ಕಾಸರಗೋಡು: ಪ್ರವಾಸಕ್ಕೆ ತೆರಳಬೇಕಾಗಿದ್ದ ಟೂರಿಸ್ಟ್ ಬಸ್ಗಳನ್ನು ಎಂವಿಡಿ ತಡೆ ಹಿಡಿದರು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರವಾಸ ಮೊಟಕಾಗಬಹುದೆಂಬ ಸ್ಥಿತಿಗೆ ತಲುಪಿದಾಗ ಜನಪ್ರತಿನಿಧಿಗಳು, ಶಾಸಕ ಮಧ್ಯ ಪ್ರವೇಶಿಸಿ ಸಮಸ್ಯೆಗೆ ತುರ್ತು ಪರಿಹಾರ ಕಂಡುಕೊಂಡರು. ನಿನ್ನೆ ಮಧ್ಯಾಹ್ನ ವೆಳ್ಳರಿಕುಂಡ್ನಲ್ಲಿ ನಾಟಕೀಯ ಘಟನೆಗಳು ಜರಗಿದೆ. ಸೈಂಟ್ ಜುಡ್ಸ್ ಹೈಯರ್ ಸೆಕೆಂಡರಿ ಶಾಲೆಯ 1೦೦ರಷ್ಟು ವಿದ್ಯಾರ್ಥಿಗಳೊಂ ದಿಗೆ ಅಧ್ಯಾಪಕರು ಕರ್ನಾಟಕಕ್ಕೆ ಪ್ರವಾಸ ತೆರಳಲು ಯೋಜನೆ ಹಾಕಿ ದ್ದರು. ಇದಕ್ಕಾಗಿ ಮಿನಿ ಬಸ್ ಹಾಗೂ ಟೂರಿಸ್ಟ್ ಬಸ್ಗಳ ದಾಖಲೆಗಳು ಹಾಗೂ ಇತರ ವಿವರಗಳನ್ನು ಕಳೆದ ವಾರ ಆರ್ಟಿಒ ಅಧಿಕಾರಿಗಳಿಗೆ ನೀಡಿದ್ದರು. ಅವರು ಅನುಮತಿ ನೀಡಿರುವುದಾಗಿ ಶಾಲಾ ಅಧಿಕಾರಿಗಳು ತಿಳಿಸುತ್ತಾರೆ. ಚಿಕ್ಕಮಗಳೂರು, ಮೈಸೂರು ಮೊದಲಾದ ಸ್ಥಳಗಳಿಗೆ ಪ್ರವಾಸ ಉದ್ದೇಶಿಸಲಾಗಿತ್ತು. ನಿನ್ನೆ ಮಧ್ಯಾಹ್ನ 1 ಗಂಟೆ ವೇಳೆಗೆ ಶಾಲೆಯಿಂದ ಪ್ರಯಾಣ ಹೊರಡಲು ತೀರ್ಮಾನಿಸಲಾಗಿತ್ತು. ಅದರನುಸಾರ ಮಧ್ಯಾಹ್ನ ವಿದ್ಯಾರ್ಥಿಗಳು ಹಾಗೂ ಹೆತ್ತವರು ಶಾಲೆಗೆ ತಲುಪಿದರು. ಪ್ರಯಾಣ ಹೊರಡುವುದಕ್ಕೆ ನಿಮಿಷಗಳ ಮುಂಚಿತವಾಗಿ ಎಂವಿಡಿ ಅಧಿಕಾರಿಗಳು ಶಾಲೆಗೆ ತಲುಪಿದ್ದು, ಬಸ್ನ ಕಲರ್ಕೋಡ್ ಸರಿಯಿಲ್ಲವೆಂದು, ಮೋಡಿಫೈ ಮಾಡಿರುವುದಾಗಿಯೂ ಆರೋಪಿಸಿದರು. ಈ ವಾಹನಗಳಲ್ಲಿ ಪ್ರಯಾಣಕ್ಕೆ ಅವಕಾಶ ನೀಡುವುದಿಲ್ಲವೆಂದು ಆರ್ಟಿಒ ಶಾಲಾ ಅಧಿಕಾರಿಗಳಲ್ಲಿ ತಿಳಿಸಿದರು.
ಪ್ರಯಾಣ ಮೊಟಕಾಗುತ್ತದೆ ಎಂಬ ಹಂತಕ್ಕೆ ತಲುಪುವಾಗ ಹೆತ್ತವರು, ಸ್ಥಳೀಯರು ಮಧ್ಯ ಪ್ರವೇಶಿಸಿದರೂ ಎಂವಿಡಿ ಕಾನೂನು ಸಮಸ್ಯೆಗಳನ್ನು ಉಲ್ಲೇಖಿಸಿದರು. ಪ್ರಯಾಣಕ್ಕೆ ಅನುಮತಿ ನೀಡಲಾಗುವುದಿಲ್ಲವೆಂದು ಹಠ ಹಿಡಿದರು. ಬಳಿಕ ಹೆತ್ತವರು ಶಾಸಕ ಸಂದೀಪ್ ವಾರ್ಯರ್ರಲ್ಲಿ ವಿಷಯ ತಿಳಿಸಿದರು. ಎಂಎಲ್ಎ ಫೋನ್ನಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿದರು. ಕೊನೆಗೆ ಸತ್ಯಪ್ರತಿಜ್ಞೆ ಬರೆದು ನೀಡಿದ ಬಳಿಕ ಪ್ರಯಾಣಕ್ಕೆ ಅನುಮತಿ ನೀಡಲು ಆರ್ಟಿಒ ಅಧಿಕಾರಿಗಳು ಸಿದ್ಧರಾಗಿದ್ದಾರೆ. ಸಣ್ಣ ಮೊತ್ತದ ದಂಡವನ್ನು ಪಾವತಿಸಲು ನಿರ್ದೇಶಿಸಿದ್ದಾರೆ. ಸಂಜೆ ವೇಳೆಗೆ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಕರ್ನಾಟಕಕ್ಕೆ ಪ್ರಯಾಣ ಹೊರಟರು.






