ವ್ಯಕ್ತಿ ಮನೆಯೊಳಗೆ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪೆರ್ಲ:  ವ್ಯಕ್ತಿಯೊಬ್ಬರು ಮನೆಯ ಅಡುಗೆ ಕೋಣೆಯಲ್ಲಿ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಡ್ರೆ ವಾಣೀನಗರ ಅಜೆಕ್ಕಳಮೂಲೆ ಪೊಯ್ಯೆ ನಿವಾಸಿ ಕುಂಞಿರಾಮ ಮಣಿಯಾಣಿಯವರ ಪುತ್ರ ಸುರೇಶ್ ಮಣಿಯಾಣಿ (60) ಮೃತಪಟ್ಟ ವ್ಯಕ್ತಿ. ಶನಿವಾರ ಬೆಳಿಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆ ಮಧ್ಯೆ ಇವರು ಸಾವಿಗೀಡಾಗಿರುವುದಾಗಿ ಅಂ ದಾಜಿಸಲಾಗಿದೆ. ಇವರು ನೇಣುಬಿಗಿದು ಸಾವಿಗೆ ಶರಣಾಗಲು ಕಾರಣವೇನೆಂದು ತಿಳಿದುಬಂದಿಲ್ಲ. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತರು ಪತ್ನಿ ಸೀತಮ್ಮ, ಮಕ್ಕಳಾದ ರಾಜೇಶ್ವರಿ,ಸುಚಿತ್ರ, ಕೃಷ್ಣ ಕುಮಾರ್, ಅಳಿಯಂದಿರಾದ ಅಶೋಕ್, ವಿಜಯಕುಮಾರ್, ಸಹೋದರ ಸುಧಾಮ ಮಣಿ ಯಾಣಿ, ಸಹೋದರಿಯರಾದ ಚಂದ್ರಾವತಿ, ಸುಮತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page