ಏಳನೇ ತರಗತಿ ವಿದ್ಯಾರ್ಥಿ ಕ್ವಾರ್ಟರ್ಸ್‌ನೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪೆರ್ಲ: ಏಳನೇ ತರಗತಿ ವಿದ್ಯಾರ್ಥಿ ಕ್ವಾರ್ಟರ್ಸ್‌ನೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬೆದ್ರಂಪಳ್ಳದಲ್ಲಿ ವಾಸಿಸುವ ಪ್ರಕಾಶನ್-ಸುನಿತಾ ದಂಪತಿಯ ಪುತ್ರ ಶ್ರೀಹರಿ (12) ಮೃತಪಟ್ಟ ವಿದ್ಯಾರ್ಥಿಯಾಗಿದ್ದಾನೆ. ಪ್ರಕಾಶನ್ ಹಾಗೂ ಕುಟುಂಬ ಪತ್ತನಂತಿಟ್ಟ ಅಡೂರು ನಿವಾಸಿಗಳಾ ಗಿದ್ದಾರೆ.  ಬೆದ್ರಂಪಳ್ಳದ ಅಬ್ದುಲ್ಲ ಕುಂಞಿ ಎಂಬವರ ರಬ್ಬರ್ ತೋಟ ದಲ್ಲಿ ಪ್ರಕಾಶನ್ ಹಾಗೂ ಪತ್ನಿ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿದ್ದಾರೆ.  ಶ್ರೀಹರಿಯ ಹೊರತು  ಪ್ರೀತು, ನಿಹಾರಿಕ ಎಂಬೀ ಮತ್ತಿಬ್ಬರು ಮಕ್ಕಳು ಈ ದಂಪತಿಗಿದ್ದಾರೆ. ನಿನ್ನೆ ಮಧ್ಯಾಹ್ನ ತಂದೆ-ತಾಯಿ ಸಾಮಗ್ರಿ ತರಲೆಂದು ಅಂಗಡಿಗೆ ಹೋಗುವ ವೇಳೆ ಮೂವರು ಮಕ್ಕಳು ಕ್ವಾರ್ಟಸ್‌ನೊಳಗೆ ಆಟ ವಾಡುತ್ತಿದ್ದರು.  ತಂದೆ-ತಾಯಿ ಮರಳಿ ಬಂದಾಗ ಬಾಗಿಲು ಒಳಗಿನಿಂದ ಮುಚ್ಚಲಾಗಿತ್ತು.   ಬಾಗಿಲು ಬಡಿದರೂ ತೆರೆಯದ ಹಿನ್ನೆಲೆಯಲ್ಲಿ  ಬಾಗಿಲು ಮುರಿದು  ಪ್ರವೇಶಿಸಿ ನೋಡಿದಾಗ ಶ್ರೀಹರಿ ನೇಣುಬಿಗಿದು ಸಾವನ್ನಪ್ಪಿದ  ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಮೃತದೇಹವನ್ನು ಕಾಸರಗೋಡು  ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಗೊಳಪಡಿಸಲಾಯಿತು.

ಮೃತ ಶ್ರೀಹರಿ ಬಣ್ಪುತ್ತಡ್ಕ ಎಯುಪಿ ಶಾಲೆಯ ವಿದ್ಯಾರ್ಥಿ ಯಾಗಿದ್ದಾನೆ.

You cannot copy contents of this page