ಪದಾರ್ಥ ಸಾಗಿಸುತ್ತಿರುವ ಬಗ್ಗೆ ತಿಳಿದು ಬಂದಿತ್ತು. ಇದರಿಂದ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು 18 ಗ್ರಾಂ ಎಂಡಿಎಂಎ ವಶಪಡಿಸಿ ಆರೋಪಿಗಳನ್ನು ಕಸ್ಟಡಿಗೆ ತೆಗೆದಿದ್ದಾರೆ. ಬೇಕೂರು ನಿವಾಸಿ ರಿಯಾಸ್, ನೆಲ್ಲಿಕಟ್ಟೆ ಚೂರಿಮೂಲೆ ನಿವಾಸಿ ರಫೀಕ್ ಸೆರೆಯಾದವರೆಂದು ಪೊಲೀಸರು ತಿಳಿಸಿದ್ದಾರೆ. ಇವರಲ್ಲಿ ಬೇಕೂರು ನಿವಾಸಿ ರಿಯಾಸ್ 2019 ಜೂನ್ 23ರಂದು ಉಪ್ಪಳ ಬಳಿಯ ಸೋಂಕಾಲ್ ನಿವಾಸಿ ಅಲ್ತಾಫ್ (55) ಎಂಬವರನ್ನು ಅಪಹರಿಸಿ ಆಕ್ರಮಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಆ ಬಳಿಕ ಅಲ್ತಾಫ್ ಮೃತಪಟ್ಟಿದ್ದಾರೆ. ಈ ಪ್ರಕರಣವಲ್ಲದೆ ಈತನ ವಿರುದ್ಧ ಕರ್ನಾಟಕದಲ್ಲೂ ಮಾದಕ ಪದಾರ್ಥ ಪ್ರಕರಣ ಕೇಸು ದಾಖಲಾಗಿದೆ. ನೆಲ್ಲಿಕಟ್ಟೆಯ ಶಫೀಕ್ ವಿರುದ್ಧ ಕೂಡಾ ಮಾದಕ ಪದಾರ್ಥ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page