ಉಪ್ಪಳ: ಸಮಸ್ತ ಕೇರಳ ಜಂಇಯತ್ತುಲ್ ಉಲಮ ಪ್ರಧಾನ ಕಾರ್ಯದರ್ಶಿ ಕೊಯ್ಯೋಡ್ ಪಿ.ಪಿ. ಉಮ್ಮರ್ ಮುಸ್ಲಿಯಾರ್ ಉಪ್ಪಳ ವಲಯ ಸಂಯುಕ್ತ ಜಮಾಯತ್ ಖಾಝಿಯಾಗಿ ಅಧಿಕಾರ ಸ್ವೀಕರಿಸುವರು. ಪದಗ್ರಹಣ ಕಾರ್ಯಕ್ರಮ ನಾಳೆ ಬೆಳಿಗ್ಗೆ 1೦ ಗಂಟೆಗೆ ಅಹ್ಲೆ ಸುನ್ನತ್ ಹನಫಿ ಜಾಮಿಅ ಮಸೀದಿ ಅಂಗಣದ ಕೆ. ಆಲಿಕುಟ್ಟಿ ಉಸ್ತಾದ್ ನಗರದಲ್ಲಿ ನಡೆಯಲಿದೆ.
ಸಮಸ್ತ ಅಧ್ಯಕ್ಷ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್, ಸಂಯುಕ್ತ ಜಮಾಯತ್ ಗೌರವಾಧ್ಯಕ್ಷ ಕೆ.ಎಸ್ ಅಲಿ ತಂಙಳ್ ಕುಂಬೋಳ್, ಪಾಣಕ್ಕಾಡ್ ಸಯ್ಯೀದ್ ಅಬ್ಬಾಸಲಿ ಶಿಹಾಬ್ ತಂಙಳ್, ಸಯ್ಯೀದ್ ಎಂ.ಎಸ್. ತಂಙಳ್ ಸಹಿತ ಹಲವು ಗಣ್ಯರು ಭಾಗವಹಿಸುವರು. ಈ ಬಗ್ಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಸಿರಾಜುದ್ದೀನ್ ಫೈಸಿ ಚೇರಾಲ್, ಟಿ.ಎ. ಮೂಸ ಪತ್ವಾಡಿ, ಅಬ್ದುಲ್ ಮಜೀದ್ ದಾರಿಮಿ, ಉಮ್ಮರ್, ಅಬ್ದುಲ್ ಲತೀಫ್ ಅರಬಿ, ಅಬ್ದುಲ್ ಜಬ್ಬಾರ್ ಪಳ್ಳಂ ಭಾಗವಹಿಸಿದರು.




