ಉಪ್ಪಳ: ಬೀದಿ ನಾಯಿಗಳ ಕಾಟ ಮಿತಿಮೀರಿರುವುದಾಗಿ ಸ್ಥಳೀಯರು ದೂರಿದ್ದಾರೆ. ಉಪ್ಪಳ ಪೇಟೆ ಹಾಗೂ ಒಳ ಪ್ರದೇಶದಲ್ಲಿ ದಿನನಿತ್ಯ ಬೀದಿ ನಾಯಿಗಳು ಹಿಂಡುಹಿಂಡಾಗಿ ಅಲೆದಾಡುತ್ತಿದ್ದು, ಸಾರ್ವಜನಿಕರಿಗೆ ಭೀತಿಯೊಡ್ಡುತ್ತಿವೆ. ಪತ್ವಾಡಿ ರಸ್ತೆಯ ಮಜಲು ಎಂಬಲ್ಲಿ ಹಲವಾರು ದಿನಗಳಿಂದ 15ರಷ್ಟು ಬೀದಿನಾಯಿಗಳು ಸವಾರಿ ನಡೆಸುತ್ತಿವೆ. ಈ ಪರಿಸರದಲ್ಲಿ ದಿನನಿತ್ಯ ಶಾಲಾ, ಕಾಲೇಜು, ಮದ್ರಸಗಳಿಗೆ ಮಕ್ಕಳು ಸಹಿತ ಹಲವಾರು ಮಂದಿ ನಡೆದುಕೊಂಡು ಹೋಗುತ್ತಿದ್ದಾರೆ. ಅಲ್ಲದೆ ವಾಹನ ಸವಾರರನ್ನು ಕೂಡಾ ಇವು ಬೆನ್ನಟ್ಟುತ್ತಿವೆ. ಈ ಪರಿಸರದ ರಸ್ತೆ ಬದಿಯಲ್ಲಿ ರಾತ್ರಿ ಹೊತ್ತು ತ್ಯಾಜ್ಯಗಳನ್ನು ತಂದೆಸೆಯುತ್ತಿದ್ದು, ಇದನ್ನು ತಿನ್ನಲು ನಾಯಿ ಗಳು ತಲುಪುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಪಂ. ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಹಾಗೂ ತ್ಯಾಜ್ಯ ಉಪೇಕ್ಷಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.






