ಕಾಸರಗೋಡಿನಲ್ಲಿ ನಾಳೆ ಕನ್ನಡ ಪತ್ರಿಕಾ ದಿನಾಚರಣೆ

ಕಾಸರಗೋಡು: ಕಾಸರಗೋಡು ಕೋಟೆಕಣಿ ರಾಮನಗರದ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ವತಿಯಿಂದ ನಾಳೆ ಕನ್ನಡ ಪತ್ರಿಕಾ ದಿನಾಚರಣೆ ನಡೆಯಲಿದೆ. ಕೋಟೆಕಣಿ ಶ್ರೀ ರಾಮನಾಥ ಸಾಂಸ್ಕೃತಿಕ ಭವನದಲ್ಲಿ ಸಂಜೆ 5 ಗಂಟೆಗೆ ನಡೆಯುವ ಈ ಕಾರ್ಯಕ್ರ ಮವನ್ನು ಗೀತಾ ಪ್ರಕಾಶನದ ಸಂಪಾದಕ ಕೆ.ವಿ.ರಮೇಶ್ ಉದ್ಘಾಟಿಸುವರು.  ಹಿರಿಯ ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯ ತ್ತಡ್ಕ ಅಧ್ಯಕ್ಷತೆ ವಹಿಸುವರು. ಕೆಸಿಎನ್ ಚಾನೆಲ್‌ನ  ನಿರ್ದೇಶಕ ಪುರುಷೋತ್ತಮ ನಾಕ್ ಸಹಿತ ಹಲವರು ಉಪಸ್ಥಿತರಿರುವರು.

ಈ ವೇಳೆ  ಕಾಸರಗೋಡು ಹೊಸ ಬಸ್ ನಿಲ್ದಾಣದ ವೈಶಾಲಿ ಬುಕ್ ಸೆಂಟರ್‌ನ ಪತ್ರಿಕಾ ವಿತರಕ ವಿಶ್ವಾಸ್ ನುಳ್ಳಿಪ್ಪಾಡಿ ಅವರಿಗೆ ಪತ್ರಿಕಾ ಗೌರವಾರ್ಪಣೆ ಮಾಡಲಾಗುವುದು. ಕನ್ನಡಾಭಿಮಾ ನಿಗಳು, ಪತ್ರಕರ್ತರು ಸಹಿತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಬೇಕಾಗಿ ಸಂಬಂಧಪಟ್ಟ ವರು ವಿನಂತಿಸಿದ್ದಾರೆ.

RELATED NEWS

You cannot copy contents of this page