ಸಿಐಟಿಯು ಆಟೋ ಕಾರ್ಮಿಕರ  ಯೂನಿಯನ್‌ನಿಂದ ನಗರಸಭಾ ಮಾರ್ಚ್

ಕಾಸರಗೋಡು: ನಗರದ ನಾಯಕ್ಸ್ ರಸ್ತೆ ಸಹಿತ ನಗರಸಭಾ ವ್ಯಾಪ್ತಿಯ ಎಲ್ಲಾ ರಸ್ತೆಗಳನ್ನು ಸಂಚಾರಯೋಗ್ಯ ಗೊಳಿಸಬೇಕು, ಆಟೋರಿಕ್ಷಾಗಳಿಗೆ ನಿಲುಗಡೆ ಸೌಕರ್ಯ ಏರ್ಪಡಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಟೋ ಕಾರ್ಮಿಕರ ಯೂನಿಯನ್ ಸಿಐಟಿಯು ನಗರಸಭೆಗೆ ಮಾರ್ಚ್ ನಡೆಸಿತು. ಕಾಸರಗೋಡು ಡಿವಿಶನ್ ಸಮಿತಿ ನೇತೃತ್ವದಲ್ಲಿ ನಡೆದ ಮಾರ್ಚನ್ನು ಜಿಲ್ಲಾ ಜೊತೆ ಕಾರ್ಯದರ್ಶಿ ಎ.ಆರ್. ಧನ್ಯವಾದ್ ಉದ್ಘಾಟಿಸಿದರು. ರವಿ ಕೆ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಗಿರಿಕೃಷ್ಣನ್, ಶಾಫಿ ಚಾಲಕುನ್ನು, ಪಿ. ಕುಂಞಿರಾಮನ್, ಎನ್. ರಾಮನ್ ಮಾತನಾಡಿದರು. ವಿ. ರವೀಂದ್ರನ್ ಪೆರುಂಬಳ ಸ್ವಾಗತಿಸಿದರು.

You cannot copy contents of this page