ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಉತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆಯಲಿರುವ ೫ನೇ ವರ್ಷದ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಕನ್ನಡ ಸಂಸ್ಕೃತಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಅಂತಿಮ ರೂಪುರೇಷೆ ಸಭೆ ಕುಡಾಲುಮೆರ್ಕಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು. ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಒಮಾನ್ ಘಟಕ ಅಧ್ಯಕ್ಷ ಅಬೂಬಕ್ಕರ್ ರಾಯಲ್ ಬೊಳ್ಳಾರ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಸಭೆಯಲ್ಲಿ ಜಿ.ಪಂ ಸದಸ್ಯ, ಸ್ವಾಗತ ಸಮಿತಿ ಅಧ್ಯಕ್ಷ ಸೋಮಶೇಖರ ಜೆ.ಎಸ್. ಅಧ್ಯಕ್ಷತೆ ವಹಿಸಿದರು.
ಶಾಲಾ ವ್ಯವಸ್ಥಾಪಕ ಬಿ.ಎ. ಖಾದರ್ ಹಾಜಿ, ಪ್ರಧಾನ ಸಂಚಾಲಕ ಅಶೋಕ ಭಂಡಾರಿ, ಸಂಘದ ಗೌರವಾಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ, ಸ್ವಾಗತ ಸಮಿತಿ ಉಪಾಧ್ಯಕ್ಷ ಬಿ.ಎ. ಬಶೀರ್, ಸಂಚಾಲಕ ಮುಹಮ್ಮದಲಿ ಬಿ.ಕೆ, ಆಹಾರ ಸಮಿತಿ ಅಧ್ಯಕ್ಷೆ ಶಶಿಕಲಾ ರೈ, ನ್ಯಾಯವಾದಿ ಥೋಮಸ್ ಡಿ’ ಸೋಜಾ, ಸಾಂಸ್ಕ Èತಿಕ ಸಮಿತಿ ಸಂಚಾಲಕ ಎಸ್.ಕೆ. ಬಾಲಕೃಷ್ಣ, ಗಂಗಾಧರ ಕೆ., ಅಚ್ಚುತ ಚೇವಾರ್, ಮುಹಮ್ಮದ್ ಕುಂಞ, ಪುಷ್ಪಾ ಕಮಲಾಕ್ಷ ಮಾತನಾಡಿದರು. ಉತ್ಸವದ ಅಂತಿಮ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಯಿತು. ಸಂಘದ ಅಧ್ಯಕ್ಷ ರವಿ ನಾಯ್ಕಾಪು ಸ್ವಾಗತಿಸಿ, ಕೋಶಾಧಿಕಾರಿ ಶ್ರೀಕಾಂತ್ ನೆಟ್ಟಣಿಗೆ ವಂದಿಸಿದರು. ಇದೇ ತಿಂಗಳ ೧೬ ರಂದು ಕುಡಾಲುಮೆರ್ಕಳ ಅನುದಾನಿತ ಕಿ.ಪ್ರಾ. ಶಾಲೆಯಲ್ಲಿ ದತ್ತಿನಿಧಿ ಪ್ರಶಸ್ತಿ ಸಮಾರಂಭ – ಸಂಸ್ಕೃತಿ ಉತ್ಸವ ನಡೆಯಲಿದ್ದು, ಸಚಿವಾದಿ ಗಣ್ಯ ವ್ಯಕ್ತಿಗಳು, ಕರ್ನಾಟಕದ ಹಿರಿಯ ಪತ್ರಕರ್ತರ ಸಹಿತ ವಿವಿಧ ವಲಯಗಳ ಪ್ರಮುಖರು ಭಾಗವಹಿಸುವರು. ಪ್ರಮುಖ ತಂಡಗಳ ಸಾಂಸ್ಕೃತಿಕ ಪ್ರದರ್ಶನ ಇರುವುದು.

You cannot copy contents of this page