ಮಂಜೇಶ್ವರ: ಮಂಜೇಶ್ವರ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ಒ.ಪಿ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಇದನ್ನು ಪ್ರತಿಭಟಿಸಿ ಡಿಫಿ ಮಂಜೇಶ್ವರ ಬ್ಲೋಕ್ ಸಮಿತಿ ನೇತೃತ್ವದಲ್ಲಿ ತಾಲೂಕು ಕಚೇರಿ ಮಾರ್ಚ್ ನಡೆಸಲಾಯಿತು. ಡಿಫಿ ಜಿಲ್ಲಾಧ್ಯಕ್ಷ ಎಂ.ವಿ. ರತೀಶ್ ಉದ್ಘಾಟಿಸಿದರು. ಬ್ಲೋಕ್ ಉಪಾಧ್ಯಕ್ಷ ಮುಹಮ್ಮದ್ ನೌಶಾದ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜೊತೆ ಕಾರ್ಯದರ್ಶಿ ಸಾದಿಕ್ ಚೆರುಗೋಳಿ, ಬ್ಲೋಕ್ ಕೋಶಾಧಿಕಾರಿ ಮುಹಮ್ಮದ್ ಶಬೀರ್, ಉದಯ ಸಿ.ಎಚ್, ದೀಕ್ಷಿತ್ ಉಪ್ಪಳ, ವಿನಯ ಕುಮಾರ್ ಮಾತನಾಡಿದರು.ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಸೋಲಾರ್ ಇ.ವಿ. ಚಾರ್ಜಿಂಗ್ ಸ್ಟೇಶನ್ ಉದ್ಘಾಟನೆಕುಂಬಳೆ: ಸಹಕಾರಿ ವಲಯದ ರಾಜ್ಯದ ಮೊದಲ ಸೋಲಾರ್ ಇವಿ ಚಾರ್ಜಿಂಗ್ ಸ್ಟೇಶನ್ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ಸಚಿವ ಎನ್. ಶಂಸುದ್ದೀನ್ ಉದ್ಘಾಟಿಸಿದರು. ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸಿ ದರು. ಕಾರು, ಸ್ಕೂಟರ್, ಆಟೋ ರಿಕ್ಷಾ ಎಂಬಿವುಗಳನ್ನು ಇಲ್ಲಿ ಚಾರ್ಜ್ ಮಾಡಲು ಸಾಧ್ಯವಿದೆ. ಇದರ ಹೊರತಾಗಿ ಜಿಲ್ಲಾ ಸಹಕಾರಿ ಆಸ್ಪತ್ರೆಯ ಚೆಂಗಳ, ಮುಳ್ಳೇರಿಯ ಆಸ್ಪತ್ರೆಗಳಲ್ಲೂ ಸೋಲಾರ್ ಇ.ವಿ. ಚಾರ್ಜಿಂಗ್ ಸ್ಟೇಶನ್ ಸಜ್ಜುಗೊಳಿಸಲಾ ಗಿದೆ. ಆಸ್ಪತ್ರೆಯ ವಾಟರ್ ಚಾರ್ಜಿಂಗ್ ಸ್ಟೇಶನ್ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಉದ್ಘಾಟಿಸಿದರು. ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಸಹಿತ ಹಲವರು ಭಾಗವಹಿಸಿದರು.





