ಮನೆಯಿಂದ ಹೊರ ಹೋದ ವ್ಯಕ್ತಿ ನಾಪತ್ತೆ

ವರ್ಕಾಡಿ: ಮನೆಯಿಂದ ಹೊರ ಹೋದ ವ್ಯಕ್ತಿ ನಾಪತ್ತೆಯಾದ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ. ಕೊಡ್ಲಮೊಗರು ಜೋಗಿಬೆಟ್ಟು ನಿವಾಸಿ ಲಿಂಗಪ್ಪ ಪೂಜಾರಿಯವರ ಪುತ್ರ ಕೋಟಿ ಜೆ. (39) ನಾಪತ್ತೆಯಾದವರು. ಈ ತಿಂಗಳ 10ರಂದು ಸಂಜೆ 6.30ಕ್ಕೆ ಮನೆಯಿಂದ ಹೊರ ಹೋಗಿದ್ದ ಇವರು ಆ ಬಳಿಕ ಮರಳದೆ ನಾಪತ್ತೆಯಾಗಿದ್ದಾರೆ. ಸಂಬಂಧಿಕರು  ವಿವಿಧ ಕಡೆಗಳಲ್ಲಿ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸಹೋದರ ಚೆನ್ನಯ್ಯ ಜೋಗಿಬೆಟ್ಟು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಕೇಸು ದಾಖಲಿಸಿದ ಪೊಲೀಸರು ತನಿಖೆ ಆರಂಭಿಸಿದ್ದು, ಇವರು ಪತ್ತೆಯಾದರೆ ಮಂಜೇಶ್ವರ ಠಾಣೆಗೆ ಮಾಹಿತಿ ನೀಡಲು ತಿಳಿಸಿದ್ದಾರೆ.

You cannot copy contents of this page