ವಾನಂದೆ ಬಯಲು ಪ್ರದೇಶದಲ್ಲಿ ಕೈಗೆಟಕುವ ರೀತಿಯಲ್ಲಿ ವಿದ್ಯುತ್ ತಂತಿ: ಸ್ಥಳೀಯ ಕೃಷಿಕರಲ್ಲಿ ಭೀತಿ

ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ಶಿರಿಯ ವಾನಂದೆ ಬಯಲು ಪ್ರದೇಶದಲ್ಲಿ ಕೈಗೆಟುವ ರೀತಿಯಲ್ಲಿ ಹಾಗೂ ಹಳೆಯ ಕಾಲದ ವಿದ್ಯುತ್ ತಂತಿ ಆತಂಕವನ್ನುAಟುಮಾಡುತ್ತಿದೆ. ಶಿರಿಯ ಟ್ರಾನ್ಸ್ ಫಾರ್ಮರ್‌ನಿಂದ ಬಯಲು ಪ್ರದೇಶದಿಂದ ಹಾದು ಹೋದ ತಂತಿ ಕೈಗೆ ಎಟಕುವ ಸ್ಥಿತಿಯಲ್ಲಿದ್ದು, ಯಾವುದೇ ಕ್ಷಣದಲ್ಲಿ ತುಂಡಾಗಿ ಬೀಳುವ ಆತಂಕ ಕೃಷಿಕರನ್ನು ಕಾಡುತ್ತಿದೆ.
ಈ ಮೊದಲು ಈ ವಿದ್ಯುತ್ ತಂತಿ ಹಲವು ಬಾರಿ ಮುರಿದು ಬಿದ್ದು ಉದ್ಯೋಗಸ್ಥರು ತಲುಪಿ ದುರಸ್ಥಿ ಮಾಡಿದ್ದರು. ಆದರೆ ಈ ತಂತಿಯನ್ನು ಬದಲಾಯಿಸಲು ಸ್ಥಳೀಯ ಕೃಷಿಕರು ಹಲವು ಬಾರಿ ತಿಳಿಸಿದರೂ ವಿದ್ಯುತ್ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೆ ಮುಂದಾಗುತ್ತಿಲ್ಲವೆAದು ದೂರಲಾಗಿದೆ. ಮಳೆ, ಗಾಳಿಗೆ ಯಾ ವುದೇ ಕ್ಷಣದಲ್ಲಿ ತುಂಡಾಗಿ ಬೀಳುವ ಸಾದ್ಯತೆ ಇದೆ. ಮುರಿದು ಬಿದ್ದು ದುರಂತ ಸಂಭವಿಸುವ ಮೊದಲೇ ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ತಂತಿಯನ್ನು ಬದಲಾಯಿಸುವ ಕ್ರಮಕೈಗೊಳ್ಳಬೇಕೆಂದು ಸ್ಥಳೀಯ ಕೃಷಿಕರು ಒತ್ತಾಯಿಸಿದ್ದಾರೆ.

You cannot copy contents of this page